ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಲ್ಡರ್ ಅಪಾರ್ಟ್ಮೆಂಟ್ ಹರಾಜಿಗಿಟ್ಟರೆ ಕೊಳ್ಳುವವರೇ ಇಲ್ಲ!

|
Google Oneindia Kannada News

ಬೆಂಗಳೂರು, ಆ. 21: ಕೊವಿಡ್ 19 ಆರ್ಥಿಕ ಸಂಕಷ್ಟದ ನಡುವೆ ಬೆಂಗಳೂರಿನ ವಸತಿ ಆಸ್ತಿಗಳ ಬೆಲೆ 2020ರ ತ್ರೈಮಾಸಿಕದಲ್ಲಿ ಇಳಿಕೆಯಾಗಿದೆ ಎಂಬ ವರದಿಯಿದೆ. ಈ ನಡುವೆ ಬಿಲ್ಡರ್ ಒಬ್ಬರ ಪ್ರಾಪರ್ಟಿ(ಅಪಾರ್ಟ್ಮೆಂಟ್) ಮಾರಾಟ ಮಾಡಲು ಯತ್ನಿಸಿದ ಸರ್ಕಾರಿ ಏಜೆನ್ಸಿಗೆ ಅಚ್ಚರಿ ಕಾದಿತ್ತು.

Recommended Video

ಪಬ್ ವಿಚಾರ CM ಹತ್ರ ಮಾತಾಡ್ತೀನಿ | Oneindia Kannada

ಮನೆ ಖರೀದಿದಾರರಿಗೆ ನಿಗದಿತ ವೇಳೆಯಲ್ಲಿ ಅಪಾರ್ಟ್ಮೆಂಟ್ ಒದಗಿಸಲು ಸಾಧ್ಯವಾಗದ ಬಿಲ್ಡರ್ ರೊಬ್ಬರ ಫ್ಲಾಟ್ ಹರಾಜಿಗೆ ಇಡಲಾಗಿತ್ತು. ಈ ಕುರಿತಂತೆ ಆಗಸ್ಟ್ 3ರಂದೇ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, ಗುರುವಾರದಂದು ಕಂದಾಯ ಇಲಾಖೆ ಅಧಿಕಾರಿಗಳು ನಿರೀಕ್ಷಿಸಿದಂತೆ ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲ, ಕೊನೆಗೆ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಸೇರಿ 8 ನಗರಗಳಲ್ಲಿ ವಸತಿ ಮಾರಾಟ 79% ಇಳಿಕೆಬೆಂಗಳೂರು ಸೇರಿ 8 ನಗರಗಳಲ್ಲಿ ವಸತಿ ಮಾರಾಟ 79% ಇಳಿಕೆ

ಇತ್ತೀಚಿನ ವರದಿ ಪ್ರಕಾರ, ಕಳೆದ ವರ್ಷ ಏಪ್ರಿಲ್ ಜೂನ್ ಅವಧಿಯಲ್ಲಿ 10, 251 ಯೂನಿಟ್(ಫ್ಲಾಟ್, ಪ್ಲಾಟ್, ನಿವೇಶನ, ಅಪಾರ್ಟ್ಮೆಂಟ್..ಇತ್ಯಾದಿ) ಮಾರಾಟವಾಗಿತ್ತು. ಈ ಬಾರಿ ಈ ಅವಧಿಯಲ್ಲಿ 2,776 ಮಾತ್ರ ಮಾರಾಟವಾಗಿದ್ದು, ಶೇ 73ರಷ್ಟು ಕುಸಿತ ಕಂಡಿದೆ. ಕೊವಿಡ್ 19 ಲಾಕ್ಡೌನ್ ನಿಂದ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗಿದೆ.

Bengaluru : No Bidders Found for The Auction of a Builders Property

ಈ ನಡುವೆ ಫ್ಲಾಟ್ ಮಾರಾಟಕ್ಕೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಯತ್ನಿಸಿದೆ. ದಕ್ಷಿಣ ಬೆಂಗಳೂರಿನ ಉತ್ತರಹಳ್ಳಿ ಬಳಿಯ ಗುಬ್ಬಲಾಳದಲ್ಲಿರುವ ಗೋಲ್ಡನ್ ಗೇಟ್ ಪ್ರಾಪರ್ಟಿಸ್ ನ ಫ್ಲಾಟ್ ಮಾರಾಟದ ಕಥೆ ಇದ್ದಾಗಿದೆ. ಹರಾಜಿಗಿಟ್ಟಿದ್ದ ಫ್ಲಾಟ್ ಬೆಲೆ 77 ಲಕ್ಷ ಎಂದು ನಿಗದಿ ಪಡಿಸಲಾಗಿತ್ತು. ಇದರಿಂದ ಬಂದ ಮೊತ್ತವನ್ನು ಎಸ್ ಅಪ್ರಮೇಯ ನಾಗರಾಜ ಎಂಬುವರಿಗೆ ನೀಡಲು ಪ್ರಾಧಿಕಾರ ಮುಂದಾಗಿತ್ತು.

ಬೆಂಗಳೂರು ದಕ್ಷಿಣ ವಲಯದ ವಿಶೇಷ ತಹಸೀಲ್ದಾರ್ ಎನ್ ಲಕ್ಷ್ಮಿ ಅವರ ಉಸ್ತುವಾರಿಯಲ್ಲಿ ನಡೆದ ಹರಾಜಿನಲ್ಲಿಅಪಾರ್ಟ್ಮೆಂಟ್ ನ ಎರಡನೇ ಮಹಡಿಯಲ್ಲಿರುವ ಫ್ಲಾಟ್ (ಸಂಖ್ಯೆ 1024) ಮಾರಾಟಕ್ಕಿಡಲಾಗಿತ್ತು.

ಕೋವಿಡ್-19 ಪರಿಣಾಮ: ಬೆಂಗಳೂರಿನ ವಸತಿ ಬೆಲೆ 3% ಇಳಿಕೆಕೋವಿಡ್-19 ಪರಿಣಾಮ: ಬೆಂಗಳೂರಿನ ವಸತಿ ಬೆಲೆ 3% ಇಳಿಕೆ

2015ರಲ್ಲಿ ಫ್ಲಾಟ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದ ನಾಗರಾಜ ಅವರು 2 ಬಿಎಚ್ ಕೆ ಫ್ಲಾಟ್ ಕೊಳ್ಳುವ ಕನಸು ಕೊಂಡಿದ್ದರು. ಆದರೆ, ಬಿಲ್ಡರ್ ನಿಗದಿತ ದಿನಾಂಕ ಅಕ್ಟೋಬರ್ 31, 2016ರಂದು ಫ್ಲಾಟ್ ಪೂರ್ಣಗೊಳಿಸಿ ನೀಡುವಲ್ಲಿ ವಿಫಲರಾಗಿದ್ದರು.

ನಾಗರಾಜ ಅವರು ಕರ್ನಾಟಕ ರೇರಾ ಕಾಯ್ದೆ ನೆರವು ಪಡೆದುಕೊಂಡು ಮಾರ್ಚ್ 2019ರಲ್ಲಿ ಆದೇಶ ಪಡೆದುಕೊಂಡರು. ಆದೇಶದ ಅನ್ವಯ ಬಿಲ್ಡರ್ ಮೊತ್ತವನ್ನು ರೀಫಂಡ್ ಮಾಡಬೇಕು. ಇದಕ್ಕೆ ಇಂದಿನ ಮಾರುಕಟ್ಟೆ ಮೌಲ್ಯದಂತೆ ಶೇ 10.7ರಷ್ಟು ಬಡ್ಡಿ ನೀಡಬೇಕು ಎಂದಿತ್ತು. ನಾಗರಾಜ ಅವರು ಫ್ಲಾಟ್ ಕೊಳ್ಳಲು 56 ಲಕ್ಷ ನೀಡಿದ್ದರು. ಇದರ ಅಂದಾಜು ಮೊತ್ತ 77 ಲಕ್ಷ ನಿಗದಿಪಡಿಸಿ ಹರಾಜಿಗಿಡಲಾಗಿತ್ತು. ಆದರೆ, ಹರಾಜು ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಮತ್ತೊಮ್ಮೆ ಹರಾಜು ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆಯಿದೆ.

English summary
No Bidders Found for The Auction of a Builder's Property carried by Real Estate Regulatory Authority-Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X