Bengaluru Power Cut: ಇಂದು ಅರ್ಧ ಬೆಂಗಳೂರಿಗೆ ವಿದ್ಯುತ್ ಕಟ್, ಎಲ್ಲೆಲ್ಲಿ? ಏರಿಯಾಗಳ ವಿವರ
ಬೆಂಗಳೂರು, ಜೂನ್ 20: ನಗರದ ನಿವಾಸಿಗಳಿಗೆ ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ ನಿಯಮಿತ (BESCOM) ಕಹಿ ಸುದ್ದಿ ನೀಡಿದೆ. ಇಂದು ಜೂನ್ 20ರಂದು ಅರ್ಧ ಬೆಂಗಳೂರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಮಾಹಿತಿ ನೀಡಿದೆ.
ಹೌದು, ಬೆಸ್ಕಾಂ ವ್ಯಾಪ್ತಿಯಲ್ಲಿ ಗುರುವಾರ 'ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ'ದ ವತಿಯಿಂದ ನಗರದಲ್ಲಿನ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ. ಈ ಕಾರಣದಿಂದ ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಗರದ ಅನೇಕ ಬಡಾವಣೆಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಯಾವೆಲ್ಲ ಬಡಾವಣೆಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ಕೊರತೆ ಆಗಲಿದೆ, ಪ್ರದೇಶಗಳು ಯಾವುವು ಮಾಹಿತಿ ಇಲ್ಲಿದೆ.
ವಿದ್ಯುತ್ ಕಡಿತದ ಪ್ರದೇಶಗಳು
ಎಚ್.ಬಿ.ಆರ್. ಲೇಔಟ್ 4ನೇ ಬ್ಲಾಕ್, ಯಾಸಿನ್‌ನಗರ, ನಾಗವಾರ ಮುಖ್ಯರಸ್ತೆ, ನಾಗವಾರ, ವಿನೋಬನಗರ, ಥಣಿಸಂದ್ರ ಬಿ.ಎಂ.ಬಡಾವಣೆ, ಆರೋಗ್ಯಮ್ಮ ಬಡಾವಣೆ, ಕಾವೇರಿ ಗಾರ್ಡನ್, ಎನ್.ಜೆ.ಕೆ. ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಚ್, ಎಚ್.ಕೆ.ಬಿ.ಕೆ ಕಾಲೇಜ್, 4 ನೇ ಮತ್ತು 5 ನೇ ಎಚ್.ಬಿ.ಆರ್. ಲೇಔಚ್, ವಿದ್ಯಾಸಾಗರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್.ಎನ್.ಹಳ್ಳಿ, ಬಾಲಾಜಿ ಲೇಔಚ್, ರೈಲ್ವೆಮನ್ಸ್ ಬಡಾವಣೆ,

ಗೋವಿಂದಪುರ ಮುಖ್ಯರಸ್ತೆ, ಸಿ.ಎಂ.ಆರ್.ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಎಚ್‌ಬಿಆರ್ ಉಪಕೇಂದ್ರದ ವ್ಯಾಪ್ತಿಯ ಎಚ್‌ಬಿಆರ್ 1ನೇ, 2ನೇ, 3ನೇ ಬ್ಲಾಕ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣಾರೆಡ್ಡಿ ಬಡಾವಣೆ, ಟೀಚರ್ಸ್ ಕಾಲೊನಿ, ಶಿವರಾಮಯ್ಯ ಬಡಾವಣೆ, ರಿಂಗ್ ರಸ್ತೆ, ಸವೀರ್‍ಸ್ ರಸ್ತೆ, ಕೆ.ಕೆ.ಹಳ್ಳಿ ಗ್ರಾಮ, ಸುಭಾಷ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕೆ.ಕೆ.ಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ಬಿ.ಡಿ.ಎಸ್. ಲೇಔಚ್, ಸೆಂಟ್ರಲ್ ಎಕ್ಸೈಸ್, ಅಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, 80 ಅಡಿರಸ್ತೆ, ಸಿ.ಎಂ.ಆರ್. ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾರ್ಟರ್ಸ್.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲೂ ಕರೆಂಟ್ ಕಟ್
ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ವಿಜಯ ಬ್ಯಾಂಕ್, ಬ್ರಿಗೇಡ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಟಾಟಾ ಲೇನ್, ಆಸ್ಟಿನ್ ಟೌನ್ ಉಪಕೇಂದ್ರ ವ್ಯಾಪ್ತಿಯ ರಿಚ್ಮಂಡ್ ರಸ್ತೆ, ಸಿಲ್ವರ್ ಲೇಕ್ ಅಪಾರ್ಟ್‌ಮೆಂಚ್, ಕೆಎಸ್‌ಆರ್‌ಪಿ, ರತ್ನ ಅವೆನ್ಯೂ, ಹೇಮ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಠ್ಠಲ್ ಮಲ್ಯ ರಸ್ತೆ, ವುಡ್ ಸ್ಟ್ರೀಚ್, ಶಾಪರ್ಸ್ ಸ್ಟಾಪ್, ಮಗ್ರತ್ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಾನ್ವೆಂಟ್ ರಸ್ತೆ, ಉದಯ ಟಿವಿ, ಐಟಿಸಿ, ಪೋರ್ ಸೀಸನ್ ಅಪಾರ್ಟ್‌ಮೆಂಟ್,
ರುದ್ರಪ್ಪ ಗಾರ್ಡನ್, ಎಂಜಿ ಗಾರ್ಡನ್, ಆಸ್ಟಿನ್ ಟೌನ್, ನೀಲಸಂದ್ರ, ಬಜಾರ್ ಸ್ಟ್ರೀಟ್, ಆರ್.ಕೆ.ಗಾರ್ಡನ್, ಎಂಬೆಸ್ಸಿ ಕಚೇರಿ, ಗರುಡಾ ಮಾಲ್, ಆಂಜನೇಯ ಟೆಂಪಲ್ ಸ್ಟ್ರೀಟ್, ಅಶೋಕನಗರ, , ಮಾರ್ಕ್ ರಸ್ತೆ, ಬೋವೀ ಲೇನ್, ಮ್ಯೂಸಿಯಂ ರಸ್ತೆ, ಮದ್ರಾಸ್ ಬ್ಯಾಂಕ್ ರಸ್ತೆ,
ವನ್ನಾರ್ ಪೇಟೆ, ಕೆಎಸ್‌ಆರ್‌ಪಿ ಕ್ವಾರ್ಟರ್ಸ್, ಲಂಡನ್ ಸ್ಟ್ರೀಟ್, ಏರ್‌ಫೋರ್ಸ್, ಲೈಫ್ ಸ್ಟೈಲ್, ಕ್ಯಾಂಬಲ್ ರೋಡ್ ಜಂಕ್ಷನ್, ಬೆಂಗಳೂರು ಫರ್ನೀಚರ್, ರೋಸ್ ಗಾರ್ಡನ್, ವಿಕ್ಟೋರಿಯಾ ಲೇಔಟ್, ಪಾಮ್ ಗ್ರೋವ್ ರಸ್ತೆ, ಬಾಲಾಜಿ ಥಿಯೇಟರ್ ಮತ್ತಿತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications