ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 50 ಸಾವಿರ ಸಸಿಗಳನ್ನು ನೆಡಲು ಬಿಡಿಎ ಸಿದ್ಧತೆ

By Nayana
|
Google Oneindia Kannada News

ಬೆಂಗಳೂರು, ಜೂನ್ 06: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 50 ಸಾವಿರ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದೆ. ಬಿಡಿಎ ನಿರ್ಮಿಸುತ್ತಿರುವ ಲೇಔಟ್‌ಗಳನ್ನು ಹಸಿರು ಬಡಾವಣೆಗಳನ್ನಾಗಿ ನಿರ್ಮಾಣ ಮಾಡುವ ಪಣ ತೊಟ್ಟಿದೆ.

ಈ ಮಳೆಗಾಲದಿಂದಲೇ ಅನೇಕ ಬಡಾವಣೆಗಳಲ್ಲಿ ಸಸಿ ನೆಡಲು ಶೀಘ್ರದಲ್ಲೇ ಚಾಲನೆ ಸಿಗಲಿದೆ. ಇದಕ್ಕಾಗಿ ಪ್ರಾಧಿಕಾರವು ಅರಣ್ಯ ವಿಭಾಗ ಅನೇಕ ಸಿದ್ಧತೆಗಳಲ್ಲಿ ತೊಡಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ ಹಾಗೂ ಎಸ್‌ ಎಂ ವಿಶ್ವೇಶ್ವರಯ್ಯ ಲೇಔಟ್‌ಗಳಲ್ಲಿ ಸಸಿಗಳನ್ನು ನೆಡುವ ಗುರಿ ಇದೆ.

ದೇಶಿ ತಳಿ ಸಸಿ ನೆಡಲು ಬಿಬಿಎಂಪಿ ನಿರ್ಧಾರದೇಶಿ ತಳಿ ಸಸಿ ನೆಡಲು ಬಿಬಿಎಂಪಿ ನಿರ್ಧಾರ

BDA plans for 50k plantation in the city

ಬಿಡಿಎ ಈಗಾಗಲೇ ಅಭಿವೃದ್ಧಿಪಡಿಸಿರುವ ಅನೇಕ ಬಡಾವಣೆಗಳಲ್ಲಿ ರಸ್ತೆ ಬದಿ ಹಾಗೂ ಪಾರ್ಕ್‌ಗಳಲ್ಲಿ ಸಸಿಗಳನ್ನು ನೆಟ್ಟಿವೆ. ಅಂಜನಾಪುರ, ಬನಶಂಕರಿ ಲೇಔಟ್‌, ಎಸ್‌ಎಂ ವಿ ಲೇಔಟ್‌ನಲ್ಲಿ ಈಗಾಗಲೇ 10 ಸಾವಿರ ಸಸಿಗಳನ್ನು ನೆಟ್ಟಿದೆ.

BDA plans for 50k plantation in the city

ಮಹಾನಗರ ವ್ಯಾಪ್ತಿಯಲ್ಲಿ ಹಸಿರುವ ಹೆಚ್ಚಿಸುವ ನಿಟ್ಟಿನಲ್ಲಿ ಬಿಡಿಎ ಒಂದು ಕೋಟಿ ಸಸಿ ನೆಡುವ ಹಸಿರು ಮಾಲೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2010ರಲ್ಲಿ ಆರಂಭವಾದ ಯೋಜನೆಯಡಿ ಈವರೆಗೆ 30 ಲಕ್ಷ ಗುರಿಯನ್ನು ದಾಟಿದೆ.

BDA plans for 50k plantation in the city

ಹೆಸರುಘಟ್ಟ ಹುಲ್ಲುಗಾವಲು, ಬಿಡಿಎ ಪುನರುಜ್ಜೀವನಗೊಳಿಸಿರುವ ಕೆರೆ ಹಾಗೂ ಬಡಾವಣೆಗಳಲ್ಲಿ ಸಸಿಗಳನ್ನು ನೆಡಲಾಗಿದೆ, ಆದರೆ ಎರಡು ವರ್ಷದಿಂದ ಯೋಜನೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಯೋಜನೆಗಳಿಗೆ ಮರುಜೀವ ಬಂದಿದ್ದು, ಬಿಡಿಎ ಮತ್ತೆ ಯೋಜನೆಯನ್ನು ಕೈಗೆತ್ತಿಕೊಂಡಿದೆ.

English summary
Bengaluru Development Authority is planning to plantation of 50 thousand saplings in the city in this year as part of 1 crore tree plantation program which launched in 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X