ಬೆಂಗಳೂರು: ಆಟೋ ಹತ್ತಿದ ಯುವತಿ ಕೊಂಚದರಲ್ಲಿ ಬಚಾವ್

ಬೆಂಗಳೂರು, ಡಿಸೆಂಬರ್. 03: ಮಹಾನಗರದಲ್ಲಿ ಮತ್ತೆ ಮಹಿಳೆಯರಿಗೆ ಭದ್ರತೆ ಅಭಾವ ಕಾಡುತ್ತಿದೆ. ಬೈಕ್ ಸವಾರರಿಬ್ಬರು ಯುವತಿಯ ರಕ್ಷಣೆಗೆ ಪರೋಕ್ಷ ಕಾರಣರಾಗಿದ್ದಾರೆ. ಕಾಮುಕರ ಕೈಯಿಂದ ಯುವತಿ ಕೊಂಚದರಲ್ಲಿ ತಪ್ಪಿಸಿಕೊಂಡಿದ್ದಾಳೆ.

ಡ್ರಾಪ್ ಕೊಡುವ ನೆಪದಲ್ಲಿ ಆಟೋ ಚಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿ 23 ವರ್ಷದ ಗುಜರಾತ್ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿದೆ.[ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆಟೋ ಚಾಲಕ]

auto

ಜೆ.ಸಿ.ನಗರದ ನಂದಿದುರ್ಗ ರಸ್ತೆಯಲ್ಲಿ ಮಂಗಳವಾರ ರಾತ್ರಿ 11.30ರಲ್ಲಿ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಟೋ ನೋಂದಣಿ ಸಂಖ್ಯೆ ಮಾಹಿತಿ ಕೊಡದ ಹಿನ್ನೆಲೆಯಲ್ಲಿ ಸಿಗ್ನಲ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿರುವ ಮಾಹಿತಿ ಕಲೆ ಹಾಕಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.[ಮಹಾನಗರಕ್ಕೆ ವೇಷ ಹೊಂದಿಕೆಯಾಗ್ದಿದ್ರೆ ಅಷ್ಟೇ ಕತೆ!]

ಗುಜರಾತ್ ಮೂಲದ ಯುವತಿಗೆ ಕಿರುಕುಳ
ಗುಜರಾತ್ ಮೂಲದ ಯುವತಿ ಜೆ.ಸಿ.ನಗರದಲ್ಲಿ ವಾಸವಾಗಿದ್ದು ಕಮರ್ಷಿಯಲ್ ಸ್ಟ್ರೀಟ್‌ನ ಉಡುಪು ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಳು. ನ.8 ರಂದು ಕೆಲಸ ಬಿಟ್ಟಿದ್ದು, ಮಂಗಳವಾರ ರಾತ್ರಿ ಸ್ನೇಹಿತನ ಜತೆ ಎಂ.ಜಿ. ರಸ್ತೆಗೆ ಬಂದಿದ್ದಳು. ಬಳಿಕ ರಾತ್ರಿ 11.30 ರಲ್ಲಿ ಕಾವೇರಿ ಎಂಪೋರಿಯಂ ಬಳಿ ಯುವತಿಯನ್ನು ಆಟೋಗೆ ಹತ್ತಿಸಿ ಸ್ನೇಹಿತ ತೆರಳಿದ್ದ.

ಆದರೆ ಆಟೋ ಹತ್ತಿದ ಯುವತಿಯನ್ನು ನಂದಿದುರ್ಗ ರಸ್ತೆಯಲ್ಲಿ ಕರೆದೊಯ್ದ ಮತ್ತೊಬ್ಬ ಸ್ನೇಹಿತನನ್ನು ಆಟೋಗೆ ಹತ್ತಿಸಿಕೊಂಡು ತನ್ನ ಸೀಟಿನ ಪಕ್ಕದಲ್ಲಿ ಕೂರಿಸಿಕೊಂಡಿದ್ದಾನೆ. ಆದರೆ ಆಕೆ ಮನೆ ಸೇರುವ ಮುನ್ನ ಆಟೋ ನಿಲ್ಲಿಸಿ ಆಕೆ ಜತೆ ಅಸಭ್ಯವಾಗಿ ವರ್ತಿಸಲು ಇಬ್ಬರು ಆರಂಭಿಸಿದ್ದಾರೆ. ಅದೇ ವೇಳೆಗೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಚಾಲಕರನ್ನು ಮಾತನಾಡಿಸುವುದಕ್ಕೋಸ್ಕರ ಬೈಕ್ ನಿಲ್ಲಿಸಿದರು. ಇದೇ ಅವಕಾಶ ಬಳಸಿಕೊಂಡ ಯುವತಿ ತಪ್ಪಿಸಿಕೊಂಡಿದ್ದಾಳೆ. ಬುಧವಾರ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+