Bengaluru Airport: 25 ವರ್ಷದ ಬಳಿಕ ವಾಣಿಜ್ಯ ಸಂಚಾರಕ್ಕೆ HAL ವಿಮಾನ ನಿಲ್ದಾಣ ಪುನಃ ತೆರೆಯಲು ಪ್ಲಾನ್..!

ಬೆಂಗಳೂರು, ಸೆಪ್ಟಂಬರ್ 15: ಬೆಂಗಳೂರಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ಲಾನ್ ನಡೆಯುತ್ತಿದೆ. ಇದರ ಮಧ್ಯೆ ಹಳೆಯ HAL ವಿಮಾನ ನಿಲ್ದಾಣ ಮತ್ತೆ ಕಾರ್ಯಾರಂಭಗೊಳಿಸಲು ಮುಂದಾಗಿದ್ದು, 2033ರೊಳಗೆ ವಾಣಿಜ್ಯ ವಿಮಾನ ಸೇವೆಗಳನ್ನು ಪುನರಾರಂಭಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಪ್ರಸ್ತುತ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಮೇಲೆಯೇ ಅವಲಂಬನೆಯನ್ನು HAL ತಗ್ಗಿಸಲಿದೆ.

ಇಂತಿಷ್ಟು ವರ್ಷಗಳ ವರೆಗೆ ಮತ್ತೊಂದು ವಿಮಾನ ನಿಲ್ದಾಣ ಕಾರ್ಯಾಚರಣೆಗೆ (2033ರವರೆಗೆ) ಸಂಬಂಧಿಸಿದಂತೆ ಬಿಐಎಎಲ್ (BIAL) ಜೊತೆ ಇರುವ ಒಪ್ಪಂದ ಇದೆ. ಅದು ಮುಗಿದಿಲ್ಲ. ಅಷ್ಟರಲ್ಲಾಗಲೇ HAL ವಿಮಾನ ನಿಲ್ದಾಣವನ್ನು ಪ್ರಯಾಣಿಕರ ದಟ್ಟಣೆ ನೀಗಿಸಲು ವಾಣಿಜ್ಯ ಸೇವೆಗಳಿಗೆ ಸಜ್ಜುಗೊಳಿಸುವ ಚರ್ಚೆಗಳು ನಡೆಯುತ್ತಿವೆ. ಕರ್ನಾಟಕ ಸರ್ಕಾರವೂ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಬಿಐಎಎಲ್‌ಗೆ ಉಂಟಾಗುವ ನಷ್ಟ ಭರಿಸುವ ಕುರಿತು ಮಾತನಾಡಿದ್ದರು. ಇತ್ತಿಚೆಗೆ ಈ ವಿಚಾರವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)ದ ಅಂಗಳವು ತಲುಪಿದೆ.

Bengaluru s HAL Airport Set To Reopen for Commercial Flights by 2033 to reduse KIA Passengers congestion

ಕೆಇಎ ಮುನ್ನವೇ 1941 ರಿಂದ 2008 ರವರೆಗೆ HAL ಬೆಂಗಳೂರಿನ ಪ್ರಮುಖ ವಿಮಾನ ನಿಲ್ದಾಣವಾಗಿತ್ತು. ಬಳಿಕ ಅದನ್ನು ಕೇವಲ VVIP ವಿಮಾನಗಳ ಹಾರಾಟ, ಲ್ಯಾಂಡಿಂಗ್‌ಗೆ ಬಳಸಲಾಯಿತು. ಅಲ್ಲಿ ವಾಣಿಜ್ಯ ಸೇವೆ ನಿಂತಿತ್ತು. ಮತ್ತೆ ಇದೀಗ 25 ವರ್ಷಗಳ ಬಳಿಕ ವಾಣಿಜ್ಯ ಸೇವೆಗಳಿಗೆ ತೆರೆಯುವ ನಿರ್ಧಾರ ಮಾಡಲಾಗಿದೆ. 2030ರೊಳಗೆ ಹಳೆಯ ಟರ್ಮಿನಲ್ ಕಟ್ಟಡವನ್ನು ಕೆಡವಿ, 2033ರೊಳಗೆ ಆಧುನಿಕ ಸೌಲಭ್ಯ, ಮಲ್ಟಿ-ಲೆವಲ್ ಪಾರ್ಕಿಂಗ್ ಮತ್ತು ವಾಣಿಜ್ಯ ಸಂಕೀರ್ಣವನ್ನು ಅಳವಡಿಸಲಾಗಿದೆ ಹೊಸ ಟರ್ಮಿನಲ್ ನಿರ್ಮಿಸಲು ಯೋಜಿಸಲಾಗಿದೆ. ಸುತ್ತಮುತ್ತಲಿನ ರಸ್ತೆಗಳನ್ನು ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಅಂಶಗಳು ಪ್ಲಾನ್ ನಲ್ಲಿವೆ.

HAL ಪುನರಾರಂಭವು ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ನಗರ ಮಧ್ಯಭಾಗದ ಪ್ರಯಾಣಿಕರಿಗೆ ಅನುಕೂಲ. ಪ್ರವಾಸೋದ್ಯಮ, ಟ್ಯಾಕ್ಸಿ, ಹೋಟೆಲ್ ಮತ್ತು ಸಣ್ಣ ವ್ಯಾಪಾರಗಳಿಗೆ ಸಹ ಉತ್ತೇಜನ ಸಿಗಲಿದೆ. HAL 3,306 ಮೀಟರ್ ಉದ್ದದ ರನ್‌ವೇ ಹೊಂದಿರುವುದರಿಂದ ಕಡಿಮೆ ನವೀಕರಣದಲ್ಲೇ ದೊಡ್ಡ ವಿಮಾನಗಳು ಸಾಧ್ಯ. ರಾಜ್ಯ-ಕೇಂದ್ರ ಸರ್ಕಾರಗಳ ಬೆಂಬಲ, ಮಾಸ್ಟರ್ ಪ್ಲಾನ್ ಮತ್ತು ಅಧಿಕಾರಿಗಳು ಒಗ್ಗಟ್ಟಿನಿಂದ 2033ರೊಳಗೆ ಎಚ್ಎಎಲ್ ಮತ್ತೆ ಬೆಂಗಳೂರಿನ ಪ್ರಮುಖ ವಿಮಾನಗಳು ನಿಲ್ದಾಣಕ್ಕೆ ಹೋಗುವ ನಿರೀಕ್ಷೆಯಿದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀ ವಿಮಾನ ನಿಲ್ದಾಣ ಹಾಗೂ ಎಚ್‌ಎಎಲ್ ವಾಣಿಜ್ಯ ಸಂಚಾರ ಪುನಾರಂಭ ಬಗ್ಗೆ ಇನ್ನಷ್ಟು ಮಾಹಿತಿಗಳು ಶೀಘ್ರವೇ ಸಿಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+