Namma Metro: ಸೈಬರ್ ಸುರಕ್ಷತೆಗಾಗಿ ಆಧುನಿಕ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆ, ಕಾರ್ಯವೇನು?
ಬೆಂಗಳೂರು, ಅಕ್ಟೋಬರ್ 25: ಸೈಬರ್ ಅಪರಾಧ ಚಟುವಟಿಕೆಗಳು ಸಾರಿಗೆ ಇಲಾಖೆಯನ್ನು ಬಿಟ್ಟಿಲ್ಲ. ಎಐ ತಂತ್ರಜ್ಞಾನಗಳು ಇರುವ ಇಂದಿನ ದಿನಮಾನಗಳಲ್ಲೂ ಸಾರಿಗೆ ಜಾಲ ಗುರಿ ಆಗಿಸಿಕೊಂಡು ಸೈಬರ್ ಕ್ರೈ, ಬೆದರಿಕೆಗಳನ್ನುನೀಡಲಾಗುತ್ತದೆ. ಈ ಮಧ್ಯೆ ಬೆಂಗಳೂರು ಮಟ್ರೋ ರೈಲು ನಿಗಮ (BMRCL) ಸೈಬರ್ ಮತ್ತು ಭೌತಿಕ ಭದ್ರತಾ ಮೂಲಸೌಕರ್ಯವನ್ನು ಬಲಪಡಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
BMRCL ನಗರದ ಬೈಯಪ್ಪನಹಳ್ಳಿಯಲ್ಲಿ ಅತ್ಯಾಧುನಿಕ ಭದ್ರತಾ ಕಾರ್ಯಾಚರಣೆ ಕೇಂದ್ರ (SOC) ಸ್ಥಾಪಿಸಲು ಮುಂದಾಗಿದೆ. ಈ ಕೇಂದ್ರವು ಮೆಟ್ರೋ ಜಾಲದಾದ್ಯಂತ ಸೈಬರ್ ವಿರುದ್ಧ ಹೋರಾಟಕ್ಕೆ ಪೂರಕವಾಗಲಿದೆ. ನೆಲದ ಮೇಲಿನ ಭದ್ರತಾ ಘಟನೆಗಳ ಮೇಲ್ವಿಚಾರಣೆ ಮತ್ತು ಪ್ರತಿಕ್ರಿಯಿಸಲು ಕೇಂದ್ರ ಕಮಾಂಡ್ ಹಬ್ ಆಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಲಿದೆ.

ಈ SOC ಕೇಂದ್ರವು ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿರುವ ಮತ್ತು ಕಾರಿಡಾರ್‌ಗಳಲ್ಲಿನ ಸಿಸಿಟಿವಿ ಕಣ್ಗಾವಲುಗಳ ಜೊತೆಗೆ ಸಂಯೋಜಿಸಲ್ಪಡುತ್ತದೆ. ಎಂಥಹದ್ದೆ ಸಂದರ್ಭದಲ್ಲಿ ಮೇಲ್ವಿಚಾರಣೆ ಮಾಡುತ್ತದೆ. ಎಲ್ಲಿಯಾದರೂ ಸಣ್ಣ ಭದ್ರತೆಗೆ ಧಕ್ಕೆ ಉಲ್ಲಂಘನೆ ಆದರೂ ತಕ್ಷಣವೇ ಅನುಮತಿಸುತ್ತದೆ. 24×7 ಕಾರ್ಯನಿರ್ವಹಣೆ ಮಾಡುತ್ತದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ನೆಟ್‌ವರ್ಕ್ ಸಮಗ್ರತೆ ಕಾಪಾಡಲು, ಜಾಲದ ಒಳನುಗ್ಗುವಿಕೆ ತಡೆಗೆ ಹಾಗೂ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸಲಿದೆ. ಸೈಬರ್ ಬೆದರಿಕೆ-ಪತ್ತೆ ಸಾಧನ ಹೊಂದಿದ್ದು, ಸೂಕ್ತವಾಗಿ ವಿಶ್ಲೇಷಣೆ ಮಾಡುತ್ತದೆ. ನಮ್ಮ ಮೆಟ್ರೋದಲ್ಲಿ ನಿತ್ಯ 8 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಮೂಲಸೌಕರ್ಯ ಒದಗಿಸುವ ಜೊತೆಗೆ ಸೈಬರ್ ಸುರಕ್ಷತೆ ನೀಡುವುದರ ಮೇಲೂ ಬಿಎಂಆರ್‌ಸಿಎಲ್ ಗಮನಹರಿಸಿದೆ. SOC ಬಲವಾದ ಕಣ್ಗಾವಲು ಖಚಿತಪಡಿಸಲಿದೆ.
ನಿತ್ಯ ಸಂಚಾರ ಮಾಡುವ ಸಹಸ್ರಾರು ಸಂಖ್ಯೆಯ ಜನರು ಪ್ರಯಾಣ ಸೇವೆ ಜೊತೆಗೆ ಉತ್ತಮ ಸೈಬರ್ ಸುರಕ್ಷತೆ ಬಯಸುತ್ತಾರೆ. ಇದು ಕಾರ್ಯಾಚರಣೆಯ ವಿಶ್ವಾಸಾರ್ಹತೆ ಹೆಚ್ಚಿಸುವ ಮಹತ್ವದ ಪ್ರಯತ್ನದ ಭಾಗವಾಗಿದೆ. ಸಾರ್ವಜನಿಕ ಸುರಕ್ಷತಾ ಕ್ರಮಗಳೊಂದಿಗೆ ತಂತ್ರಜ್ಞಾನ ಸಂಯೋಜಿಸುವ ಪ್ರಾಮುಖ್ಯತೆ ಮೇಲೆ ಈ ಎಸ್‌ಒಸಿ ಯೋಜನೆ ಹೆಚ್ಚು ಗಮನ ಹರಿಸುತ್ತದೆ.












Click it and Unblock the Notifications