Bengaluru Rent: 3BHK ಮನೆಗೆ ಶಿಫ್ಟ್ ಆಗಲು ದಂಪತಿ ಮಾಡಿದ ₹2.53 ಲಕ್ಷ ಖರ್ಚಿನ ವಿಡಿಯೋ ವೈರಲ್

ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಬಾಡಿಗೆ ಮನೆಯಿಂದ ಮತ್ತೊಂದು ವಿಶಾಲ ಹೆಚ್ಚುವರಿ ಕೊಠಡಿ ಇರುವ ಬಾಡಿಗೆ ಮನೆಗೆ ಸ್ಥಳಾಂತರಿಸಲು ದುಬಾರಿ ಹಣ ವ್ಯಯಿಸಿದ್ದರ ಕುರಿತು ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ. 3 BHK ಇರುವ ಫ್ಲ್ಯಾಟ್ ಗೆ ಮನೆ ಸ್ಥಳಾಂತರಕ್ಕೆ ಬರೋಬ್ಬರಿ 2.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಗಿ ತಿಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಅನಾ ಮಿಶ್ರಾ ಅನ್ನುವವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮನೆ ಸ್ಥಳಾಂತರದ ಖರ್ಚಿನ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಅದರಲ್ಲಿ ಮಿಶ್ರಾ ಅವರು, ' ಬೆಂಗಳೂರಿನ ಬೇರೆ ಕಡೆಯಿಂದ ಬೆಂಗಳೂರು ದಕ್ಷಿಣ ಭಾಗದ ಹೊಸ ಫ್ಲ್ಯಾಟ್‌ಗೆ ಸ್ಥಳಾಂತರಗೊಂಡಿದ್ದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಈ ವೇಳೆ ವಸ್ತುಗಳನ್ನು ಸ್ಥಳಾಂತರಿಸುವುದು ದೊಡ್ಡ ಸವಾಲಾಗಿರುತ್ತದೆ. ಮನೆಯ ಸಣ್ಣ, ದೊಡ್ಡ ಯಾವುದೇ ವಸ್ತುಗಳಿಗೆ ತೊಂದರೆ ಆಗದಂತೆ ಸಾಗಿಸಬೇಕಿರುತ್ತದೆ. ಇದಕ್ಕೆ ಹೆಚ್ಚು ಹಣ ಬೇಕಾಗುತ್ತದೆ' ಎಂದಿದ್ದಾರೆ.

Bengaluru Couple

ಹೊಸ ಮನೆ ಠೇವಣಗೆ 1.5 ಲಕ್ಷ ರೂ ಖರ್ಚು!

ಅನಾ ಮಿಶ್ರಾ ತಮ್ಮ ಸಂಗಾತಿ ಇಶಾನ್ ಪೈಕಿ ಇಶಾನ್ ಅವರು ಕೋಲ್ಕತ್ತಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಅವರ ಸಂಗಾತಿ ಮಿಶ್ರಾ ಬೆಂಗಳೂರಿನಲ್ಲಿ ಈ ಮೊದಲು ಬೇರೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿಂದ ನಾವು 3 BHK ಮನೆಗೆ ನಿವಾಸ ಬದಲಿಸಲು ಮುಂದಾಗಿದ್ದು ಈ ಹೊಸ ಮನೆಗೆ ನಾವು ಬರೋಬ್ಬರಿ ರೂ. 1.5 ಲಕ್ಷ ರೂಪಾಯಿ ಮುಂಗಡ ಹಣ ಪಾವತಿಸಿದ್ದೇವೆ.

ಇನ್ನೂ ಬೃಹತ್ ನಗರದಲ್ಲಿ ಬ್ರೋಕರ್ ಇಲ್ಲದೇ ಮನೆ ಹುಡುಕುವುದು ಕಷ್ಟವಾಗಿತ್ತು. ಹೀಗಾಗಿ ಒಬ್ಬ ಬ್ರೋಕರ್ ಅನ್ನು ನೇಮಸಿಕೊಂಡೆವು. ಸ್ವಂತವಾಗಿ ಮನೆ ಹುಡುಕಬಹುದಿತ್ತು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಹೊಸ ಪ್ಲ್ಯಾಟ್ ಹುಡುಕಿದ ಬ್ರೋಕರ್‍‌ಗೆ ತಿಂಗಳ ಮನೆ ಬಾಡಿಗೆಯಷ್ಟು ಅಂದರೆ ರೂ. 37,000 ಹಣ ನೀಡಿದ್ದೇವೆ' ಎಂದು ವಿವರಿಸಿದರು.

ಕೋಲ್ಕತ್ತಾದಲ್ಲಿದ್ದ ಇಶಾನ್ ಅವರು ಬೆಂಗಳೂರಿಗೆ ತಮ್ಮ ವಸ್ತುಗಳೊಂದಿಗೆ ಬರಲು ನಾವು ಪ್ಯಾಕರ್ಸ್ ಮತ್ತು ಮೂವರ್ಸ್ ರೂ. 60,000 ವ್ಯಯಿಸಿದ್ದೇವೆ. ಏಕೆಂದರೆ ಅಲ್ಲಿಂದ ಕಿಂಗ್ ಸೈಜ್ ಸೋಫಾ, ಡೈನಿಂಗ್ ಟೇಬಲ್, ಶೂ ರ್ಯಾಕ್, ಹಾಸಿಗೆ ಹಾಗೂ ಇತರ ಪ್ರಮುಖ ವಸ್ತುಗಳನ್ನು ತರಬೇಕಿತ್ತು' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಪೀಠೋಪಕರಣಗಳ ಸಾಗಣೆಗೆ 60,000 ರೂ!

ಮಿಶ್ರಾ ಅವರು, ಪೀಠೋಪಕರಣಗಳ ಸಾಗಣೆಗೆ 60,000 ರೂ. ಖರ್ಚು ಮಾಡಿದ್ದು ಸರಿಯಾಗಿದೆ. ಏಕೆಂದರೆ ದಿನಬಳಕೆ ವಸ್ತುಗಳಿಗೆ ಹಾನಿ ಆಗದಂತೆ ತರುವುದು ಮುಖ್ಯವಾಗಿರುತ್ತದೆ. ಈ ಹಿಂದೆ ಇದ್ದ ಮನೆಯಲ್ಲಿದ್ದ ಒಂದಷ್ಟು ವಸ್ತುಗಳನ್ನು ಹೊಸ 3 BHK ಮನೆಗೆ ತರಲು 3,000 ರೂ. ಖರ್ಚು ಮಾಡಲಾಗಿದೆ . ವಾಷಿಂಗ್ ಮೆಷಿನ್, ಫ್ರಿಡ್ಜ್, ನೀರು ಶುದ್ಧೀಕರಣ ಯಂತ್ರ ಬಾಡಿಗೆ ಪಡೆದಿದ್ದು, ಅದಕ್ಕೆ 2,800 ರೂ. ಖರ್ಚಾಗಿದೆ. ಅದೇ ರೀತಿ ಹೊಸದಾಗಿ ವೈ-ಫೈ ಸಂಪರ್ಕಕ್ಕೆ 700 ರೂ. ವೆಚ್ಚವಾಯಿತು. ಇದೆಲ್ಲ ಸೇರಿ ಒಟ್ಟಾರೆ ಮನೆ ಶಿಫ್ಟಿಂಗ್‌ಗೆ ಬರೋಬ್ಬರಿ 2,53,500 ರೂ. ಖರ್ಚು ಮಾಡಿದ್ದೇವೆ. ಇದರಲ್ಲಿ ಹೊಸ ಮನೆ ಸ್ವಚ್ಛತೆ, ಇತರ ಸಣ್ಣ ಖರ್ಚುಗಳನ್ನು ಸೇರಿಸಿಲ್ಲ ಎಂದು ದಂಪತಿ ತಿಳಿಸಿದ್ದಾರೆ.

ನೆಟ್ಟಿಗರು ವಿಡಿಯೋಗೆ ಪ್ರತಿಕ್ರಿಯಿಸಿ, 'ಬೆಂಗಳೂರು ದಕ್ಷಿಣದಲ್ಲಿ ಮನೆ ಬಾಡಿಗೆ 37,000 ರೂ. ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತಿಬ್ಬರು 'ಮನೆ ಶಿಫ್ಟ್ ಕುರಿತು ಮಹತ್ವದ ಮಾಹಿತಿ ನೀಡಿದ್ದನ್ನು ಶ್ಲಾಘೀಸಿದ್ದಾರೆ, ಇದೊಂದು ಮಾಹಿತಿ ನೀಡುವ, ಅನುಕೂಲಕರ ವಿಡಿಯೋ' ಎಂದಿದ್ದಾರೆ..


‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+