ವಾಣಿಜ್ಯ ಪರವಾನಗಿ ಹೆಸರಲ್ಲಿ ಉದ್ದಿಮೆದಾರರಿಗೆ ವಂಚನೆ! ನಕಲಿ ರಶೀದಿಗಳ ಬಗ್ಗೆ ಬೆಂಗಳೂರು ಪಾಲಿಕೆ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ವಾಣಿಜ್ಯ ಪರವಾನಿಗೆ ಪಡೆದು ಉದ್ದಿಮೆ ಆರಂಭಿಸಲು ಮುಂದಾಗುವ ಉದ್ದಿಮೆದಾರರು ವಂಚನೆಗೆ ಒಳಗಾಗುವ ಮುನ್ನೆ ಪಾಲಿಕೆ ನೀಡಿದ್ದ ಈ ಸುದ್ದಿಯನ್ನೊಮ್ಮೆ ತಿಳಿಯಬೇಕು. ಬೆಂಗಳೂರು ಕೇಂದ್ರ ನಗರ ಪಾಲಿಕೆ ಹೆಸರಿನಲ್ಲಿ ವಾಣಿಜ್ಯ ಪರವಾನಗಿ ನೀಡುವುದಾಗಿ ಹೇಳಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ಸಹ ದಾಖಲಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಕೆಲವು ವ್ಯಕ್ತಿಗಳು ಉದ್ದಿಮೆದಾರರಿಗೆ ವಾಣಿಜ್ಯ ಪರವಾನಗಿ (Trade License) ಮಾಡಿಕೊಡುವುದಾಗಿ ನಂಬಿಸಿ ಹಣ ಪೀಕಿದ್ದಾರೆ. ಹಣ ಪಡೆದು ಮರಳಿ ನಕಲಿ ರಶೀದಿಗಳನ್ನು ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ತಿಲಕ್ (ಮೊಬೈಲ್ ಸಂಖ್ಯೆ: 7676689656) ಹಾಗೂ ಸುಧಾಕರ್ (ಮೊಬೈಲ್ ಸಂಖ್ಯೆ: 9502148337) ಪಾಲಿಕೆ ಹೆಸರು ದುರಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Bengaluru

ಈ ಆರೋಪಿಗಳು ಬೆಂಗಳೂರು ಕೇಂದ್ರ ನಗರ ಪಾಲಿಕೆ (ಹಿಂದಿನ ಬಿ.ಬಿ.ಎಂ.ಪಿ.) ಹೆಸರನ್ನು ಬಳಸಿಕೊಂಡು ವಾಣಿಜ್ಯ ಪರವಾನಗಿ ಮಾಡಿಕೊಡುವುದಾಗಿ ಹೇಳಿ ಉದ್ದಿಮೆದಾರರನ್ನು ನಂಬಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ಸಾರ್ವಜನಿಕರು ಹಾಗೂ ಉದ್ದಿಮೆದಾರರು ಯಾರೇ ಆಗಲಿ ಇಂತಹ ವ್ಯಕ್ತಿಗಳ ಮಾತಿಗೆ ಮರುಳಾಗಿ ಯಾವುದೇ ಹಣವನ್ನು ಪಾವತಿಸಬಾರದು. ನಕಲಿ ರಶೀದಿಗಳನ್ನು ಪಡೆದು ಮೋಸ ಹೋಗದಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಮನವಿ ಮಾಡಿದೆ. ವಾಣಿಜ್ಯ ಪರವಾನಗಿಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಹಾಗೂ ಶುಲ್ಕಗಳನ್ನು ಅಧಿಕೃತ ವಿಧಾನಗಳ ಮೂಲಕ ಮಾತ್ರ ನಿರ್ವಹಿಸಲಾಗುತ್ತದೆ. ಯಾವುದೇ ಖಾಸಗಿ ವ್ಯಕ್ತಿ ಅಥವಾ ಮಧ್ಯವರ್ತಿಗೆ ಹಣ ಪಾವತಿಸಬಾರದು ಎಂದು ಪಾಲಿಕೆ ಎಚ್ಚರಿಸಿದೆ.

ಸಾರ್ವಜನಿಕರಿಗೆ ಮನವಿ

ವಾಣಿಜ್ಯ ಪರವಾನಗಿಗೆ ಸಂಬಂಧಿಸಿದ ಮಾಹಿತಿ ಅಥವಾ ಸೇವೆಗಳಿಗಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆರೋಗ್ಯ ವೈದ್ಯಾಧಿಕಾರಿಗಳ ಕಛೇರಿ, ಶಾಂತಿನಗರ ವಿಭಾಗ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, 14ನೇ ಮಹಡಿ, ಎಂ.ಜಿ. ರಸ್ತೆ, ಬೆಂಗಳೂರು ಇಲ್ಲಿಗೆ ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಯಾರಾದರೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಿಬ್ಬಂದಿಗಳ ಹೆಸರಿನಲ್ಲಿ ಹಣ ಕೇಳುವುದು, ನಕಲಿ ರಶೀದಿ ನೀಡುವುದು ಅಥವಾ ವಂಚನೆಗೆ ಯತ್ನಿಸುವುದು ಕಂಡುಬಂದಲ್ಲಿ, ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಪಾಲಿಕೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+