ರಾಮಾಯಣ 'ಸೀತೆ'ಯ ಮನದ ಮಾತಿಗೆ ದನಿ ಆಗೋಣ ಬನ್ನಿ
ಬೆಂಗಳೂರು, ಡಿಸೆಂಬರ್, 07: ಬೆಂಗಳೂರಿನ ಅನಾವರಣ ಟ್ರಸ್ಟ್ ಸಹಯೋಗದೊಂದಿಗೆ ಶಿವಮೊಗ್ಗದ ಸ್ಪೂರ್ತಿ ಸಾಂಸ್ಕೃತಿಕ ಸಂಸ್ಥೆಯು 'ಮೈಥಿಲಿ' ಎಂಬ ಏಕವ್ಯಕ್ತಿ ಪ್ರದರ್ಶನವನ್ನು ಬೆಂಗಳೂರಿನ ಹನುಮಂತ ನಗರದ ಕೆ.ಎಚ್ ಕಲಾಸೌಧದಲ್ಲಿ ಡಿಸೆಂಬರ್ 8 ರ ಮಂಗಳವಾರದಂದು ಸಂಜೆ 6.30ಕ್ಕೆ ಉಚಿತ ಪ್ರದರ್ಶನ ಹಮ್ಮಿಕೊಂಡಿದೆ.
'ಮೈಥಿಲಿ' ನಾಟಕದ ವೇದಿಕೆ ಸಮಾರಂಭದ ಉದ್ಘಾಟಕರಾಗಿ ಖ್ಯಾತ ನಟರಾದ ಪ್ರೊ. ಲಕ್ಷ್ಮೀ ಚಂದ್ರಶೇಖರ್, ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಛಲವಾದಿ ಹಾಗೂ ಅಂಕಣಕಾರರಾದ ಬಿ. ಚಂದ್ರೇಗೌಡ, ಅಧ್ಯಕ್ಷರಾಗಿ ನಾಟಕಕಾರರಾದ ಡಾ.ಕೆ.ವೈ ನಾರಾಯಣ ಸ್ವಾಮಿ ಆಗಮಿಸಲಿದ್ದಾರೆ.[ಬೆಂಗಳೂರು ಮೌಂಟ್ ಕಾರ್ಮೆಲ್ ಕನ್ನಡೋತ್ಸವಕ್ಕೆ ಕಲಾ ಸ್ಪರ್ಶ]

ರಂಗಭೂಮಿಯಲ್ಲಿ ಸತತ 30 ವರ್ಷಗಳಿಂದ ಸಕ್ರೀಯವಾಗಿ ಪಾಲ್ಗೊಳ್ಳುತ್ತಾ, ನಟನೆ, ನಿರ್ದೇಶನದಲ್ಲಿ ಹಲವಾರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ 'ಡಾ. ಸಾಸ್ವೆಹಳ್ಳಿ ಸತೀಶ್' ಈ ನಾಟಕದ ನಿರ್ದೇಶಕರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರಾದ 'ಹರಿಗೆ ಗೋಪಾಲಸ್ವಾಮಿ' ಅವರ ಬೆಳಕಿನ ವಿನ್ಯಾಸ, ನೀನಾಸಂ 'ಉಮೇಶ್ ಆಚಾರ್ಯ' ಅವರ ಸಂಗೀತ ನಾಟಕದ ಮೆರಗನ್ನು ಹೆಚ್ಚಿಸಲಿದೆ. ಸುಮಾರು 8ಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯಪಾತ್ರಧಾರಿಯಾಗಿ ನಟನೆಗೈದ, ಸಂಗೀತಗಾರ್ತಿಯಾದ ಸುಪ್ರಿಯಾ ಎಸ್. ರಾವ್ ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ಸೀತೆಯ ಭಾವಾಭಿಲಾಷೆಗಳನ್ನು ತೆರೆದಿಡಲಿದ್ದಾಳೆ. [ಸಾಹಿತ್ಯ ವಿಮರ್ಶೆ ಅಂದರೆ ಏನು? ಏಕೆ? ಹೇಗೆ ಹುಟ್ಟಿತು?]

ಮೈಥಿಲಿ ನಾಟಕದ ಒಳನೋಟ:
ರಾಮಾಯಣದಲ್ಲಿ ಮಹಾಪಾತ್ರಗಳ ಸಾಲಿನಲ್ಲಿ ಕಾಣುವ ಸೀತೆಯನ್ನು ಸದಾ ರಾಮನ ಆಜ್ಞಾಧಾರಳಕಾಗಿ, ಸಾಕು ತಂದೆಯ ಆರಾಧಕಳಾಗಿ ಚಿತ್ರಿಸುತ್ತಾ ಬಂದಿರುವುದರಿಂದ ಆಕೆ ಒಬ್ಬ ಸ್ರೀ, ಅವಳಿಗೆ ಅವಳದೇ ಆದ ತವಕ ತಲ್ಲಣ, ಆಸೆ ಆಕಾಂಕ್ಷೆಗಳಿವೆ ಎಂಬ ನೆಲೆಗಟ್ಟಿನಲ್ಲಿ ನೋಡಲೂ ಸಾಧ್ಯವಾಗಿಲ್ಲ.
'ನಃ ಸ್ತ್ರೀ...ಸ್ವಾತಂತ್ರಮರ್ಹತಿ' ಎಂಬ ತತ್ವ ಸಾರುವ ಸೀತೆಯ ಹುಟ್ಟು, ಸ್ವಯಂವರ, ವನವಾಸ, ಅಪಹರಣ, ಪರಿತ್ಯಾಗವನ್ನು ನೋಡಿದಾಗ ಸೀತೆ ಒಬ್ಬಳು ದುರಂತ ಹೆಣ್ಣು ಮಕ್ಕಳ ಕಥೆಗಳ ಸಾಲಿನಲ್ಲಿ ನಿಲ್ಲುತ್ತಾಳೆ.[ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್]
ಶತಮಾನಗಳ ಕಾಲ ಒಪ್ಪಿಕೊಂಡಿದ್ದನ್ನು ಪ್ರಶ್ನಿಸುವ, ತರ್ಕಕ್ಕೆ ಹಚ್ಚುವ ಮತ್ತು ಪುರಾಣದ ಮೂಲಕ ವಿರೋಚಿತ ಘಟನೆಗಳ ಹಿಂದಿನ ವಿರೂಪಗಳನ್ನು ಅತ್ಯಂದ್ಭುತವಾದ ನಾಟಕವೇ 'ಮೈಥಿಲಿ'.












Click it and Unblock the Notifications