Skydeck: ಪದೇ ಪದೆ 'ಸ್ಕೈಡೆಕ್' ನಿರ್ಮಾಣ ಜಾಗ ಬದಲಾಯಿಸುತ್ತಿರುವ ಸರ್ಕಾರ, ಕೊನೆಗೂ ಜಾಗ ಫೈನಲ್! ಎಲ್ಲಿ?
ಬೆಂಗಳೂರು, ಜೂನ್ 21: ಬೆಂಗಳೂರು ಪ್ರವಾಸೋದ್ಯಮಕ್ಕೆ ಮೆರೆಗು ತರಬಲ್ಲ, ರಾಜಧಾನಿಯ ಸಂಸ್ಕೃತಿ ಇನ್ನಿತರ ಮಾಹಿತಿ ತಿಳಿಯಬಲ್ಲದಾದ ಸರ್ಕಾರದ ಮಹತ್ವಾಕಾಂಕ್ಷೆಯ 'ಸ್ಕೈಡೆಕ್' (Skydeck updates) ವೀಕ್ಷಣಾ ಗೋಪುರ ಸ್ಥಳ ಮತ್ತೆ ಬದಲಾವಣೆ ಆಗಿದೆ. ರಾಜ್ಯ ಸರ್ಕಾರ ವಿವಿಧ ಕಾರಣಗಳನ್ನು ನೀಡುತ್ತಾ ಪದೇ ಪದೆ ನಿರ್ಮಾಣದ ಜಾಗವನ್ನು ಬದಲಾಯಿಸುತ್ತಿದೆ. ಈ ಬಾರಿ ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಯಾಕೆ ಈಗಾಗಲೇ ಗುರುತಿಸಿದ್ದ ಇತ್ತೀಚಿನ ಸ್ಥಳ ಬದಲಾವಣೆ ಮಾಡಿತು ಎಂಬ ಮಾಹಿತಿ ಇಲ್ಲಿದೆ.
ರಾಷ್ಟ್ರ ರಾಜಧಾನಿ ದೆಹಲಿ ಕುತುಬ್ ಮಿನಾರ್ ಗಿಂತಲೂ ಅಧಿಕ ಎತ್ತರದ ದಕ್ಷಿಣ ಏಷ್ಯಾದ ಪ್ರಮುಖ ಸ್ಕೈಡೆಕ್ ನಿರ್ಮಾಣ ಯೋಜನೆಗೆ ಕರ್ನಾಟಕ ಸರ್ಕಾರ ಪ್ಲಾನ್ ಮಾಡಿ ವರ್ಷ ಕಳೆದಿದೆ. ಎಲ್ಲಿ ನಿರ್ಮಿಸಬೇಕು ಎಂದು ಜಾಗ ಅಂತಿಮಗೊಳಿಸುವ ನಿರ್ಧಾರದಲ್ಲಿ ಬದಲಾವಣೆ ಆಗುತ್ತಲೇ ಇದೆ. ಬೆಂಗಳೂರು ಪ್ರವಾಸಿಗರ ಆಕರ್ಷಣೆ ಕೆಂದ್ರವಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಸ್ಕೈಡೆಕ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಡಿಕೆ ಶಿವಕುಮಾರ್ ಅವರು ಇದರ ನೇತೃತ್ವ ವಹಿಸಿದ್ದಾರೆ.

ಇತ್ತೀಚೆಗಷ್ಟೇ ಕೆಂಗೇರಿ ಬಳಿ ಇರುವ ನಾಡಪ್ರಭು ಕೇಂಪೇಗೌಡ ಬಡಾವಣೆಯಲ್ಲಿ (ಬಿಡಿಎ) ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗುತ್ತಿ. ಈ ಹಿಂದೆ ಮಾಡಿದ್ದ ಜಾಗ ಅಂತಿಮ ರದ್ದುಗೊಳಿಸಿ ಈ ಸ್ಥಳವನ್ನು ಫೈನಲ್ ಮಾಡಿದ್ದ ಸರ್ಕಾರ ಇದೀಗ ಮತ್ತೆ ಬದಲಾವಣೆ ಮಾಡಿದೆ. ಕೆಂಪೇಗೌಡ ಬಡಾವಣೆ ಬದಲಾಗಿ ಕೊಮ್ಮಘಟ್ಟದ 30 ಎಕರೆ ಜಾಗದಲ್ಲಿ ನಿರ್ಮಿಸಲು ಮುಂದಾಗಿದೆ. ಇಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ ಇಲ್ಲಿ ನಿರ್ಮಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.
ಪುನಃ ಜಾಗ ಬದಲಾವಣೆ ಮಾಡಿದ್ದೇಕೆ?
ಕೆಂಗೇರಿ ಸಮೀಪದ ಕೆಂಪೇಗೌಡ ಲೇಔಟ್‌ನಲ್ಲಿ ಪ್ಲಾನ್ ಮಾಡಲಾಗಿತ್ತು. ಇಲ್ಲಿಗೆ ಹೋಲಿಕೆ ಮಾಡಿದರೆ ಕೊಮ್ಮಘಟ್ಟದಲ್ಲಿನ ಜಾಗ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದೆ. ಇಲ್ಲಿಗೆ ಸಾರಿಗೆ ಸಂಪರ್ಕವು ಉತ್ತಮವಾಗಿದೆ. ಇಲ್ಲಿ ವಸತಿ ಪ್ರದೇಶಗಳು, ಕೆರೆಗಳು ಹೆಚ್ಚಿವೆ. ಹೀಗಾಗಿ 500 ಕೋಟಿ ರೂಪಾಯಿ ವೆಚ್ಚದ ವೀಕ್ಷಣಾ ಗೋಪುರ ಇಲ್ಲಿ ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಈ ಹಿಂದೆ ಜ್ಞಾನಭಾರತಿ ಕ್ಯಾಂಪಸ್, ಬೆನ್ನಿಗಾನಹಳ್ಳಿ ಸೇರಿದಂತೆ ಕೆಲವು ಸ್ಥಳ ಪರಿಗಣಿಸಲಾಗಿತ್ತು. ಆದರೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಿಶ್ವವಿದ್ಯಾಲಯ ಇದೆ. ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗುವ ಕಾರಣದಿಂದ ಕೇಂಪೇಗೌಡ ಬಡಾವಣೆ ಆಯ್ಕೆ ಮಾಡಲಾಗಿತ್ತು. ಆದರೆ ಅಲ್ಲಿನ ಸಂಪರ್ಕ ವ್ಯವಸ್ಥೆಗಿಂತ ಕೊಮ್ಮಘಟ್ಟದಲ್ಲಿ ಸರಿಯಾಗಿದೆ ಎಂದು ಭಾವಿಸಿದ ಸರ್ಕಾರ ಇದೀಗ ಸ್ಥಳವನ್ನು ಅಲ್ಲಿ ಅಂತಿಮಗೊಳಿಸಿದೆ.












Click it and Unblock the Notifications