Get Updates
Get notified of breaking news, exclusive insights, and must-see stories!

ಬೆಂಗಳೂರು ಚುನಾವಣೆ 2023: ಐಟಿ ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಬಿಬಿಎಂಪಿಯಿಂದ ಮತದಾನ ಜಾಗೃತಿ

ಬೆಂಗಳೂರು, ಏಪ್ರಿಲ್ 12: ರಾಜ್ಯದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಎಂದರೆ ಅದು ಬೆಂಗಳೂರು ನಗರ ಜಿಲ್ಲೆ. ಈ ಕಾರಣದಿಂದ ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾಧಿಕಾರಿಗಳು ನಿರಂತರ ಪ್ರಯತ್ನ ನಡೆಸಿದ್ದಾರೆ.

ಬಿಬಿಎಂಪಿ, ಸ್ವೀಪ್ ಕಾರ್ಯಕ್ರಮದಡಿ ORRCA ಸಹಯೋಗದೊಂದಿಗೆ ಹೆಬ್ಬಾಳ ಕ್ಷೇತ್ರದ ಜೊತೆಗೆ ಮಹಾದೇವಪುರ ವ್ಯಾಪ್ತಿಯ ಐಟಿ ಬಿಟಿ ಕಂಪನಿಗಳ ಜೊತೆ 'ಮತದಾನ ಜಾಗೃತಿ' ಕಾರ್ಯಕ್ರಮ ನಡೆಯಿತು.

 Bengaluru Election 2023: BBMP Voting Awareness program in Hebbal and Mahadevapura

ಈ ವೇಳೆ ಬೆಂಗಳೂರು ನಗರ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಮಾತನಾಡಿ, ಪ್ರಜಾಪ್ರಭುತ್ವವು ಪ್ರಜೆಗಳಿಗಾಗಿಯೇ ರಚಿತವಾಗಿದೆ. ಅದಕ್ಕಾಗಿ ನಾವೆಲ್ಲರೂ ಕೈಜೋಡಿಸಿದರೆ ಮಾತ್ರ ಉತ್ತಮ ಪ್ರಜಾಪ್ರಭುತ್ವವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಮತದಾನ ಕರ್ತವ್ಯದ ಅರಿವು ಮೂಡಿಸಿದರು.

ಈ ಬಾರಿ ಬೆಂಗಳೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಗಿಂತಲೂ ಹೆಚ್ಚು ಯುವ ಮತದಾರರಿದ್ದಾರೆ. ಎಲ್ಲರೂ ತಪ್ಪದೆ ಮತದಾನ ಮಾಡುವ ಜೊತೆಗೆ ಬೇರೆಯವರಿಗೂ ತಪ್ಪದೆ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ನೋಟಾ ಆಯ್ಕೆ ಸಹ ಇದೆ: ಚಲಾಯಿಸಬಹುದು

ಮತದಾನ ಮಾಡಲು ಇಷ್ಟವಿಲ್ಲದವರಿಗೆ ನೋಟಾ(NOTA) ಎಂಬ ಆಯ್ಕೆ ಇದೆ. ಅದನ್ನು ಚಲಾಯಿಸಬಹುದಾಗಿದೆ. ಆದ್ದರಿಂದ ಮತದಾನದ ದಿನ ಅನ್ಯ ಕಾರ್ಯಗಳಿಗೆ ತೆರಳದೆ ಮತದಾನ ಮಾಡಲು ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಲ್ಲಿ ಮನವಿ ಮಾಡಿಕೊಂಡರು.

 Bengaluru Election 2023: BBMP Voting Awareness program in Hebbal and Mahadevapura

ಐಟಿ-ಬಿಟಿ ಸಂಸ್ಥೆಗಳ ಸಿ.ಇ.ಒಗಳು ಮತದಾನ ಚಲಾಯಿಸುವ ಬಗ್ಗೆ ತಮ್ಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು. ನಮ್ಮ ಬೆಂಗಳೂರು ನಗರವು ಎಲ್ಲಾ ಕ್ರೇತ್ರದಲ್ಲೂ ಮುಂದಿದ್ದು, ಇನ್ನಷ್ಟು ಉತ್ತಮ ಸ್ಥಾನಕ್ಕೇರಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವುದು ಅತ್ಯಗತ್ಯ. ಈ ಸಂಬಂಧ ತಾವುಗಳು ತಮ್ಮ ಸಹದ್ಯೋಗಿಗಳಿಗೆ ಮತ ಚಾಲಾಯಿಸಲು ಹೇಳಬೇಕು ಎಂದು ತಿಳಿಸಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರ: ಬಿಬಿಎಂಪಿಯಿಂದ ಜಾಗೃತಿ ಜಾಥ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಾಗೇಶೆಟ್ಟಿ ಹಳ್ಳಿ ಬಸ್ ನಿಲ್ದಾಣದಿಂದ ಸಂಜಯ್ ನಗರ ಬಸ್ ನಿಲ್ದಾಣದವರೆಗೆ ನಡೆದ ಮತದಾನ ಜಾಗೃತಿ ಜಾಥಾಗೆ ವಲಯ ಆಯುಕ್ತರು ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಪಿ.ಎನ್.ರವೀಂದ್ರ ರವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ಮತದಾನದ ಪ್ರಾಮುಖ್ಯತೆಯನ್ನು ಅರಿತು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜಾಗೃತಿ ನಾಟಕಗಳನ್ನು ಅಯೋಜಿಸಲಾಗುತ್ತಿದೆ ಎಂದರು.

ಮೇ 10ರಂದು ಮತದಾನದ ದಿನ ನಿಮ್ಮ ಕುಟುಂದಲ್ಲಿರುವವರು ಹಾಗೂ ಸ್ನೇಹಿತರಲ್ಲರೂ ಮತನಾದ ಮಾಡುವಂತೆ ಪ್ರೇರೇಪಿಸಬೇಕು. ಮತಗಟ್ಟೆಗಳ‌ ಬಳಿ‌ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಮತದಾನ ಮಾಡಲು ಮನವಿ ಮಾಡಿದರು.

ಜಾಥಾ ಕಾರ್ಯಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳಾದ ಶ್ರೀನಿವಾಸ ಮೂರ್ತಿ, ಅಮೃತ್ ರಾಜ್, ಕಂದಾಯ ಅಧಿಕಾರಿಗಳು, ಪೌರಕಾರ್ಮಿಕರಕು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಜಂಟಿ ಆಯುಕ್ತ ಲಿಂಗಮೂರ್ತಿ, ನಮ್ಮ ಬೆಂಗಳೂರು ಐಕಾನ್ ಆದ ಮೋಹನ್ ಕುಮಾರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+