ವಸತಿ ಪ್ರದೇಶಗಳ ವಾಣಿಜ್ಯೀಕರಣದ ವಿರುದ್ಧ ಇಂದಿರಾನಗರ ನಿವಾಸಿಗಳಿಂದ ಪ್ರತಿಭಟನೆ
ವಾಣಿಜ್ಯೀಕರಣದಿಂದ ವಸತಿ ಪ್ರದೇಶಗಳ ಪರಿಸರ ಹಾಳಾಗುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಎಚ್ಎಎಲ್ 2ನೇ ಹಂತದ ನಿವಾಸಿಗಳು ಪ್ರತಿಭಟನೆ ನಡೆಸಲಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಪ್ರತಿಭಟನೆ ನಿಗದಿಯಾಗಿದೆ.
ಬೆಂಗಳೂರು, ಮಾರ್ಚ್ 3: ವಾಣಿಜ್ಯೀಕರಣದಿಂದ ವಸತಿ ಪ್ರದೇಶಗಳ ಪರಿಸರ ಹಾಳಾಗುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಎಚ್ಎಎಲ್ 2ನೇ ಹಂತದ ನಿವಾಸಿಗಳು ಪ್ರತಿಭಟನೆ ನಡೆಸಲಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಪ್ರತಿಭಟನೆ ನಿಗದಿಯಾಗಿದೆ.
ಒಂದು ಕಾಲದಲ್ಲಿ ವಸತಿ ಪ್ರದೇಶಗಳು ಹಸಿರು ಮತ್ತು ಪ್ರಶಾಂತವಾಗಿತ್ತು. ಆದರೆ ವಾಣಿಜ್ಯೀಕರಣ ಕಾಲಿಡುತ್ತಿದ್ದಂತೆ ಇಡೀ ಪ್ರದೇಶವೇ ಅಶಾಂತಿ ಮತ್ತು ಅಸುರಕ್ಷಿತ ವಲಯವಾಗಿ ಮಾರ್ಪಟ್ಟಿದೆ. [ಮಾರ್ಚ್ 4ಕ್ಕೆ ಬೆಂಗಳೂರಿನಲ್ಲಿ 'ಬಸ್ ಭಾಗ್ಯ ಬೇಕು' ಅಭಿಯಾನ]

ಪಾಲಿಕೆಯ ಅಸಮರ್ಪಕ ಕಸ ವಿಲೇವಾರಿ, ಚರಂಡಿ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯೂ ಜನರ ನೆಮ್ಮದಿ ಹಾಳುಗೆಡವಿದೆ. ಹಳೇ ಕಾಲದ ಮೋರಿಗಳಿಂದ ನೀರು ರಸ್ತೆಗೆ ಹರಿಯುತ್ತಿರುತ್ತದೆ. ಶುಚಿತ್ವ ಎನ್ನುವುದೇ ಮರೆಯಾಗಿ ಹೋಗಿದೆ.
ವಸತಿ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದೆ ಅದಕ್ಕೆ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆಯೂ ಕಾರಣ. ರಸ್ತೆಯುಲ್ಲಿ ಕುಡಿದು ಅಡ್ಡಾದಿಡ್ಡಿ ಗಾಡಿ ಓಡಿಸುತ್ತಾರೆ. ರಸ್ತೆಯಲ್ಲೇ ವೇಶ್ಯೆಯರ ವ್ಯವಹಾರಗಳೂ ನಡೆಯುತ್ತಿರುತ್ತವೆ. ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ ಎಂದು ನಿವಾಸಿಗಳು ದೂರಿದ್ದಾರೆ.
ಇಡೀ ಪ್ರದೇಶವೇ ವಾಣಿಜ್ಯೀಕರಣಕ್ಕೆ ಒಳಗಾದ ನಂತರ ವಾಹನ ನಿಲುಗಡೆ ಸ್ಥಳಗಳನ್ನು ಆಕ್ರಮಿಸಿಕೊಳ್ಳಲಾಗಿದೆ. ಸ್ಥಳೀಯ ನಿವಾಸಿಗಳು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. [ಉಕ್ಕಿನ ಸೇತುವೆ ಬದಲು ಎಲಿವೇಟೆಡ್ ರಸ್ತೆ, ಅಳಿಯ ಅಲ್ಲ...!]
ಎಚ್ಎಎಲ್ ಸುತ್ತ ಮುತ್ತ ಶಬ್ದ ಮಾಲಿನ್ಯ ಜಾಸ್ತಿಯಾಗಿದೆ. ಟ್ರಾಫಿಕ್ ಕೂಡಾ ಜಾಸ್ತಿಯಾಗಿದ್ದು ಇಡೀ ಇಂದಿರಾನಗರ ಜನರ ಜೀವನಮಟ್ಟವನ್ನೇ ಕುಸಿಯುವಂತೆ ಮಾಡಿದೆ. ಶಬ್ದದಿಂದಾಗಿ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದು ದೂರಿರುವ ನಾಗರೀಕರು ಮಾರ್ಚ್ 4 ರಂದು 12ನೇ ಮುಖ್ಯರಸ್ತೆ 5ನೇ ತಿರುವಿನಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರತಿಭಟನೆ ನಡೆಸಲಿದ್ದಾರೆ.
-
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ











Click it and Unblock the Notifications