40 ಲಕ್ಷ ರೂಪಾಯಿ ಸಂಬಳ ಇದ್ದರೂ ಬೆಂಗಳೂರು ಜೀವನ ಯಾಂತ್ರಿಕ: ನೋವು ಬಿಚ್ಚಿಟ್ಟ ಉದ್ಯೋಗಿ
ಬೆಂಗಳೂರು: ಐಟಿ ರಾಜಧಾನಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ವೃತ್ತಿ ಬದುಕಿನ ವಾಸ್ತವವನ್ನು ಅನಾಮಧೇಯ ವೃತ್ತಿಪರನೊಬ್ಬ ನೆಟ್ವರ್ಕಿಂಗ್ ವೇದಿಕೆ ಗ್ರೇಪ್‌ವೈನ್‌ನಲ್ಲಿ ಪ್ರಶ್ನಿಸಿರುವುದು ಚರ್ಚೆಗೆ ಕಾರಣವಾಗಿದೆ. ಇಲ್ಲಿ ಪ್ರಕಟವಾದ ಒಂದು ಪೋಸ್ಟ್ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. "ಬೆಂಗಳೂರು ವೈರಸ್" ಎಂದು ಕರೆಯಲಾದ ಈ ಬರಹದಲ್ಲಿ, ವಾರ್ಷಿಕವಾಗಿ 30ರಿಂದ 40 ಲಕ್ಷ ರೂಪಾಯಿ ಸಂಬಳ ಪಡೆದಿದ್ದರೂ, ಬೆಂಗಳೂರಿನ ವೃತ್ತಿಪರರ ಬದುಕು ಯಾಂತ್ರಿಕವಾಗಿ, ಭಾವನಾತ್ಮಕ ದಣಿವಿನೊಂದಿಗೆ ಸಾಗುತ್ತಿದೆ ಎಂಬ ನೋವಿನ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಬದುಕು 'ಆಟೋಪೈಲಟ್ ಮೋಡ್'ನಲ್ಲಿ ನಡೆಯುತ್ತಿದೆ ಎಂಬ ಕಠಿಣ ವಾಸ್ತವವನ್ನು ಬಿಚ್ಚಿಟ್ಟಿರುವ ಅವರು, "ಬೆಳಗ್ಗೆ ಎದ್ದು ಟೀಮ್ಸ್ ಚೆಕ್ ಮಾಡುವುದು, ಸ್ಟ್ಯಾಂಡಪ್ ಮೀಟಿಂಗ್, ರಾತ್ರಿ 8ರವರೆಗೆ ಕೆಲಸ, ಸ್ವಿಗಿಯಿಂದ ಊಟ ಆರ್ಡರ್, ನೆಟ್‌ಫ್ಲಿಕ್ಸ್ ನೋಡುತ್ತಾ ಮೊಬೈಲ್ ಸ್ಕ್ರೋಲ್, ನಿದ್ರೆ-ಮತ್ತೆ ಅದೇ ದಿನಚರಿ" ಎಂದು ವಿವರಿಸಿದ್ದಾರೆ. ಬಹುತೇಕರು ತಮ್ಮ ಜೀವನ 'ಆಟೋಪೈಲಟ್ ಮೋಡ್'ನಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ. "ಇದು ನನ್ನದಷ್ಟೇ ಅಲ್ಲ, ವಿಭಿನ್ನ ಎಂದು ಭಾವಿಸುತ್ತಿದ್ದರೂ, ವಾಸ್ತವದಲ್ಲಿ ಎಲ್ಲರೂ ಇದೇ ಸ್ಥಿತಿಯಲ್ಲಿ ಇದ್ದೇವೆ" ಎಂದು ಅವರು ಬರೆದಿದ್ದಾರೆ.

ನಮ್ಮ ಆಲೋಚನೆಗಳ ಜೊತೆ ಕಳೆಯಲು ಹೆದರುತ್ತೇವೆ
ಪೋಸ್ಟ್‌ನಲ್ಲಿ ಟ್ರಾಫಿಕ್, ಮಾಲಿನ್ಯಕ್ಕಿಂತಲೂ ಗಂಭೀರ ಸಮಸ್ಯೆಯೊಂದನ್ನು ಅವರು ಗುರುತಿಸಿದ್ದಾರೆ. ಅದೇ ಒಂಟಿತನ ಮತ್ತು ಮೌನವನ್ನು ಎದುರಿಸುವ ಭಯ. "ಈ ನಗರದಲ್ಲಿ ಮೌನವೇ ಜನರನ್ನು ಭಯಪಡಿಸುತ್ತದೆ. ಹೆಚ್‌ಎಸ್‌ಆರ್ ಲೇಔಟ್, ಇಂದಿರಾನಗರದ ರಸ್ತೆಗಳಲ್ಲಿ ನೋಡಿದರೆ ಎಲ್ಲರೂ ಹೆಡ್‌ಫೋನ್ ಹಾಕಿಕೊಂಡು ಓಡಾಡುತ್ತಾರೆ. ನಮ್ಮದೇ ಆಲೋಚನೆಗಳ ಜೊತೆ 10 ನಿಮಿಷ ಕಳೆಯುವುದಕ್ಕೂ ನಾವು ಹೆದರುತ್ತೇವೆ" ಎಂದು ಅವರು ಹೇಳಿದ್ದಾರೆ. ಮೌನವು ಅಸ್ತಿತ್ವದ ಪ್ರಶ್ನೆಗಳತ್ತ ಕರೆದೊಯ್ಯುತ್ತದೆ ಎಂಬ ಭೀತಿಯೂ ಇದಕ್ಕೆ ಕಾರಣವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವರ್ಷಕ್ಕೆ 30ರಿಂದ 40 ಲಕ್ಷ ರೂಪಾಯಿ ವಾರ್ಷಿಕ ಆದಾಯವಿದ್ದರೂ ಆ ಹಣ ನಿಜವಾಗಿ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. "ನಾವು ಕೆಲಸಕ್ಕೆ ಮಾರಿದ ಸಮಯವನ್ನು ಮತ್ತೆ ಖರೀದಿಸಲು ಈ ಹಣ ಖರ್ಚಾಗುತ್ತಿದೆ. ಸೌಲಭ್ಯಗಳಿಗಾಗಿ, ಸುಲಭ ಜೀವನಕ್ಕಾಗಿ ನಾವು ಖರ್ಚು ಮಾಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ. ಅರ್ಥಪೂರ್ಣ ವಿಶ್ರಾಂತಿ, ನಿಜವಾದ ಸಂಬಂಧಗಳ ಬದಲಿಗೆ 'ಕನ್ವಿನಿಯನ್ಸ್ ಸ್ಪೆಂಡಿಂಗ್' ಮತ್ತು ಮೇಲ್ಮೈ ಸಾಮಾಜಿಕ ಬದುಕು ಹೆಚ್ಚಾಗಿದೆ ಎಂಬ ಟೀಕೆಯೂ ಪೋಸ್ಟ್‌ನಲ್ಲಿ ಇದೆ. "ನಾವು ಬದುಕುತ್ತಿಲ್ಲ, ಟಿಕೆಟ್‌ಗಳು ಮತ್ತು ಹ್ಯಾಂಗೋವರ್‌ಗಳ ನಡುವೆ ಕೇವಲ ಬಫರಿಂಗ್ ಮಾಡುತ್ತಿದ್ದೇವೆ" ಎಂದು ಈ ಬರಹ ಮುಕ್ತಾಯಗೊಳ್ಳುತ್ತದೆ.

ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು "ಎಲ್ಲರೂ ಒಂದೇ ಮಟ್ಟದ ಸಂಬಳ ಪಡೆಯುವುದಿಲ್ಲ" ಎಂದು ಅಭಿಪ್ರಾಯಪಟ್ಟರೆ, ಉತ್ತರ ಭಾರತದಿಂದ ಬೆಂಗಳೂರಿಗೆ ಬಂದವರ ಜೀವನ ಇನ್ನಷ್ಟು ಏಕಾಂಗಿಯಾಗಿರುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನೂ ಕೆಲವರು ಇದನ್ನು ವೈಯಕ್ತಿಕ ಸಮಸ್ಯೆ ಎಂದು ಹೇಳಿ, ಸಮಯ ನಿರ್ವಹಣೆ, ವ್ಯಾಯಾಮ, ಮದ್ಯಪಾನ ನಿಯಂತ್ರಣ ಮತ್ತು ವಿಭಿನ್ನ ಸ್ನೇಹವಲಯಗಳ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಅನೇಕರು ಈ ಭಾವನೆಗಳಿಗೆ ಗಟ್ಟಿಯಾಗಿ ಸ್ಪಂದಿಸಿದ್ದಾರೆ.
"ಇದು ಮನಸ್ಸಿಗೆ ತೀವ್ರವಾಗಿ ತಾಕಿತು", "ಮೌನದ ಭಯ ನಿಜಕ್ಕೂ ಭಯಾನಕ", "ನಾವು ಸದಾ ಬ್ಯುಸಿಯಾಗಿದ್ದರೂ ಒಳಗಿನಿಂದ ಖಾಲಿತನ ಅನುಭವಿಸುತ್ತಿದ್ದೇವೆ", "ಎರ್‌ಪಾಡ್ಸ್ ತೆಗೆದುಹಾಕುವುದೇ ಕಷ್ಟವಾಗುತ್ತಿದೆ" ಎಂಬ ಪ್ರತಿಕ್ರಿಯೆಗಳು, ಬೆಂಗಳೂರು ನಗರ ಜೀವನದ ಅಡಗಿದ ಮಾನಸಿಕ ಒತ್ತಡವನ್ನು ಮತ್ತೊಮ್ಮೆ ಬೆಳಕಿಗೆ ತಂದಿವೆ.
-
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ











Click it and Unblock the Notifications