ಮಕ್ಕಳನ್ನು ಕೊಂದು ಮೋರಿಗೆ ಶವ ಎಸೆದ ಪಾಪಿ ತಂದೆ
ಬೆಂಗಳೂರು, ಫೆಬ್ರವರಿ 22 : ಮಕ್ಕಳನ್ನು ಕೊಲೆ ಮಾಡಿ, ಶವಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಮೋರಿಗೆ ಎಸೆದಿದ್ದ ಪಾಪಿ ತಂದೆಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಮಕ್ಕಳು ಮಲೆಮಹದೇಶ್ವರ ಬೆಟ್ಟದಲ್ಲಿ ಕಾಣೆಯಾಗಿದ್ದಾರೆ ಎಂದು ಆರೋಪಿ ಪತ್ನಿಗೆ ಸುಳ್ಳು ಹೇಳಿದ್ದ.
ಬಂಧಿತ ಆರೋಪಿಯನ್ನು ಭುವನೇಶ್ವರ ನಗರ ನಿವಾಸಿ ಶಿವಕುಮಾರ್ ಎಂದು ಗುರುತಿಸಲಾಗಿದೆ. ಮಕ್ಕಳಾದ ಪವನ್ (9), ಸಿಂಚನ (3)ರನ್ನು ಹತ್ಯೆ ಮಾಡಿದ್ದ ಶಿವಕುಮಾರ್‌ನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. [ತಾತ ಮೊಮ್ಮಗನ ಕೊಲೆಗೈದವರ ಬಂಧನ]

ಕೊಲೆ ಮಾಡಿ ಮೋರಿಗೆ ಎಸೆದ : ಫೆಬ್ರವರಿ 20ರಂದು ಮಕ್ಕಳಿಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ, ಶವಗಳನ್ನು ಗೋಣಿಚೀಲದಲ್ಲಿ ಕಟ್ಟಿ ಮೋರಿಗೆ ಎಸೆದಿದ್ದ. ನಂತರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ.['ಪ್ರೇಮಪತ್ರ' ಬರೆದು ಹತ್ಯೆಯಾದವನಿಗೆ ನ್ಯಾಯ ಎಲ್ಲಿದೆ?]
ಮಕ್ಕಳು ಮನೆಯಲ್ಲಿ ಕಾಣುತ್ತಿಲ್ಲ ಎಂದು ಪತ್ನಿ ಫೋನ್ ಮಾಡಿದಾಗ, ಮಲೆಮಹದೇಶ್ವರಬೆಟ್ಟದಲ್ಲಿ ಅವರು ತಪ್ಪಿಸಿಕೊಂಡರು ಎಂದು ಸುಳ್ಳು ಹೇಳಿದ್ದ. ಗಂಡನ ವರ್ತನೆಯಿಂದ ಅನುಮಾನಗೊಂಡ ಪತ್ನಿ ಪೊಲೀಸರಿಗೆ ವಿಷಯ ತಿಳಿಸುವುದಾಗಿ ಹೇಳಿದ ನಂತರ ಸತ್ಯವನ್ನು ಹೇಳಿದ್ದ. [ಪ್ರಿಯಕರನೇ ಕೊಲ್ಲುವಂತಹ ತಪ್ಪು ಪ್ರೇಯಸಿ ಮಾಡಿದ್ದೇನು?]
ಶಿವಕುಮಾರ್ ಪತ್ನಿ ಈ ಕುರಿತು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ಭಾನುವಾರ ರಾತ್ರಿ ಬೆಂಗಳೂರಿಗೆ ಬಂದ ಶಿವಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೋರಿಯಲ್ಲಿ ಹುಡುಕಾಟ ನಡೆಸಿದಾಗ ಮಕ್ಕಳಿಬ್ಬರ ಶವ ಪತ್ತೆಯಾಗಿದೆ.
ಹಣ ಕೇಳಿದ್ದಕ್ಕೆ ಹತ್ಯೆ ಮಾಡಿದ : ಶಿವಕುಮಾರ್ ಪತ್ನಿ ಮಕ್ಕಳಿಬ್ಬರ ಶಾಲಾ ಶುಲ್ಕ ಕಟ್ಟಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡ ಆತ ಮಕ್ಕಳನ್ನು ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.












Click it and Unblock the Notifications