ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಸುವಾಗ ಎಚ್ಚರ!
ಬೆಂಗಳೂರು, ನವೆಂಬರ್ 28: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಒಳಪಡುವಾಗ ಭದ್ರತಾ ಸಿಬ್ಬಂದಿಯಷ್ಟೇ ನಿಮ್ಮ ಕಣ್ಣುಗಳೂ ಜಾಗೃತವಾಗಿರಬೇಕು. ಸ್ವಲ್ಪ ಯಾಮಾರಿದರೂ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವುದು ನಿಶ್ಚಿತ.
ವಿಮಾನ ನಿಲ್ದಾಣದಲ್ಲಿ ಬೆಲೆಬಾಳುವ ಫೋನ್‌ಗಳು, ಏರ್‌ಪಾಡ್‌ಗಳು ಮತ್ತು ಪವರ್ ಬ್ಯಾಂಕ್‌ಗಳು ಸೆಕ್ಯುರಿಟಿ ಟ್ರೇದಿಂದ ಕೇಂದ್ರ ನಾಗರಿಕ ಭದ್ರತಾ ಪಡೆಯ (ಸಿಐಎಸ್‌ಎಫ್) ಸಿಬ್ಬಂದಿಯ ಕಣ್ಣ ಮುಂದೆಯೇ ಕಳ್ಳತನವಾಗುತ್ತಿರುವ ಘಟನೆಗಳು ನಡೆದಿವೆ. ಇಂತಹ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ನವೆಂಬರ್ ತಿಂಗಳಿನಲ್ಲಿಯೇ ಇದುವರೆಗೆ ಇಂತಹ ಕನಿಷ್ಠ ನಾಲ್ಕು ಪ್ರಕರಣಗಳಲ್ಲಿ ಪ್ರಯಾಣಿಕರು ದೂರು ನೀಡಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಹೀಗೆ ಗ್ಯಾಡ್ಜೆಟ್‌ಗಳನ್ನು ಸಲೀಸಾಗಿ ಎತ್ತುಕೊಂಡು ಹೋಗುವವರು ಬೇರೆ ಯಾವುದೇ ರಾಜ್ಯ ಅಥವಾ ದೇಶಕ್ಕೆ ಪ್ರಯಾಣಿಸುವವರೇ ಆಗಿರುತ್ತಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಹೇಳಿದೆ.
ಈ ಬಗ್ಗೆ ಅನೇಕ ಪ್ರಯಾಣಿಕರು ತಮ್ಮ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ವಿಮಾನ ನಿಲ್ದಾಣದಲ್ಲಿ ಭದ್ರತೆ ತಪಾಸಣಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದಿಂದ ಪತ್ತೆ
ಈ ತಿಂಗಳ ಆರಂಭದಲ್ಲಿ 15ನೇ ಸಂಖ್ಯೆಯ ಗೇಟ್‌ನಿಂದ ಹೊರಟಿದ್ದ ಪುರುಷೋತ್ತಮ್ ಕುಮಾರ್ ತಮ್ಮ ಪವರ್ ಬ್ಯಾಂಕ್ ಕಳೆದುಕೊಂಡಿದ್ದರು. ಕೂಡಲೇ ಅವರು ಸಿಐಎಸ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಅದನ್ನು ಕದ್ದು ಮುಂಬೈ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದಿದ್ದ.
ಸ್ತುತಿ ಶುಕ್ಲಾ ಎಂಬ ಯುವತಿ ಕಳೆದ ವಾರ ತಮ್ಮ ಆಪಲ್ ಕಂಪೆನಿಯ ವಾಚ್ ಕಳೆದುಕೊಂಡಿದ್ದರು. ಸಿಐಎಸ್ಎಫ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರು. ವಾಚ್ ಎಗರಿಸಿದ್ದ ವ್ಯಕ್ತಿ ರಾಂಚಿಯತ್ತ ಪ್ರಯಾಣ ಬೆಳೆಸಿದ್ದ.

ಪೌಚ್ ಕದ್ದಿದ್ದ ಮಹಿಳೆ
'ನನ್ನ ಮಗನ ಮೊಬೈಲ್ ಫೋನ್ ಮತ್ತು ಪವರ್ ಬ್ಯಾಂಕ್ ಇದ್ದ ಪೌಚ್ಅನ್ನು ಸೆಕ್ಯುರಿಟಿ ಟ್ರೇಯಿಂದ ಕದಿಯಲಾಗಿತ್ತು. ಭುವನೇಶ್ವರದ ವಿಮಾನದಲ್ಲಿ ಹೊರಟಿದ್ದ ಮಹಿಳೆಯೊಬ್ಬರ ಬಳಿ ಅದು ಇತ್ತು ಎಂದು ಭದ್ರತಾ ಸಿಬ್ಬಂದಿ ಬಳಿಕ ತಿಳಿಸಿದರು' ಎಂದು ನ.25ರಂದು ವ್ಯಕ್ತಿಯೊಬ್ಬರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಸಿಐಎಸ್ಎಫ್ ಸಿಬ್ಬಂದಿ ಭುವನೇಶ್ವರದಲ್ಲಿ ಆಕೆಯನ್ನು ಹಿಡಿದು ಮಗನ ವಸ್ತುಗಳನ್ನು ಮರಳಿ ಕೊಟ್ಟಿದ್ದನ್ನು ಅವರು ತಿಳಿಸಿದ್ದರು.

ಮರಳಿ ಸಿಗದ ವಸ್ತುಗಳು
ಪ್ರಯಾಣಿಕರೊಬ್ಬರ ಆಪಲ್ ವಾಚ್‌ಅನ್ನು ಬಿಐಎಎಲ್‌ನ ಉದ್ಯೋಗಿಯೊಬ್ಬರು ಕಳವು ಮಾಡಿದ್ದು, ಅಕ್ಟೋಬರ್‌ನಲ್ಲಿ ಪತ್ತೆಯಾಗಿತ್ತು. ಆ ಉದ್ಯೋಗಿ ಮೇಲೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಆದರೆ ಎಲ್ಲ ಪ್ರಕರಣಗಳಲ್ಲಿಯೂ ಹೀಗೆ ಕಳೆದುಹೋದ ವಸ್ತುಗಳು ಸಿಕ್ಕಿವೆ ಎನ್ನುವಂತಿಲ್ಲ. ಕೆಲವೆಡೆ ಭದ್ರತಾ ಸಿಬ್ಬಂದಿ ಮತ್ತು ಅವರ ಸಿಸಿಟಿವಿ ಕ್ಯಾಮೆರಾ ಕಣ್ಣನ್ನು ಕೂಡ ತಪ್ಪಿಸಿ ಕಳವು ಮಾಡಿದವರಿದ್ದಾರೆ. ಹೀಗಾಗಿ ಅನೇಕರು ಕಳೆದುಕೊಂಡ ವಸ್ತುಗಳು ಮರಳಿ ಸಿಕ್ಕಿಲ್ಲ.

ಕಳ್ಳತನ ಮಾಡೋದು ಸುಲಭ
ವಿಮಾನ ನಿಲ್ದಾಣದ ಭದ್ರತಾ ತಪಾಸಣಾ ಸ್ಥಳಗಳಲ್ಲಿ ವಾಚ್, ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಗ್ಯಾಡ್ಜೆಟ್ ಹಾಗೂ ಪರ್ಸ್‌ಗಳನ್ನು ಟ್ರೇದಲ್ಲಿ ಇರಿಸಿ ಸ್ಕ್ಯಾನರ್‌ನತ್ತ ಕಳುಹಿಸಬೇಕು. ದೇಹ ತಪಾಸಣೆಗೊಳಪಟ್ಟ ಬಳಿಕವೇ ಅಲ್ಲಿ ಅವುಗಳನ್ನು ಮರಳಿ ಪಡೆದುಕೊಳ್ಳಲು ಸಾಧ್ಯ. ಹೀಗೆ ಪ್ರಯಾಣಿಕರು ತಮ್ಮ ವಸ್ತುಗಳನ್ನು ಪಡೆದುಕೊಳ್ಳುವ ವೇಳೆಗೆ ತೆರೆದ ಟ್ರೇನಲ್ಲಿ ಕಾಣಿಸುವ ಗ್ಯಾಡ್ಜೆಟ್, ಪರ್ಸ್‌ಗಳನ್ನು ಮುಂಚೆಯೇ ತಪಾಸಣೆಗೆ ಒಳಪಟ್ಟ ಖದೀಮ ಪ್ರಯಾಣಿಕರು ಕದ್ದು ಸಾಗಿಸುತ್ತಾರೆ. ಭದ್ರತಾ ಸಿಬ್ಬಂದಿ ಅಲ್ಲಿಯೇ ಇದ್ದರೂ ಅದರ ನೈಜ ವಾರಸುದಾರರು ಯಾರು ಎಂಬುದು ಅವರಿಗೂ ಗೊತ್ತಿರುವುದಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ಬೋರ್ಡಿಂಗ್ ಜಾಗದಲ್ಲಿಯೂ ಕಳ್ಳತನಗಳಾಗಿವೆ. ಹೀಗಾಗಿ ತಮ್ಮ ವಸ್ತುಗಳು ಕಳ್ಳರ ಪಾಲಾಗದಂತೆ ತಪಾಸಣೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Bengaluru: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸತತ 3ನೇ ಬಾರಿ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ಏರ್ಪೋರ್ಟ್ ಪ್ರಶಸ್ತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ












Click it and Unblock the Notifications