Bengaluru Cake Show 2024: ವಿಶ್ವದ ಬೃಹತ್ & 50ನೇ ವಾರ್ಷಿಕ ಕೇಕ್ ಪ್ರದರ್ಶನ, 7.5 ಕೋಟಿ ಮಂದಿ ಭೇಟಿ ನಿರೀಕ್ಷೆ
ಬೆಂಗಳೂರು, ಡಿಸೆಂಬರ್ 10: ಕ್ರಿಶ್ಚಿಯನ್ನರ ವಿಶೇಷ ಹಬ್ಬವಾದ ಕ್ರಿಸ್‌ಮಸ್ 2024 ಆಚರಣೆಗೆ ದಿನಗಣನೆ ಶುರುವಾಗಿದೆ. ಹಬ್ಬ ಬರಮಾಡಿಕೊಳ್ಳಲು ಸಮುದಾಯದವರು ಎಲ್ಲ ವಿಧದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ಈ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ವಾರ್ಷಿಕ ಕೇಕ್ ಶೋ ಆಚದರಣೆ ಮತ್ತಷ್ಟು ಮೆರಗು ತಂದುಕೊಡುತ್ತದೆ. ನಗರದಲ್ಲಿ ಕೇಕ್ ಶೋ ಪ್ರದರ್ಶನ ಆರಂಭಗೊಂಡು 2024ಕ್ಕೆ 50 ವರ್ಷ ಆಗಿರುವ ಹಿನ್ನೆಲೆ ಈ ಭಾರಿ ಅದ್ಧೂರಿ ಕೇಕ್ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 1974ರಲ್ಲಿ ಮೊದಲ ಕೇಕ್ ಶೋ ಆಯೋಜನೆಗೊಂಡಿತು. ಅಲ್ಲಿಂದ ಈವರೆಗೆ 49 ವರ್ಷಗಳ ಕಾಲ ಯಶಸ್ವಿ ಬೃಹತ್ ಕೇಕ್ ಶೋ ಆಯೋಜಿಸಿರುವ ಆಯೋಜಕರು ಈ ಭಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಕೇಕ್ ಪ್ರದರ್ಶನ ನಡೆಸಲಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯು ಎರಡು ವಾರಕ್ಕೂ ಹೆಚ್ಚು ಕಾಲ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಈವರೆಗಿನ 50ಅದ್ಧೂರಿ ಹಾಗೂ ವೈಭವೋಪೇತ ವರ್ಷಗಳ ಸಿಹಿ ನೆನಪುಗಳ ಮರುಕಳಿಸುತ್ತಿದೆ. ಇದಕ್ಕೆ ವಿಶ್ವದಾದ್ಯಂತ ದೇಶಿಯ ಹಾಗೂ ವಿದೇಶ ಪ್ರವಾಸಿಗರ ಪ್ರೋತ್ಸಾಹ ದೊರೆತಿದೆ.
7.5 ಕೋಟಿ ಮಂದಿ ಕೇಕ್ ಶೋ ಭೇಟಿ ಸಾಧ್ಯತೆ
ಪ್ರತಿ ವರ್ಷ ಯುಬಿ ಸಿಟಿ ಮುಂಭಾಗ ಸೇಂಟ್ ಜೋಸೆಫ್ ಶಾಲೆ ಮೈದಾನದಲ್ಲಿ ನಡೆಯುತ್ತಿದ್ದ ಈ ವಾರ್ಷಿಕ ಕೇಕ್ ಶೋ ಈ ಬಾರಿ ಹೆಬ್ಬಾಳ ರಸ್ತೆಯ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿದೆ. 'ಸುವರ್ಣ ಮಹೋತ್ಸವ' ಆದ ಕಾರಣ ವಿದೇಶಿ 50 ಲಕ್ಷ ಪ್ರವಾಸಿಗರು ಸೇರಿದಂತೆ ಒಟ್ಟಾರೆಯಾಗಿ 7.5 ಕೋಟಿ ಮಂದಿ ಕೇಕ್ ಶೋ ವಿಕ್ಷಿಸುವ ಸಾಧ್ಯತೆ ಇದೆ.

ಈ ಕಾರಣದಿಂದ ಪಾರ್ಕಿಂಗ್‌ಗೆ ಅನುಕೂಲವಾಗುವಂತೆ ಮಾಡಲು, ಸುಗಮ ಸಂಚಾರಕ್ಕೆ, ಬಂದು ಹೋಗುವ ಪ್ರವಾಸಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿಶಾಲವಾದ ಅರಮನೆ ಮೈದಾನದಲ್ಲಿ ಕೇಕ್ ಶೋ ಇಟ್ಟುಕೊಳ್ಳಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ಮತ್ತು ಮೈಬೇಕರ್ಸ್‌ಮಾರ್ಟ್‌ನಿಂದ್ ಕೇಕ್ ಶೋ ಆಯೋಜಿಸಲಾಗಿದೆ.
ಇಂಡಿಯಾ ಬೇಕ್ ಶೋ ಬೆಂಗಳೂರು 2024 ಬೇಕಿಂಗ್, ಸಕ್ಕರೆ ಕಲೆ ಮತ್ತು ಸೃಜನಶೀಲತೆಯ ಉತ್ಸವ ಆಚರಣೆ ಇದಾಗಿದೆ. ಇಂಡಿಯಾ ಬೇಕ್ ಶೋ 5ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಜೆಪಿ ನಗರದ ಎಂಎಲ್‌ಆರ್ ಕನ್ವೆನ್ಷನ್ ಕೇಂದ್ರದಲ್ಲಿ ಡಿಸೆಂಬರ್ 13 ರಿಂದ 15 ರವರೆಗೆ ಬೇಕಿಂಗ್ ಉತ್ಸಾಹಿಗಳು, ವೃತ್ತಿಪರರು ಮತ್ತು ಕುಟುಂಬಗಳನ್ನು ಬೆರಗುಗೊಳಿಸುವ ಕೇಕ್ ಹಬ್ಬ ನಡೆಯಲಿದೆ.
ನಿಮಗೆ ಗೊತ್ತಿಲ್ಲದ "ಸಿಹಿ ಲೋಕ": ಯಾವೆಲ್ಲ ಕೇಕ್ ಇರಲಿವೆ?
ಇನ್ನೂ ಅರಮನೆ ಮೈದಾನದಲ್ಲಿ ಈ ಆವೃತ್ತಿಯ ಥೀಮ್ ಕಿಡ್ಸ್ ಶುಗರ್ ವಂಡರ್‌ಲ್ಯಾಂಡ್ ಮತ್ತು ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆರ್ಚರಣೆ ಪ್ರಯುಕ್ತ ಕೇಕ್ ಶೋ ಹಮ್ಮಿಕೊಳ್ಳಲಾಗಿದೆ. ಇಲ್ಲಿಮೋನಾ ಮತ್ತು ಮಾಯಿ, ಶ್ರೆಕ್ ಮತ್ತು ಫ್ಯಾಮಿಲಿ ಮತ್ತು ಮೋಡಿಮಾಡುವ ಅಂಡರ್‌ವಾಟರ್ ವರ್ಲ್ಡ್ ಮತ್ತು ಕ್ರಿಸ್ಮಸ್ ವೇದಿಕೆ, ಅಲಂಕಾರಗಳ ಸಾಂಪ್ರದಾಯಿಕ ಪಾತ್ರಗಳಿಂದ ಪ್ರೇರಿತವಾದ ದೊಡ್ಡ ಗಾತ್ರದ ಸಕ್ಕರೆ ವಿನ್ಯಾಸಗಳ ಕೇಕ್ ಪ್ರದರ್ಶನ ಇರಲಿದೆ.
ಪ್ರದರ್ಶನಗಳ ಜೊತೆಗೆ ಸಂದರ್ಶಕರು 100+ ಕೇಕ್ ಸ್ಪರ್ಧೆಯ ಭಾಗವಾಗಿ ವಿನ್ಯಾಸಗೊಳಿಸಲಾದ ಕೇಕ್ ಮಾದರಿಗಳನ್ನು ಕಣ್ತುಂಬಿಕೊಳ್ಳಬಹುದು. ದೇಶದಾದ್ಯಂತದ ಕೇಕ್ ಕಲಾವಿದರ ಸೃಜನ ಶೀಲತೆಯನ್ನು ನೀವು ಕಾಣಬಹುದಾಗಿದೆ.
ಬೃಹತ್ ಗಾತ್ರದ ಕೇಕ್‌ನಲ್ಲಿ ಅರಳಿದ ರಾಮ ಮಂದಿರ
ಸಕ್ಕರೆ, ಕ್ರೀಮ್, ಬೇಕರಿ ಪದಾರ್ಥಗಳಲ್ಲಿ ಒಟ್ಟು 850 ಕೆ.ಜಿ. ತೂಕದ ರಾಮ ಮಂದಿರವನ್ನು ರಚಿಸಲಾಗಿದೆ. ಇದಕ್ಕೆ ಆಯೋಜಕರ ತಂಡದ ಕಲಾವಿದರು ಒಟ್ಟು 45 ದಿನಗಳನ್ನು ವ್ಯಯಿಸಿ ತಯಾರಿಸಿದ್ದಾರೆ. ಡಿವೈನ್ ಮೆಜೆಸ್ಟಿ: ಸಕ್ಕರೆ ಮಂದಿರ ಹೆಸರಿನಲ್ಲಿ ತಯಾರಿಸಿದ್ದಾರೆ. ಇದು ಈ ಬಾರಿಯ ಪ್ರೇಕ್ಷಕರ ಆಕರ್ಷಣೆಗಳಲ್ಲಿ ಒಂದಾಗಿದೆ.












Click it and Unblock the Notifications