ಮಳೆಗೆ ನಲುಗಿದ ಬೆಂಗಳೂರು; ಗಮನಿಸಬೇಕಾದ 10 ಸಂಗತಿಗಳಿವು
ಬೆಂಗಳೂರು, ಸೆಪ್ಟೆಂಬರ್ 05: ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ನಗರದ ನಿವಾಸಿಗಳನ್ನು ಹೈರಾಣಾಗಿಸಿದ್ದು, ನಗರದಲ್ಲಿ ಯೋಜಿತವಲ್ಲದ ಅಭಿವೃದ್ಧಿಯಿಂದ ಉಂಟಾದ ಹಾನಿಯನ್ನು ಹಲವಾರು ಪ್ರದೇಶಗಳು ಈಗ ಅನುಭವಿಸುತ್ತಿವೆ. ಒಂದೆಡೆ ಜನರ, ಸಾವಿರಾರು ನೌಕರರ ಆದಾಯಕ್ಕೂ ಇದು ಕಂಟಕವಾಗಿದ್ದು, ಜನರ ರಕ್ಷಣೆಯೇ ಇಲ್ಲಿ ಸದ್ಯ ಮುಖ್ಯವಾಗಿದೆ.
ಜನರ ಸ್ಥಳಾಂತರಕ್ಕೆ ಬೋಟ್‌ಗಳು ಟ್ರ್ಯಾಕ್ಟರ್‌ಗಳು, ಬೋಟ್‌ಗಳನ್ನು ಬಳಸಾಗುತ್ತಿದೆ. ಜನರ ಮಳೆಯಿಂದ ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಸಮರ್ಪಕ ಮೂಲಸೌಕರ್ಯದ ಕೊರತೆಯಿಂದ ಯುನಿಕಾರ್ನ್ ಕಂಪೆನಿಗಳು ಆದಾಯ ಕುಸಿತದ ಹೊರೆಯನ್ನು ಅನುಭವಿಸುತ್ತಿವೆ. ಕೆಲವು ಶಾಲೆಗಳು ಹಾಗೂ ಕಂಪೆನಿಗಳು ಕೋವಿಡ್ ಎರಡನೇ ಅಲೆ ಸ್ಥಿತಿಗೆ ಮರಳಿದ್ದು, ಶಾಲೆಗಳು ಆನ್‌ಲೈನ್ ತರಗತಿಗೆ ಮರಳಿದರೆ, ಕಂಪೆನಿಗಳು ಮತ್ತೆ ವರ್ಕ್ ಪ್ರಮ್ ಹೋಮ್ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಮಳೆಯ ಅವಾಂತರದ ಬಗ್ಗೆ ಗಮನಿಸಬೇಕಾದ ಸಂಗತಿಗಳು ಇಲ್ಲಿವೆ.
1. ಪ್ರವಾಹದ ನಾಲ್ಕನೇ ದಿನವೂ ಹಲವು ಪ್ರದೇಶಗಳು ಜಲಾವೃತವಾಗಿವೆ. ಕೆಲವು ಪ್ರಮುಖ ರಸ್ತೆಗಳು ಜಲಾವೃತಗೊಂಡಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಸಂಚಾರ ನಿಧಾನಗೊಂಡಿದೆ.
2. ಒಂದು ವಾರದಲ್ಲಿ ಎರಡನೇ ಬಾರಿಗೆ ಮೆಗಾ ಐಟಿ ಹಬ್ ಆದ ಬೆಂಗಳೂರಿನ ಪ್ರವಾಹವು ಜಲಾವೃತಗೊಂಡ ರಸ್ತೆಗಳ ಮೂಲಕ ಜನರು ತಮ್ಮ ಕೆಲಸದ ಸ್ಥಳಕ್ಕೆ ಹೋಗಲು ಟ್ರ್ಯಾಕ್ಟರ್ ಮತ್ತು ಬೋಟ್‌ಗಳನ್ನು ಹತ್ತುವ ದೃಶ್ಯಗಳಿಗೆ ಸಾಕ್ಷಿಯಾಗಿದೆ.
3. ನಿನ್ನೆ 23 ವರ್ಷದ ಮಹಿಳೆಯೊಬ್ಬರು ಜಲಾವೃತ ರಸ್ತೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶಾಲೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಖಿಲಾ ಅವರು ಮನೆಗೆ ಹಿಂತಿರುಗುತ್ತಿದ್ದ ವೇಳೆ ಸ್ಕೂಟರ್ ಸ್ಕಿಡ್ ಆಗಿದೆ. ವಿದ್ಯುತ್ ಕಂಬ ಇದ್ದು, ದುರಾದೃಷ್ಟವಶಾತ್ ಶಾಕ್ ಹೊಡೆದಿದೆ.
4. ಜಲಾವೃತವಾದ ನಗರದಲ್ಲಿ ಯೋಜಿತವಲ್ಲದ ನಗರೀಕರಣದ ಪರಿಣಾಮಗಳನ್ನು ಗಮನಕ್ಕೆ ತಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 500 ಮಳೆನೀರು ಚರಂಡಿಗಳ ಅತಿಕ್ರಮಣವನ್ನು ಗುರುತಿಸಿದ್ದು, ಇದೀಗ ನಗರವು ನೀರಿನಿಂದ ಉಸಿರುಗಟ್ಟುವಂತೆ ಮಾಡಿದೆ.
5. ಈ ಪರಿಸ್ಥಿತಿಗೆ ರಾಜ್ಯದಲ್ಲಿ ಹಿಂದಿನ ಜೆಡಿಎಸ್-ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. "ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜಿತವಲ್ಲದ ಆಡಳಿತದಿಂದಾಗಿ ಇದು ಸಂಭವಿಸಿದೆ. ಅವರು ಕೆರೆಗಳು ಮತ್ತು ಬಫರ್ ವಲಯದಲ್ಲಿ ಬಲ, ಎಡ ಮತ್ತು ಮಧ್ಯದಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಿ ಈಅಧ್ವಾನ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಅತಿಕ್ರಮಣ ತೆರವಿಗೆ ಇನ್ನೂ 300 ಕೋಟಿ
6. ಬೆಂಗಳೂರು ನಗರದಿಂದ ಚರಂಡಿ ನೀರು ಹೊರ ಹಾಕಲು 1,500 ಕೋಟಿ ನೀಡಲಾಗಿದೆ. ಅತಿಕ್ರಮಣ ತೆರವಿಗೆ ಇನ್ನೂ 300 ಕೋಟಿ ನೀಡಲಾಗಿದೆ. ಅತಿಕ್ರಮಣದಿಂದ ಡ್ರೈನೇಜ್ ಪಾಯಿಂಟ್‌ಗಳು ಕೊಚ್ಚಿ ಹೋಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೆಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ
7. ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿದೆ. ಮಂಡ್ಯದ ಪಂಪ್‌ಹೌಸ್ ಜಲಾವೃತಗೊಂಡ ಹಿನ್ನೆಲೆಯಲ್ಲಿ ಕೆಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪಂಪ್‌ಹೌಸ್ ಸ್ವಚ್ಛಗೊಳಿಸಲಾಗುತ್ತಿದೆ. 8,000 ಬೋರ್‌ವೆಲ್‌ಗಳು ಹಾನಿಗೊಳಗಾದ ಪ್ರದೇಶಗಳಿಗೆ ನೀರು ಸರಬರಾಜು ಮಾಡುತ್ತವೆ. ಬೋರ್‌ವೆಲ್ ಇಲ್ಲದ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

2,188 ಮನೆಗಳಿಗೆ ಭಾಗಶಃ ಹಾನಿ
8. ಪ್ರವಾಹದಲ್ಲಿ 430 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, 2,188 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಸುಮಾರು 225 ಕಿ.ಮೀ ರಸ್ತೆಗಳು, ಸೇತುವೆಗಳು, ಮೋರಿಗಳು ಮತ್ತು ವಿದ್ಯುತ್ ಕಂಬಗಳು ಸಹ ಹಾನಿಗೊಳಗಾಗಿವೆ. 9. ಮಳೆ ಮತ್ತು ಪ್ರವಾಹ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರ ತಂಡ ಇಂದು ರಾತ್ರಿ ನಗರಕ್ಕೆ ಆಗಮಿಸಲಿದೆ. ನಂತರ ತಂಡ ಸದಸ್ಯರೊಂದಿಗೆ ಸರ್ಕಾರ ಸಭೆ ನಡೆಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಈಗಾಗಲೇ ಶೇ. 144ರಷ್ಟು ಅಧಿಕ ಮಳೆ
10. ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಈಗಾಗಲೇ ಶೇ. 144ರಷ್ಟು ಅಧಿಕ ಮಳೆಯಾಗಿದ್ದು, ಪ್ರಸಕ್ತ ತಿಂಗಳ ಮೊದಲ ಐದು ದಿನಗಳಲ್ಲಿ ಶೇ.51ರಷ್ಟು ಅಧಿಕ ಮಳೆಯಾಗಿದೆ. ಇದು 42 ವರ್ಷಗಳಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗಿದೆ.











Click it and Unblock the Notifications