ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ಸಮಯದಲ್ಲಿ ಮನೆಗಳ್ಳತನ; 12 ಲಕ್ಷ ರು ವಶ

|
Google Oneindia Kannada News

ಬೆಂಗಳೂರು ಮೇ 16: ಲಾಕ್‌ಡೌನ್ ಸಮಯದಲ್ಲಿ ಮನೆಗಳು ಲಾಕ್ ಆಗದಿದ್ದರೂ ಮನೆಗಳ್ಳತನದ ಕೈ ಚಳಕ ತೋರಿದ್ದ ಖತರನಾಕ್ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹಗಲು ವೇಳೆಯಲ್ಲಿ ಮನೆಗಳನ್ನು ಗುರುತಿಸಿ ರಾತ್ರಿ ನುಗ್ಗಿ ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಿರುವ ಸುದ್ದಗುಂಟೆ ಪೊಲೀಸರು, ಆರೋಪಿಯಿಂದ ₹ 12 ಲಕ್ಷ ಮೌಲ್ಯದ ಕಳವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಜಿಎಫ್ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಇಳಿದಿದ್ದ ಮೂವರ ಸಾವುಕೆಜಿಎಫ್ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಇಳಿದಿದ್ದ ಮೂವರ ಸಾವು

ಆರ್‌. ಟಿ. ನಗರದ ರೆಹಮತ್‌ ನಗರ ನಿವಾಸಿ ಸಯ್ಯದ್‌ ಮಸೂದ್ (36) ಬಂಧಿತ ಆರೋಪಿಯಾಗಿದ್ದಾನೆ.

Theft Arrested By Saddagunte Police

ಆರೋಪಿತನಿಂದ ₹ 6 ಲಕ್ಷ ನಗದು, 171 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ, ಒಂದು ಮೈಕ್ರೊ ಒವೆನ್‌, ಎರಡು ಸೀರೆ, ಎರಡು ಬೆಡ್‌ ಶೀಟ್‌, ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಟಿಎಂ ಲೇಔಟ್‌ನ ಕೆಇಬಿ ಕಾಲೊನಿಯಲ್ಲಿರುವ ತಮ್ಮ ಮನೆಯಲ್ಲಿ ಇತ್ತೀಚಿಗೆ ನಡೆದ ಕಳವು ಬಗ್ಗೆ ಅಬ್ದುಲ್‌ ರಶೀದ್ ಮೇಕ್ರಿ ಎಂಬವರು ಸುದ್ದಗುಂಟೆ ಠಾಣೆಯಲ್ಲಿ ದೂರು ನೀಡಿದ್ದರು.

English summary
A Theft Arrested By Saddagunte Police, and seized 12 lakh rupees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X