Water Shutdown: ಬೆಂಗಳೂರಲ್ಲಿ ಮೇ 8 ರಂದು ಕಾವೇರಿ ನೀರು ಪೂರೈಕೆ ವ್ಯತ್ಯಯ: ಯಾವ ಏರಿಯಾಗಳಲ್ಲಿ? ತಿಳಿಯಿರಿ

ಬೆಂಗಳೂರು, ಮೇ 04: ಬೆಂಗಳೂರಿನಲ್ಲಿ ನೀರಿನ ಕೊರತೆ ಮಧ್ಯೆ ಕೆಲವು ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾಹಿತಿ ನೀಡಿದೆ.

ಹೌದು, ತುರ್ತು ಕಾಮಗಾರಿ ಕೈಗೊಳ್ಳಲಿರುವ ಪ್ರಯುಕ್ತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮೇ 08ರಂದು ಬುಧವಾರ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

Bengaluru Many Parts face Water Shutdown on May 8th Check Area Details

ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಕಾವೇರಿ 5ನೇ ಹಂತದ ಯೋಜನೆಯ ಸಿಪಿ 04 ಕಾಮಗಾರಿಯಡಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ವಿದ್ಯುತ್ ಸಂಬಂಧಿತ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂಬಂಧ ಮೇ 08 ರಂದು ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ 5 ಹಂತದ ಜಲರೇಚಕ ಯಂತ್ರಗಾರಗಳನ್ನು 01 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ.

ಈ ಮೇಲಿನ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವ ಪರಿಣಾಮ ಬೆಂಗಳೂರಿಗರು ಅವಲಂಬಿತವಾಗಿರುವ ಕಾವೇರಿ ಕುಡಿಯುವ ನೀರು ಸರಬರಾಜಿನಲ್ಲಿ ಶೇ.5ರಷ್ಟು ವ್ಯತ್ಯಯವಾಗಲಿದೆ. ಆದ್ದರಿಂದ ಕಾವೇರಿ 5ನೇ ಹಂತದ ಯೋಜನೆಯ ಹಾರೋಹಳ್ಳಿ ಮತ್ತು ತಾತಗುಣಿ ಪಂಪಿಂಗ್ ಘಟಕ ವ್ಯಾಪ್ತಿಯಿಂದ ಪೂರೈಕೆ ಆಗುತ್ತಿದ್ದ ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ತೊಂದರೆ ಆಗಲಿದೆ.

ಈ ಕುರಿತು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು, ನೀರು ಪೂರೈಕೆ ಕೊರತೆ ಎದುರಿಸುವ ನಗರವಾಸಿಗಳು ಜಲಮಂಡಳಿಗೆ ಸಹಕರಿಸಬೇಕು ಎಂದು ಪ್ರಟಕಣೆಯಲ್ಲಿ ಕೋರಿದ್ದಾರೆ.

Bengaluru Many Parts face Water Shutdown on May 8th Check Area Details

ಗ್ರೀನ್ ಸ್ಟಾರ್‌ ಚಾಲೇಂಜ್‌ಗೆ ವ್ಯಾಪಕ ಸ್ಪಂದನೆ

ನಗರದಲ್ಲಿ ನೀರು ಉಳಿತಾಯದ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವಂತಹ ಪಂಚಸೂತ್ರಗಳ ಅಳವಡಿಕೆಯ ಗ್ರೀನ್‌ ಸ್ಟಾರ್‌ ಚಾಲೆಂಜ್‌ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎರಡು ವಾರಗಳಲ್ಲಿ ಗ್ರೀನ್‌ ಸ್ಟಾರ್‌ ರೇಟಿಂಗ್‌ ಪಡೆಯಲು 629 ಕ್ಕೂ ಹೆಚ್ಚು ಕಟ್ಟಡಗಳು ಹಾಗೂ ಸಂಸ್ಥೆಗಳು ನೊಂದಣಿ ಮಾಡಿಕೊಂಡಿವೆ ಎಂದು BWSSB ತಿಳಿಸಿದೆ.

ನೀರು ಉಳಿಸಿ ಬೆಂಗಳೂರು ಬೆಳೆಸಿ ಕಾರ್ಯಕ್ರಮದ ಪ್ರಮುಖ ಭಾಗವಾದ ಗ್ರೀನ್‌ ಸ್ಟಾರ್‌ ಚಾಲೆಂಜ್‌ ನ ಪಂಚಸೂತ್ರಗಳನ್ನು ಅಳವಡಿಸಿಕೊಂಡು ನೀರು ಉಳಿತಾಯದ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕರೆ ನೀಡಿತ್ತು.

ಜಲಮಂಡಳಿಯ ಈ ಕರೆಗೆ ಬೆಂಗಳೂರು ಆಪಾರ್ಟ್‌ಮೆಂಟ್‌ ಫೆಡರೇಷನ್‌, ಎಫ್‌ಕೆಸಿಸಿಐ, ಪೀಣ್ಯ ಕೈಗಾರಿಕಾ ಸಂಘ, ಕ್ರೆಡೈ ಬೆಂಗಳೂರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು. ಗ್ರೀನ್‌ ಸ್ಟಾರ್‌ ರೇಟಿಂಗ್‌ ಪಡೆಯಲು ಒಟ್ಟು 416 ಅಪಾರ್ಟ್‌ಮೆಂಟ್‌ಗಳು, 68 ಸರ್ಕಾರ ಕಟ್ಟಡ ಮತ್ತು 52 ವಾಣಿಜ್ಯ ಕಟ್ಟಡಗಳು ಆಸಕ್ತಿ ವಹಿಸಿವೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಸದ್ಯ ಮಳೆಗಾಲ ಆರಂಭವಾಗಿದೆ. ರಾಜ್ಯದ ಇತರ ಕಡೆಗಳಲ್ಲೂ ಉತ್ತಮ ಮಳೆಯ ವಾತಾವರಣ ಕಂಡು ಬಂದಿದೆ. ಹೀಗಾಗಿ ಹಂತ ಹಂತವಾಗಿ ಜಲಾಶಯಗಳು ಭರ್ತಿಯಾದರೆ, ಬೆಂಗಳೂರಿಗೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಸದ್ಯ ಬೆಂಗಳೂರು ಜಲಮಂಡಳಿಯ ಕಾವೇರಿ ಐದನೇ ಹಂತದ ಯೋಜನೆ ಮೇಲೆ ಭವಿಷ್ಯ ಬೆಂಗಳೂರು ನೀರಿನ ಭರವಸೆ ಇಟ್ಟುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+