ಬೆಂಗಳೂರಿನ ಕೆರೆಗಳ ಬಗ್ಗೆ ಕಾಳಜಿಯಿದ್ದರೆ ಬನ್ನಿ ಶನಿವಾರ

ಬೆಳ್ಳಂದೂರು ಕೆರೆ ವಿಷಕಾರುತ್ತಿದೆ, ಪುಟ್ಟೇನಹಳ್ಳಿ ಕೆರೆ ಉಸಿರಾಡಲು ಕಷ್ಟಪಡುತ್ತಿದೆ, ಕೆಂಪಾಂಬುದಿ ಕೆರೆ ಬಿಲ್ಡರುಗಳ ಪಾಲಾಗಿದೆ, ಅಗರ ಕೆರೆ ಕಸಕಡ್ಡಿ ತುಂಬಿಕೊಂಡಿದೆ, ಕಾಳೇನಹಳ್ಳಿ ಕೆರೆ ನನ್ನನ್ನು ಉಳಿಸಿ ಎಂದು ಕೈಚಾಚಿ ನಿಂತಿದೆ.

ಬೆಂಗಳೂರು, ಮೇ 11 : ಒಂದಾನೊಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಕೆರೆಗಳ ಸಂಖ್ಯೆ ಈಗ ಎಷ್ಟಿದೆ ಗೊತ್ತಾ? ಕೇವಲ 81. ಅವುಗಳಲ್ಲಿ ಕೆಲವು ಈಗಾಗಲೆ ಅವಸಾನದ ಹಂತ ತಲುಪಿವೆ. ಅವನ್ನು ಉಳಿಸಿಕೊಳ್ಳುವುದು ಹೇಗೆ?

ಬೆಂಗಳೂರಿನ ಯಾವುದೇ ಕೆರೆಯನ್ನು ತೆಗೆದುಕೊಳ್ಳಿ, ಅದು ದೌರ್ಜನ್ಯಕ್ಕೊಳಗಾಗಿರುತ್ತದೆ. ನಿರ್ಲಜ್ಜ ರಾಜಕಾರಣಿಗಳಿಂದ, ಕಾರ್ಪೊರೇಟರುಗಳಿಂದ, ಲ್ಯಾಂಡ್ ಲಾರ್ಡುಗಳಿಂದ, ಅಧಿಕಾರಿಗಳಿಂದ, ನಿವಾಸಿಗಳಿಂದ ಅತ್ಯಾಚಾರಕ್ಕೊಳಗಾಗುತ್ತಲಿವೆ. ತೀವ್ರ ನಿರ್ಲಕ್ಷ್ಯಕ್ಕೆ, ದಬ್ಬಾಳಿಕೆಗೆ ಒಳಗಾಗಿ ನರಳುತ್ತಿವೆ. [ಬೆಳ್ಳಂದೂರು ಕೆರೆ ಸ್ವಚ್ಛವಾಗೋದು 2020ಕ್ಕೆ!]

ಬೆಳ್ಳಂದೂರು ಕೆರೆ ವಿಷಕಾರುತ್ತಿದೆ, ಪುಟ್ಟೇನಹಳ್ಳಿ ಕೆರೆ ಉಸಿರಾಡಲು ಕಷ್ಟಪಡುತ್ತಿದೆ, ಕೆಂಪಾಂಬುದಿ ಕೆರೆ ಬಿಲ್ಡರುಗಳ ಪಾಲಾಗಿದೆ, ಅಗರ ಕೆರೆ ಕಸಕಡ್ಡಿ ತುಂಬಿಕೊಂಡಿದೆ, ಕಾಳೇನಹಳ್ಳಿ ಕೆರೆ ನನ್ನನ್ನು ಉಳಿಸಿ ಎಂದು ಕೈಚಾಚಿ ನಿಂತಿದೆ. ಇದ್ದುದರಲ್ಲಿ ಪುಟ್ಟೇನಹಳ್ಳಿ ಕೆರೆ ಉಳಿವಿಗೆ ಸಾಕಷ್ಟು ಜನ ಶ್ರಮಿಸುತ್ತಿದ್ದಾರೆ.

Bengaluru lakes are dying - how to save them

ಇವು ನಮಗಾಗಿಯೇ ಶತಮಾನಗಳ ಹಿಂದೆ ಕೆಂಪೇಗೌಡರು ನಿರ್ಮಿಸಿದ ಕೆರೆಗಳು, ಇವು ನಮ್ಮ ಕೆರೆಗಳು. ಇವು ಬದುಕುಳಿಯಬೇಕಿದ್ದರೆ, ನಮಗಾಗಿ ಉಸಿರಾಡಬೇಕಿದ್ದರೆ ನಾವೇ ಇವುಗಳ ರಕ್ಷಕರಾಗಬೇಕು. ಇವುಗಳನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸದೆ ಬೇರೆ ದಾರಿಯೇ ಇಲ್ಲ. [ಬೆಳ್ಳಂದೂರು ಕೆರೆ ಕೇಸ್: ಬಾಗಿಲು ಮುಚ್ಚಿದ ಬಾಷ್ ಕಂಪನಿ]

ಇದು ಬರೀ ಹೋರಾಟ ಮಾತ್ರವಾಗಬಾರದು, ಕ್ರಾಂತಿಯಾಗಬೇಕು. ಕೆರೆಗಳ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಉಳಿವಿಗಾಗಿ ದನಿಯೆತ್ತಬೇಕು. ಕೆರೆಗಳ ಉಳಿವಿನಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮನಿಮ್ಮೆಲ್ಲರ ಬದುಕು ಕೂಡ ಅಡಕವಾಗಿದೆ.

ಕೆರೆಗಳನ್ನು ಉಳಿಸಿ ಎಂದು ಯುನೈಟೆಡ್ ಬೆಂಗಳೂರು ಸಂಸ್ಥೆ ಮೇ 13 ಶನಿವಾರದಂದು, ಬೆಳಿಗ್ಗೆ 10 ಗಂಟೆಗೆ ಟೌನ್ ಹಾಲ್(ಪುರಭವನ) ಬಳಿ ಬೃಹತ್ ಚಳವಳಿಯನ್ನು ಹಮ್ಮಿಕೊಂಡಿದೆ. ಇದಕ್ಕೆ ನಮ್ಮ ಬೆಂಗಳೂರು ಫೌಂಡೇಷನ್, ಸಿಟಿಜನ್ ಆ್ಯಕ್ಷನ್ ಫೋರಂ, ಸಿಟಿಜನ್ಸ್ ಫಾರ್ ಬೆಂಗಳೂರು, ದಿ ಫಾರ್ವರ್ಡ್ ಫೌಂಡೇಷನ್, ಪ್ರಜಾ, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಬೆಂಬಲ ನೀಡಿವೆ.[ಸ್ವಚ್ಛಗೊಳ್ಳುತ್ತಿರುವ ಬೆಳ್ಳಂದೂರು ಕೆರೆಗೆ ಸಿಸಿಟಿವಿ ಕಣ್ಗಾವಲು]

ಬೆಂಗಳೂರಿನ ಕೆರೆಗಳ ಬಗ್ಗೆ ಹೋರಾಟ ನಡೆಸುತ್ತಿರುವ ಹಲವಾರು ಸಂಸ್ಥೆಗಳು, ನಾಯಕರು ಶನಿವಾರ ನಡೆಯಲಿರುವ ನಾಲ್ಕು ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ಕೆರೆಗಳನ್ನು ನಮ್ಮ ಸುಪರ್ದಿಗೆ ತೆಗೆದುಕೊಳ್ಳುವುದು ಹೇಗೆ, ಅವಕ್ಕೆ ಮರುಜೀವ ಕೊಡುವುದು ಹೇಗೆ ಎಂಬ ಬಗ್ಗೆ ಮಾತುಕತೆ ನಡೆಯಲಿವೆ. ನೀವೂ ನಿಮ್ಮ ಅನಿಸಿಕೆ ವ್ಯಕ್ತಪಡಿಸಿ.

ನಿಮಗೆ ನಮ್ಮ ಬೆಂಗಳೂರಿನ ಇಂದು ಮತ್ತು ನಾಳೆಯ ಬಗ್ಗೆ ಕನಿಷ್ಠ ಕಾಳಜಿಯಿದ್ದರೆ ಯುನೈಟೆಡ್ ಬೆಂಗಳೂರು ಆಯೋಜಿಸಿರುವ ಈ ಅಭಿಯಾನಕ್ಕೆ ಬೆಂಬಲ ನೀಡಿ, ಟೌನ್ ಹಾಲ್ ಗೆ ಶನಿವಾರ 10 ಗಂಟೆಗೆ ಬನ್ನಿ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಆಗ್ರಹಿಸಿದ್ದಾರೆ. [ಕಾಳೇನ ಅಗ್ರಹಾರ ಕೆರೆ ಉಳಿವಿಗೆ ಟೊಂಕಕಟ್ಟಿದ ನಿರ್ಮಲಾ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+