Bengaluru 2nd Airport: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ತಜ್ಞರ ಮಹತ್ವದ ಸಲಹೆ
Bengaluru 2nd Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್‌ಗಳನ್ನು ಒಳಗೊಂಡಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಮಾತ್ರ ಕಡಿಮೆಯಾಗುತ್ತಿಲ್ಲ. ಆದ್ದರಿಂದ ಸರ್ಕಾರವು ಬೆಂಗಳೂರಿನ ಬಳಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಈಗಾಗಲೇ ಸ್ಥಳಗಳನ್ನು ಕೂಡ ಗುರುತು ಮಾಡಲಾಗಿದೆ. ಆದರೆ ಇದೇ ಸ್ಥಳ ಅಂತಾ ಇನ್ನೂ ನಿಗಧಿಯಾಗಿಲ್ಲ. ಈ ನಡುವೆಯೇ ತಜ್ಞರು ಮಹತ್ವದ ಸಲಹೆಯೊಂದನ್ನು ಕೊಟ್ಟಿದ್ದಾರೆ.
ಬೆಂಗಳೂರಿನ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಾಲ್ಕು ಸ್ಥಳಗಳನ್ನು ಸಹ ಗುರುತಿಸಲಾಗಿತ್ತು. ಇದರ ನಡುವೆಯೂ ನೆಲಮಂಗಲದಲ್ಲಿ ಸರ್ವೇ ಕಾರ್ಯ, ಸಮೀಕ್ಷೆಗಳನ್ನು ಕೂಡ ನಡೆಸಲಾಗಿತ್ತು. ಈ ಭಾಗದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಆದರೆ, ಇಲ್ಲಿನ ಜನರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಫಲವತ್ತಾದ ಭೂಮಿಯನ್ನು ನೀಡಲಯ ನಾವು ತಯಾರಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

ಮತ್ತೊಂದೆಡೆ ಜಿ.ಪರಮೇಶ್ವರ್, ವಿ.ಸೋಮಣ್ಣ ಸೇರಿದಂತೆ ಹಲವುರ ತುಮಕೂರಿನ ಬಳಿಯೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಿ. ಇದರಿಂದ ಉತ್ತರ ಕರ್ನಾಟಕ ಸೇರದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯ ಆದಂತಾಗಲಿದೆ ಅಂತಲೂ ಹೇಳಿದ್ದರು. ಆದರೆ, ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸದಂತೆ ಕಾಣುತ್ತಿಲ್ಲ.
ಜಾಗ ನಿಗದಿ ಬಗ್ಗೆಯೇ ಇದೀಗ ಭಾರೀ ಚರ್ಚೆಗಳು ನಡೆಯುತ್ತಿದ್ದು, ಈ ನಡುವೆಯೇ ತಜ್ಞರು ಯಾವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಉತ್ತಮ ಎನ್ನುವ ಸಲಹೆಯನ್ನ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಾಗಿದ್ದು, ಇದು ನಿರ್ಮಾಣವಾದರೆ ಕೈಗಾರಿಕೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಆಗುತ್ತದೆ. ಉತ್ತರದಲ್ಲಿ ಈಗಾಗಲೇ ವಿಮಾನ ನಿಲ್ದಾಣ ಇದೆ. ಆದ್ದರಿಮದ ದಕ್ಷಿಣದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು 2040 ಶೃಂಗಸಭೆಯಲ್ಲಿ ಬೆಂಗಳೂರಿಗೆ ಎಷ್ಟು ವಿಮಾನ ನಿಲ್ದಾಣ ಅಗತ್ಯ ಎಂಬ ವಿಚಾರದ ಬಗ್ಗೆ ವೈಮಾನಿಕ ಕ್ಷೇತ್ರ ತಜ್ಞ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ವಿಮಾನ ನಿಲ್ದಾಣಗಳ ಅಗತ್ಯ ಇದೆ. ಇದರಿಂದ ವಿಮಾನ ನಿಲ್ದಾಣಗಳ ನಡುವೆ ಸ್ಪರ್ಧೆ ಹೆಚ್ಚಾಗಲಿದೆ. ಅಲ್ಲದೆ, ಪ್ರಯಾಣ ದರ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಉತ್ತರದಲ್ಲಿ ವಿಮಾನ ನಿಲ್ದಾಣ ಇದ್ದು, ಈ ಭಾಗದಲ್ಲೇ ಮತ್ತೊಂದು ವಿಮಾನ ನಿಲ್ದಾಣ ನಿತರ್ಮಾಣವಾದ್ರೆ, ಮತ್ತಷ್ಟು ದಟ್ಟಣೆ, ಸಮಸ್ಯೆ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಕಾರ್ಯಕರ್ತ ವಿವೇಕ್ ಮೆನನ್ ಮಾತನಾಡಿದ್ದು, ಹಿಂದೆ ದಕ್ಷಿಣದಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿತ್ತು. ಉತ್ತರದಲ್ಲಿ ಮತ್ತಷ್ಟು ಸಮಸ್ಯೆಯನ್ನು ಉಂಡುಮಾಡುತ್ತದೆ. ಆದ್ದರಿಂದ ದಕ್ಷಿಣ ಭಾಗದಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾದ್ರೆ ಸೂಕ್ತ ಎಂದು ತಿಳಿಸಿದ್ದಾರೆ.
ಹೀಗೆ ತಜ್ಞರ ಅಭಿಪ್ರಾಯಗಳೆಲ್ಲವೂ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ರೆ, ದಕ್ಷಿಣ ಭಾಗದಲ್ಲೇ ಮಾಡಬೇಕು ಎನ್ನುವುದಾಗಿದೆ. ಒಂದು ವೇಳೆ ಉತ್ತರದಲ್ಲಿ ನಿರ್ಮಾಣ ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಅಂತಲೂ ಹೇಳಿದ್ದಾರೆ.












Click it and Unblock the Notifications