Cab Driver: ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರ ದಿನದ ದುಡಿಮೆ ಕೇಳಿ ಶಾಕ್ ಆದ ನೆಟ್ಟಿಗರು!

ಬೆಂಗಳೂರು ಎನ್ನುವುದು ದುಡಿಯುವವರಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿಡುತ್ತದೆ. ಬೀದಿ ಬದಿಯ ವ್ಯಾಪಾರಿಯಿಂದ ಹಿಡಿದ ವಿಶ್ವದ ಪ್ರಮುಖ ಟೆಕ್ ಕಂಪನಿಗಳವರೆಗೆ ಬೆಂಗಳೂರು ನೆಲೆ ಕೊಟ್ಟಿದೆ. ಸಾಮರ್ಥ್ಯ, ಬುದ್ದಿವಂತಿಕೆ, ಕೌಶಲ್ಯಗಳಿಗೆ ತಕ್ಕಂತೆ ಹಣ ಗಳಿಕೆ ಮಾಡಬಹುದಾಗಿದೆ.

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರ ದುಡಿಮೆ ಕೂಡ ಉತ್ತಮವಾಗಿರುತ್ತದೆ. ಇಲ್ಲೊಬ್ಬ ಕ್ಯಾಬ್ ಚಾಲಕ ತನ್ನ ದಿನದ ದುಡಿಮೆ ಬಗ್ಗೆ ಮಾಹಿತಿ ಕೊಟ್ಟಿದ್ದು, ಪ್ರಯಾಣಿಕರೊಬ್ಬರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಬ್ ಚಾಲಕನ ದಿನದ ದುಡಿಮೆ ಬಗ್ಗೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.

Bengaluru Cab Driver Shares Daily Earnings Sparks Online Discussion

ರೆಡ್ಡಿಟ್ ಬಳಕೆದಾರರೊಬ್ಬರು ಕ್ಯಾಬ್ ಚಾಲಕನ ಆದಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ದಿನವೊಂದಕ್ಕೆ ₹ 3,000ದಿಂದ ₹ 4,000 ಗಳಿಸುತ್ತಿದ್ದು, ಓಲಾ ಕ್ಯಾಬ್‌ಗಳನ್ನು ಓಡಿಸುವ ಮೂಲಕ ಹೆಚ್ಚುವರಿ ಆದಾಯವನ್ನೂ ಪಡೆಯುತ್ತಿದ್ದಾರೆ ಎಂದು ಚಾಲಕ ಹೇಳಿರುವುದಾಗಿ ಬಳಕೆದಾರರು ಹೇಳಿದ್ದಾರೆ.

"ನಾನು ಇವತ್ತು ಫಂಕ್ಷನ್‌ನಿಂದ ಹಿಂತಿರುಗುತ್ತಿದ್ದೆ ಮತ್ತು ನಾನು ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್ ಡ್ರೈವರ್‌ನೊಂದಿಗೆ ಮಾತನಾಡುವಾಗ, ನಾನು ಅವರ ಸಂಪಾದನೆಯನ್ನು ಕೇಳಿದೆ. ಅವರು ದಿನಕ್ಕೆ ಸುಮಾರು 3000 ರಿಂದ 4000 ಗಳಿಸುತ್ತೇನೆ ಎಂದು ಹೇಳಿದನು. ನನಗೆ ಆಘಾತವಾಯಿತು!" ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

"ದಿನಕ್ಕೆ 3000 ರೂಪಾಯಿ ದುಡಿದರೂ, ತಿಂಗಳಲ್ಲಿ 25 ದಿನ ಕೆಲಸ ಮಾಡಿದರೆ 75,000 ರೂಪಾಯಿ ಆಗುತ್ತದೆ. ಪೆಟ್ರೋಲ್ ವೆಚ್ಚವನ್ನು ತೆಗೆದರೂ ಅವರ ಬಳಿ ಸಾಕಷ್ಟು ಹಣ ಉಳಿಯುತ್ತದೆ ಎಂದರು. ಇದಷ್ಟ ಅಲ್ಲದೆ ಮತ್ತೊಂದು ಕ್ಯಾಬ್‌ ಅನ್ನು ಓಲಾಗೆ ಬಿಟ್ಟಿದ್ದು, ಅದರಲ್ಲೂ ದಿನ ಆದಾಯ ಸಿಗುತ್ತದೆ ಎಂದಿದ್ದಾರೆ. ಅವರ ಮಕ್ಕಳು ಒಳ್ಳೆಯ ಶಾಲೆಗೆ ಹೋಗುತ್ತಾರೆ. 2019ರಲ್ಲಿ ಕೆಲಸ ಕಳೆದುಕೊಂಡ ಬಳಿಕ ಕ್ಯಾಬ್ ಚಾಲನೆ ಮಾಡಲು ಶುರು ಮಾಡಿದ್ದಾಗಿ" ಹೇಳಿದ್ದಾರೆ.

ಒಳ್ಳೆಯ ಸಂಪಾದನೆ ಇದೆ!

ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ಬಳಕೆದಾರರು ಕ್ಯಾಬ್ ಚಾಲಕರ ಗಳಿಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

"ಇದು ಸಾಕಷ್ಟು ಸಮಂಜಸವಾಗಿದೆ ಮತ್ತು ನಂಬಲರ್ಹವಾಗಿದೆ. ನಾನು ಓಲಾ ಡ್ರೈವರ್ ಆಗಿ ಕೆಲಸ ಮಾಡುವ ಆಪ್ತ ಸ್ನೇಹಿತನ ಸಹೋದರನನ್ನು ಹೊಂದಿದ್ದೇನೆ. ಅವನು ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ರೈಲ್ವೇ ನಿಲ್ದಾಣದ ಪಿಕಪ್‌ಗಳ ಮೇಲೆ ಕೇಂದ್ರೀಕರಿಸುತ್ತಾನೆ. ಸ್ವಲ್ಪ ಹೆಚ್ಚು ಸಮಯ ಕೆಲಸ ಮಾಡುತ್ತಾನೆ. ಆದರೆ ಎಲ್ಲಾ ಖರ್ಚಿನ ನಂತರ ತಿಂಗಳಿಗೆ ಸುಮಾರು 80 ಸಾವಿರ ಆರಾಮವಾಗಿ ದುಡಿಯುತ್ತಾರೆ. ಅವರು ಸಾಕಷ್ಟು ಆರಾಮದಾಯಕ ಜೀವನವನ್ನು ನಡೆಸುತ್ತಾರೆ ಮತ್ತು ಯಲಹಂಕದಲ್ಲಿ 30/40 ಮನೆಯನ್ನು ಹೊಂದಿದ್ದಾರೆ ಮತ್ತು ಅವರು ತಮ್ಮ ಕ್ಯಾಬ್ ಗಳಿಕೆಯಿಂದ ಖರೀದಿಸಿದ ಒಂದೆರಡು ಎಕರೆ ಭೂಮಿಯನ್ನು ಹೊಂದಿದ್ದಾರೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+