ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ದಾಳಿ
ಬೆಂಗಳೂರು, ನವೆಂಬರ್ 8: ಮದುವೆಗೆ ನಿರಾಕರಿಸಿದರು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನು ಆಕೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮುಂಬೈ ಮೂಲದ ಕವಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೋಹಿತ್ ಹಲ್ಲೆ ನಡೆಸಿದ ಆರೋಪಿ.
ಪತಿ ತೀರಿಕೊಂಡಿರುವ ಕವಿತಾಗೆ ಮದುವೆ ವೆಬ್ ಸೈಟ್ ವೊಂದರಲ್ಲಿ ಲೋಹಿತ್ ಪರಿಚಯವಾಗಿದ್ದ. ಆತ ಮದುವೆ ಪ್ರಸ್ತಾವ ಇಟ್ಟಿದ್ದರಿಂದ ಭೇಟಿಯಾಗಲು ಬೆಂಗಳೂರಿಗೆ ಆಕೆ ಬಂದಿದ್ದರು. ಆತನ ನೆರೆಹೊರೆಯವರು ತಿಳಿಸಿದ ಅಭಿಪ್ರಾಯ ಹಾಗೂ ನಿರುದ್ಯೋಗಿಯಾದ್ದ ಕಾರಣಕ್ಕೆ ಮದುವೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ, ವಿಶ್ವೇಶ್ವರಪುರಂ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ. ಮದುವೆ ನಿರಾಕರಿಸಿದ್ದರಿಂದ ಲೋಹಿತ್ ಈ ರೀತಿ ಹಿಂಸಾಚಾರ ನಡೆಸಿರುವುದು ಕೂಡ ಇದೇ ಮೊದಲೇನಲ್ಲ.
ಮುಂಬೈಗೆ ವಾಪಸಾಗಲು ಲಗೇಜ್ ಗಳನ್ನು ಸಿದ್ಧಪಡಿಸಿಕೊಳ್ಳುವಾಗ ಅಲ್ಲಿಗೆ ತೆರಳಿದ ಲೋಹಿತ್, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆ ನಂತರ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆಕೆಗೆ ಗಂಭೀರ ಗಾಯಗಳಾಗಿವೆ. ಸದ್ಯಕ್ಕೆ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications