ಬೆಂಗಳೂರಲ್ಲಿ ಮನೆ ಖರೀದಿಸಬೇಕಾ?; ಫೆ. 17ಕ್ಕೆ BDA Flat ಮೇಳ

ಬೆಂಗಳೂರು, ಫೆಬ್ರವರಿ 14: ಬೆಂಗಳೂರು ನಗರದಲ್ಲಿ ಸ್ವಂತ ಮನೆ ಮಾಡಬೇಕು ಎಂಬುದು ಹಲವಾರು ಜನರ ಕನಸು. ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜನರಿಗೆ ಅನುಕೂಲ ಮಾಡಿಕೊಂಡಲು ಮುಂದಾಗಿದೆ. ಬಿಡಿಎ ಫ್ಲಾಟ್, ಮನೆಗಳ ಮಾರಾಟಕ್ಕೆ 'ಫ್ಲಾಟ್ ಮೇಳ' ಆಯೋಜನೆ ಮಾಡಿದೆ.

ಫೆಬ್ರವರಿ 17ರಂದು ಬೆಳಗ್ಗೆ 9 ರಿಂದ ಸಂಜೆ 4.30ರ ತನಕ Konadasapura residential complex ಬಳಿ ಬಿಡಿಎ ಫ್ಲಾಟ್/ ಮನೆಗಳ ಮಾರಾಟ ಮೇಳ ಆಯೋಜನೆ ಮಾಡಿದೆ. ಆಸಕ್ತರು ಪಾಲ್ಗೊಳ್ಳಬಹುದು. ಮೇಳದಲ್ಲಿ ಪ್ರಾಥಮಿಕ ಠೇವಣಿ ಕಟ್ಟಿದವರಿಗೆ 10 ದಿನದಲ್ಲಿ ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಬಿಡಿಎ ಹೇಳಿದೆ.

BDA Flat Mela On February 17 2 And 3 BHK Flat House For Sale

ಬಿಡಿಎ ಅಭಿವೃದ್ಧಿಪಡಿಸಿರುವ ವಿವಿಧ ಯೋಜನೆಯಡಿ ಲಭ್ಯವಿರುವ ಫ್ಲಾಟ್, 2 ಮತ್ತು 3 ಬಿಹೆಚ್‌ಕೆ ಮನೆಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ಮನೆ ಖರೀದಿಗೆ ಸಾಲ ನೀಡಲು ಬ್ಯಾಂಕುಗಳ ಸಿಬ್ಬಂದಿಗಳು ಸಹ ಸ್ಥಳದಲ್ಲಿ ಹಾಜರಿರುತ್ತಾರೆ.

ಎಲ್ಲೆಲ್ಲೆ ಲಭ್ಯವಿದೆ ಮನೆ, ಫ್ಲಾಟ್?; ಈ ಮೇಳದಲ್ಲಿ ಬಿಡಿಎ ತಕ್ಷಣ ಸ್ಥಳಾಂತರವಾಗಲು ಲಭ್ಯವಿರುವ ಫ್ಲಾಟ್/ ಮನೆಗಳನ್ನು ಮಾತ್ರ ಮಾರಾಟ ಮಾಡಲಿದೆ. ಸ್ಥಳದಲ್ಲಿಯೇ ಡಿಡಿ/ ಆನ್‌ಲೈನ್ ಮೂಲಕ ಪ್ರಾಥಮಿಕ ಹಣ ಪಾವತಿ ಮಾಡಿದವರಿಗೆ ಅಲ್ಲಿಯೇ ಅಲಾಟ್‌ಮೆಂಟ್ ಲೆಟರ್ ನೀಡಲಾಗುತ್ತದೆ.

ಈ ಮೇಳದಲ್ಲಿ ಭಾಗವಹಿಸಿದವರು 10 ದಿನದಲ್ಲಿ ಫ್ಲಾಟ್/ ಮನೆಗೆ ಪೂರ್ಣ ಹಣ ಪಾವತಿ ಮಾಡಿದರೆ 10 ದಿನ (ಕೆಲಸದ ದಿನಗಳು)ಗಳಲ್ಲಿ ಅವರ ಹೆಸರಿಗೆ ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.

* ನಾಗರಭಾವಿ ಚಂದ್ರಾ ಲೇಔಟ್, (3 ಬಿಹೆಚ್‌ಕೆ ಮನೆಗಳು). ಬೆಂಗಳೂರು ಹೊರ ವರ್ತುಲ ರಸ್ತೆ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿ ಬಿಡಿನ ಚಂದ್ರಾ ಲೇಔಟ್ ಬಳಿ ಈ ಮನೆಗಳಿವೆ. ಕೇವಲ 55 ಮನೆಗಳು ಮಾರಾಟಕ್ಕೆ ಲಭ್ಯವಿದ್ದು, ಸ್ಥಳಾಂತರಗೊಳ್ಳಲು ಸಿದ್ಧವಾಗಿವೆ.

* ಕಣಿಮಿಣಿಕೆ (2 ಬಿಹೆಚ್‌ಕೆ ಫ್ಲಾಟ್ & 3 ಬಿಹೆಚ್‌ಕೆ ಮನೆಗಳು). ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಕಣಿಮಿಣಿಕೆ ಟೋಲ್ ಬೂತ್ ಸಮೀಪವಿದೆ. ಫೇಸ್‌ 2 ಮತ್ತು 3ರಲ್ಲಿ 2 ಬಿಹೆಚ್‌ಕೆ ಫ್ಲಾಟ್, ಫೇಸ್‌ 4ನಲ್ಲಿ 3 ಬಿಹೆಚ್‌ಕೆ ಮನೆಗಳಿವೆ. ಸಂಚಾರ ದಟ್ಟಣೆ ಪ್ರದೇಶದಿಂದ ಇದು ದೂರದಲ್ಲಿದ್ದು, ಸುತ್ತಲೂ ಹಸಿರು ವಾತಾವರಣ ಹೊಂದಿದೆ. ನ್ಯಾಯಾಂಗ ಬಡಾವಣೆಗೆ ಹತ್ತಿರದಲ್ಲಿದೆ.

* ಕೊಮ್ಮಘಟ್ಟ ಫೇಸ್ 1 & 2 (2 ಬಿಹೆಚ್‌ಕೆ ಫ್ಲಾಟ್‌). ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಸಮೀಪ ಬಿಡಿಎ ಅಭಿವೃದ್ಧಿಗೊಳಿಸಿದ ಯೋಜನೆ ಇದಾಗಿದೆ. ಇದು ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿದೆ. ನಾಡಪ್ರಭು ಕೆಂಪೇಗೌಡ ಲೇಔಟ್ ಮತ್ತು ಮೈಸೂರು-ಬೆಂಗಳೂರು 10 ಲೇನ್ ರಸ್ತೆ ಮೂಲಕ ಇಲ್ಲಿಗೆ ತಲುಪಬಹುದು.

* ಕೋನದಾಸಪುರ ಫೇಸ್-2 (2 ಬಿಹೆಚ್‌ಕೆ ಫ್ಲಾಟ್). ಈ ಯೋಜನೆ ಪೂರ್ವ ಬೆಂಗಳೂರು ಪ್ರದೇಶದಲ್ಲಿದ್ದು, ಹಳೆ ಮದ್ರಾಸ್ ರಸ್ತೆಗೆ ಸಮೀಪದಲ್ಲಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಹಂಚಿಕೆಗೆ ಲಭ್ಯವಿದೆ. ಕೆಲವು ಮನೆಗಳು ಸ್ಥಳಾಂತರಗೊಳ್ಳಲು ಸಹ ಸಿದ್ಧವಾಗಿವೆ.

ಬಿಡಿಎ ಈ ಕುರಿತು ಫೇಸ್‌ಬುಕ್ ಪುಟದಲ್ಲಿ ಜಾಹೀರಾತು ಹಾಕಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆಗಳು. 9900055612, 9448833216, 8747877469, 9353323821.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+