ಬೆಂಗಳೂರಿನಲ್ಲಿ ಮನೆ ಬಾಡಿಗೆ, ಲೀಸ್ ಪಡೆಯುವ ಮುನ್ನ ಎಚ್ಚರ.. ಎಚ್ಚರ.. : ಬಾಡಿಗೆದಾರರ ಬಳಿ ಹಣ ಪಡೆದು ಪಂಗನಾಮ

ಬೆಂಗಳೂರು ಫೆಬ್ರವರಿ 22: ಬೆಂಗಳೂರಿನಲ್ಲಿ ಮನೆ ಬಾಡಿಗೆ ಹಾಗೂ ಲೀಸ್‌ಗೆ ಮನೆ ಪಡೆಯುವ ಮನ್ನ ನೂರು ಬಾರಿ ಯೋಚನೆ ಮಾಡಬೇಕು. ಯಾಕೆಂದರೆ ಸ್ವಲ್ಪ ಮೈ ಮರೆತರೂ ಕೂಡ ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಮನೆ ಮಾಲೀಕನ ಬಳಿ ಬಾಡಿಗೆಗೆ ಬಂದಿರುವುದಾಗಿ ಹೇಳಿ ಬಾಡಿಗೆದಾರರ ಬಳಿ ಮನೆ ಲೀಸ್‌ ನೀಡುವುದಾಗಿ ಹಣ ದೋಚಿದ ಮಧ್ಯವರ್ತಿಗಳ ಜಾಲ ಪತ್ತೆಯಾಗಿದೆ.

ಹೌದು.. ಬೆಂಗಳೂರಿನಲ್ಲಿ ಲೀಸ್‌ಗೆ ಹಣ ಪಡೆದು ಮೋಸ ಮಾಡುವ ಜಾಲವೊಂದನ್ನು ಸಿಸಿಬಿ ಪತ್ತೆ ಮಾಡಿದೆ. ಈ ಮಧ್ಯವರ್ತಿಗಳು ಮನೆ ಮಾಲೀಕರಿಗೆ ಬಾಡಿಗೆ ಅಂತಾರೆ, ಬಾಡಿಗೆದಾರರ ಬಳಿ ಲೀಸ್‌ಗೆ ಹಣ ಪಡೆದು ವಂಚಿಸುತ್ತಾರೆ. ಈ ಬಗ್ಗೆ ಮಾಹಿತಿ ಬಂದ ಬೆನ್ನಲ್ಲೇ ಸಸಿಸಿಬಿಯಿಂದ ಆರೋಪಿ ಖಲೀಲ್ ಷರೀಫ್ ಎಂಬಾತನನ್ನು ಬಂಧಿಸಲಾಗಿದೆ. ಕರೆದುಕೊಂಡು ಹೋಗುವಂತಹ ಮಧ್ಯವರ್ತಿಗಳು ಲೀಸ್‌ಗೆಂದು ಹಣ ಪಡೆಯುವ ಜಾಲ ಸಕ್ರಿಯವಾಗಿದೆ.

Be careful before renting a house and before getting a lease in bengaluru

ಈ ಆರೋಪಿ ಟ್ಯಾಂಜನೈಟ್ ರಿಯಾಲಿಟಿ ಇಂಡಿಯಾ ಪ್ರೈ.ಲಿ.ಕಂಪನಿ ಹೊಂದಿದ್ದನು. ಈ ಕಂಪನಿ ಮಾಲೀಕ ಲೀಸ್‌ ಮನೆಗಳ ಬಗ್ಗೆ ಜಾಹೀರಾತು ನೀಡುತ್ತಾನೆ. ಮನೆ ಕೇಳಿಕೊಂಡು ಬಂದವರನ್ನು ಮನೆ ಬಳಿ ಕರೆದೊಯ್ಯುತ್ತಿದ್ದನು. ಮನೆ ಮಾಲೀಕನ ಬಳಿ ಬಾಡಿಗೆ ಅಂತೇಳಿ ಮನೆ ಕೊಡಿಸುತ್ತಿದ್ದನು. ಆದರೆ ಬಾಡಿಗೆದಾರರ ಬಳಿ ಲೀಸ್‌ ಎಂದು ಹಣ ಪಡೆದು ಮೋಸ ಮಾಡುತ್ತೊದ್ದನು.

ಈ ಆರೋಪದ ಮೇಲೆ ಆರೋಪಿ ಖಲೀಲ್ ಎಂಬಾತನ್ನು ಅರೆಸ್ಟ್ ಮಾಡಲಾಗಿದೆ. ಮತ್ತೊಬ್ಬ ಆರೋಪಿ ಸೈಯದ್‌ಗಾಗಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಶೋಧ ಕಾರ್ಯ ಮುಂದುವರೆಸಿದೆ.

ಕಳೆದ ವರ್ಷ ಇಂಥಹದ್ದೇ ಪ್ರಕರಣ ವರದಿ..

ಬೆಂಗಳೂರಿನ ಝಿಯು ಹೋಮ್ಸ್ ಕಂಪನಿ ಮಾಲೀಕ, ಮನೆ ಮಾಲೀಕರಿಗೆ ಮತ್ತು ಬಾಡಿಗೆದಾರರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಝಿಯು ಹೋಮ್ಸ್ ಕಂಪನಿ ಮಾಲೀಕ ಅಹ್ಮದ್ ಅಲಿಬೇಗ್ ವಂಚನೆ ಮಾಡಿದ ಆರೋಪ ಹೊತ್ತಿದ್ದನು. ಶಿವಕುಮಾರ್, ದೀಪಾಂಕರ್, ಆಯಿಶಾ, ಇರ್ಫಾನ್ ಮೋಸ ಹೋದ ಮನೆ ಮಾಲೀಕರು. ಪೀಟರ್ ಮೋಸ ಹೋದ ಬಾಡಿಗೆದಾರರು.

Be careful before renting a house and before getting a lease in bengaluru

ಆರೋಪಿ ಮನೆ ಅಹ್ಮದ್ ಅಲಿಬೇಗ್ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಮಧ್ಯವರ್ತಿ ರೀತಿ ಕೆಲಸ ಮಾಡುತ್ತಿದ್ದನು. ಖಾಲಿ ಇದ್ದ ಮ‌ನೆಗಳನ್ನು ಬಾಡಿಗೆ ಕೊಡಿಸುವುದಾಗಿ ಮಾಲೀಕರ ಬಳಿ ಒಪ್ಪಂದ ಮಾಡಿಕೊಳ್ಳುತ್ತಿದ್ದನು. ಅಹ್ಮದ್ ಅಲಿಬೇಗ್ ಬಾಡಿಗೆದಾರರಿಗೆ "ಈ ಮನೆ ಮಾಲಿಕ ನಾನೇ" ಎಂದು ಹೇಳಿ ಮನೆಯನ್ನು ಲೀಸ್​ಗೆ ಕೊಡುತ್ತಿದ್ದನು. ಮನೆ ಮಾಲೀಕರಿಗೆ ಒಂದೆರಡು ತಿಂಗಳ ಬಾಡಿಗೆ ನೀಡಿ ನಂತರ ಬಾಡಿಗೆ ಹಣ ಕೊಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡು ನಿಜವಾದ ಮಾಲೀಕರು ಬಾಡಿಗೆದಾರರು ಇದ್ದ ಮನೆ ಬಳಿ ವಿಚಾರಿಸಿದಾಗ ಅಸಲಿಯತ್ತು ಬಯಲಾಗಿತ್ತು.

ಈ ಬಗ್ಗೆ ಅಹ್ಮದ್ ಅಲಿಬೇಗ್ ಬಳಿ ವಿಚಾರಿಸಿದಾಗ ಮನೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇದೇ ರೀತಿ ಹತ್ತಾರು ಮನೆ ಮಾಲೀಕರಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಮತ್ತೊಂದು ಕಡೆ ಬಾಡಿಗೆದಾರರಿಗೆ ತನ್ನದೇ ಮನೆ ಎಂದು ಅವರಿಂದ ಲಕ್ಷಾಂತರ ರೂ. ಲೀಸ್ ಹಣ ಪಡೆದಿದ್ದನು. ಆದರೆ ವಿಚಾರ ತಿಳಿದು ಮನೆಗಳ ಅಸಲಿ ಮಾಲೀಕರು ಮನೆ ಖಾಲಿ ಮಾಡುವಂತೆ ಬಾಡಿಗೆದಾರರಿಗೆ ಒತ್ತಾಯ ಮಾಡುತ್ತಿದ್ದರು. ಇದರಿಂದ ಬಾಡಿಗೆದಾರರು ಅಹ್ಮದ್ ಅಲಿಬೇಗ್ ಬಳಿ ಹೋದಾಗ ಪರಿಹಾರ ನೀಡದೆ ಕಳಿಸಿದ್ದನು. ಆರೋಪಿ ಅಹ್ಮದ್ ಅಲಿಬೇಗ್ ವಿರುದ್ಧ ಕಳೆದ ವರ್ಷ ಡಿಸೆಂಬರ್ನಲ್ಲಿ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+