Bengaluru-Mysuru Expressway: 3 ಪಕ್ಷಗಳ ಮಧ್ಯ ಚುನಾವಣಾ ಯುದ್ಧಕ್ಕೆ ಕಾರಣವಾದ ಹೆದ್ದಾರಿ, ಪ್ರಚಾರದಲ್ಲಿ ಬಿಜೆಪಿ ಎಡವಿತೆ?

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ನೂತನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮಧ್ಯದ ರಾಜಕೀಯ ಯುದ್ಧಕ್ಕೆ ಕಾರಣವಾಗಿದೆ.

ಬೆಂಗಳೂರು, ಮಾರ್ಚ್ 20: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಯುದ್ಧಕ್ಕೆ ಮಾರ್ಚ್ 12ರಂದು ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಾಂದಿ ಹಾಡಿದಂತಿದೆ.

ಬೆಂಗಳೂರು ಮೈಸೂರು ಹೆದ್ದಾರಿಯನ್ನು ಈ ಎರಡು ನಗರಗಳ ಮಧ್ಯದಲ್ಲಿನ ಪ್ರಯಾಣದ ಸಮಯವನ್ನು 180 ರಿಂದ 75 ನಿಮಿಷಗಳಿಗೆ ಕಡಿತಗೊಳಿಸಲಿದೆ. ಜನರಿಗೆ ವೇಗದ ಪ್ರಯಾಣ ಒದಗಿಸಿದೆ. ಅಲ್ದಲೇ ಆರ್ಥಿಕ ಬೆಳವಣಿಗೆಗೆ ಉತ್ತೇಜನಕಾರಿಯಾಗಿದ್ದರೂ ಸದ್ಯ ರಾಜಕೀಯ ಹೋರಾಟಕ್ಕೆ ಮುನ್ನುಡಿ ಬರೆದಿದೆ.

Bengaluru-Mysuru Expressway Has Led To An Election War Between ruling party and opposition parties

ಹಳೆಯ ಮೈಸೂರು ಭಾಗದಲ್ಲಿ ಈ ಎಕ್ಸ್‌ಪ್ರೆಸ್‌ವೇ ರಸ್ತೆಯು ಒಟ್ಟು ಸುಮಾರು 8,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 118 ಕಿಲೋ ಮಿಟರ್ ಉದ್ದದ 10 ಲೇನ್ ನ ಈ ರಸ್ತೆ ರಾಮನಗರ, ಮಂಡ್ಯ, ಚನ್ನಪಟ್ಟಣ ಹಾದು ಹೋಗುತ್ತದೆ. ಇಲ್ಲಿ ಜೆಡಿಎಸ್ ಪ್ರಾಬಲ್ಯ, ಒಕ್ಕಲುತನ ಸಮುದಾಯ ಹೆಚ್ಚಿರುವ ಈ ಪ್ರದೇಶದಲ್ಲಿ ಬಿಜೆಪಿ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಸ್ಥಾಪನೆ ಬಗ್ಗೆ ಸಾಕಷ್ಟು ಪ್ರಚಾರ ನೀಡುತ್ತಿದೆ. ಆ ಮೂಲಕ ವಿಧಾನಸಭೆಯ ಚುನಾವಣೆಯ ಲಾಭ ಪಡೆದುಕೊಳ್ಳಲು ಮುಂದಾಗಿದೆ. ಇದು ಪ್ರಮುಖ ಪಕ್ಷಗಳ ಆರೋಪ ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿದೆ.

ಇದು ಅಭಿವೃದ್ಧಿಯ ಸಂಕೇತವೆನಿಸಿದರೂ ಎಕ್ಸ್‌ಪ್ರೆಸ್‌ವೇಯಲ್ಲಿ ಬಿಜೆಪಿಯ ಕೆಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಎಕ್ಸ್‌ಪ್ರೆಸ್‌ವೇ ನಲ್ಲಿ ಅತ್ಯಂತ ದೂರದಲ್ಲಿ ಟೋಲ್ ಶುಲ್ಕ ಸಂಗ್ರಹ ಆರಂಭಿಸಲಾಗಿದೆ. ಉದ್ಘಾಟನೆಯಾಗಿ ವಾರ ಕಳೆಯುವಷ್ಟರಲ್ಲಿ ಮಳೆಯಿಂದಾಗಿ ಹೆದ್ದಾರಿಯಲ್ಲಿ ಪ್ರವಾಹ ಸಮಸ್ಯೆ ಸೃಷ್ಟಿಯಾಗಿತ್ತು.

ಬಿಜೆಪಿಯನ್ನು ವಿಪಕ್ಷಗಳು ಪ್ರಶ್ನಿಸಲು ಕಾರಣಗಳು

ಇದರಿಂದ ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಪ್ರಮುಖ ಪಟ್ಟಣಗಳಿಗೆ ಹೋಗುವುದೇ ಸಮಸ್ಯೆಯಾಗಿತ್ತು. ಇಲ್ಲಿನ ಪ್ರವಾಹ ಇದೇ ಮೊದಲೇನಲ್ಲ. ಜೊತೆಗೆ ಎಕ್ಸ್‌ಪ್ರೆಸ್‌ವೇನಲ್ಲಿ ಸರ್ವೀಸ್‌ ರಸ್ತೆಯಲ್ಲಿ ಕೆಲಸ ಅಪೂರ್ಣವಾಗಿದ್ದರೂ, ತರಾತುರಿಯಲ್ಲಿ ಟೋಲ್ ಸಂಗ್ರಹ ಮುಂದಾಗಿದ್ದೇಕೆ ಎಂಬ ಅಂಶಗಳು ವಿಪಕ್ಷಗಳು ಬಿಜೆಪಿಯನ್ನು ಪ್ರಶ್ನಿಸಲು ಕಾರಣವಾಗಿವೆ.

Bengaluru-Mysuru Expressway Has Led To An Election War Between ruling party and opposition parties

ಬಿಜೆಪಿ ಮತ್ತು ಸಂಘ ಪರಿವಾರ ಸದಸ್ಯರು ಒಕ್ಕಲಿಗ ಸಮುದಾಯದ ಉರಿಗೌಡ ಮತ್ತು ನಂಜೇಗೌಡ ಹೆಸರು ಬಳಸಿ, ದ್ವಾರ ಬಾಗಿಲು/ಬ್ಯಾನರ್ ಹಾಕುವ ಮೂಲಕ ಪ್ರಧಾನಿಯನ್ನು ಆಹ್ವಾನಿಸಿದ್ದರು. ಈ ಇಬ್ಬರು ಟಿಪ್ಪುವಿನನ್ನು ಕೊಂದವರು ಎಂಬ ಹೇಳಿದ್ದರು. ಇದರಿಂದ ಜೆಡಿಎಸ್ ಕೂಡಾ ಹೆಚ್ಚು ಆಕ್ರೋಶಗೊಂಡಿತ್ತು.

ಬೆಂಗಳೂರು ಮೈಸೂರು ಎಕ್ಸಪ್ರೆಸ್ ವೇ ಯೋಜನೆಗೆ ಪ್ರಚಾರ ಕೊಡುವ ಪ್ರಯತ್ನದಲ್ಲಿ ಬಿಜೆಪಿ ನಿರ್ದಿಷ್ಟ ಸಮುದಾಯವೊಂದರ ನೋವಿಗೆ ಕಾರಣವಾಯಿತು. ಜೊತೆಗೆ ದಶಪಥ ಹೆದ್ದಾರಿ ಕೆಲಸ ಪೂರ್ಣಗೊಂಡಿಲ್ಲ ಎಂದು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದರು. ಹೀಗಾಗಿಯೇ ಯೋಜನೆಯ ಲಾಭಾಂಶ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗೆ ಪೂರಕ

ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು, ಪಕ್ಷಗಳು ಸುಖಾಸುಮ್ಮನೆ ಆರೋಪ ಮಾಡುತ್ತಿವೆ. ಈ ದಶಪಥ ಹೆದ್ದಾರಿ ಮೂಲ ಸೌಕರ್ಯವು ಕರ್ನಾಟಕ ರಾಜ್ಯದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ದೊಡ್ಡ ಕ್ರಾಂತಿ ಉಂಟುಮಾಡಲು ಸಿದ್ಧವಾಗಿದೆ. ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಪೂರಕವಾಗಿದೆ. ರಾಜ್ಯದ ಆರ್ಥಿಕ ಬೆಳವಣಿಗೆಗೂ ಪ್ರಚೋದನೆ ನೀಡುತ್ತದೆ. ರಾಮನಗರ, ಮಂಡ್ಯ ಭಾಗದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಹೀಗಿದ್ದರು ವಿರೋಧ ಪಕ್ಷಗಳು ಸುಳ್ಳು ಮಾಹಿತಿ ಹಬ್ಬಿಸುತ್ತಿವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಹಿರಿಯ ಕಾರ್ಯಕಾರಿ ಮತ್ತು ಮಾಜಿ ಸಚಿವ ಎಚ್‌.ಸಿ.ಮಹಾದೇವಪ್ಪ ಅವರು, ಬಿಜೆಪಿ ಎಕ್ಸ್‌ಪ್ರೆಸ್‌ವೇಯಿಂದ ಸಂಪೂರ್ಣ ಮನ್ನಣೆ ಪಡೆಯಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಈ ಯೋಜನೆಯನ್ನು ಮೂಲತಃ ಕಾಂಗ್ರೆಸ್ 2013 ರಿಂದ 2018 ರವರೆಗಿನ ಆಡಳಿತದಲ್ಲಿ ರೂಪಿಸಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವಧಿಯಲ್ಲೇ ಹೆದ್ದಾರಿಗಾಗಿ ಭೂಸ್ವಾಧೀನ ಆಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಜೆಡಿಎಸ್ ಕಾರ್ಯಕಾರಿ ಎಚ್‌.ಡಿ ಕುಮಾರಸ್ವಾಮಿ ಅವರು 6,000 ಕುಟುಂಬಗಳ ಜೀವನೋಪಾಯವನ್ನು ಹೋಟೆಲ್‌ಗಳು, ಪೆಟ್ರೋಲ್ ಪಂಪ್‌ಗಳು ಮತ್ತು ಬೆಲ್ಲದ ಘಟಕಗಳು ಸೇರಿದಂತೆ 2,600 ಸಣ್ಣ ಮತ್ತು ಮಧ್ಯಮ ವ್ಯವಹಾರಗಳಾಗಿ ಪೆಟ್ಟು ನೀಡಿದೆ. ಅವರೆಲ್ಲ ವ್ಯಾಪಾರದಿಂದ ವಂಚಿತರಾಗಿದ್ದಾರೆ. ಈ ದಶಪಥ ಹೆದ್ದಾರಿ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಜನರಿಗೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+