Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್‌ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ
ಬೆಂಗಳೂರು: ಸಿಲಿಕಾನ್ ಸಿಟಿಯ ಅಭಿವೃದ್ಧಿಯ ರೂವಾರಿ ಎನಿಸಿಕೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಕಳೆದ ಐದು ದಶಕಗಳಿಂದ ಉದ್ಯಾನ ನಗರಿ ಬೆಂಗಳೂರನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗೂ ಸಾವಿರಾರು ಜನರಿಗೆ ಸೂರು ಕಲ್ಪಿಸುವಲ್ಲಿ ಬಿಡಿಎ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತನ್ನ 50ನೇ ವರ್ಷದ ಈ ಐತಿಹಾಸಿಕ ಮೈಲಿಗಲ್ಲನ್ನು ಮತ್ತಷ್ಟು ಸ್ಮರಣೀಯವಾಗಿಸಲು ಬಿಡಿಎ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ತನ್ನ ಅಧಿಕೃತ ಗುರುತನ್ನು ಹೊಸ ರೂಪದಲ್ಲಿ, ಅತ್ಯಂತ ಆಕರ್ಷಕವಾಗಿ ಪ್ರಸ್ತುತಪಡಿಸಲು ನಿರ್ಧರಿಸಿದೆ.
ಇದಕ್ಕಾಗಿ ಸಾರ್ವಜನಿಕರು, ಕಲಾ ವಿದ್ಯಾರ್ಥಿಗಳು, ವಿನ್ಯಾಸಕಾರರು, ನುರಿತ ಕಲಾವಿದರು ಹಾಗೂ ಹೊಸ ಐಡಿಯಾ ಇರುವ ಸೃಜನಶೀಲ ವ್ಯಕ್ತಿಗಳಿಗಾಗಿ ಬೃಹತ್ 'ಹೊಸ ಲೋಗೋ (ಲಾಂಛನ) ಮತ್ತು ಟ್ಯಾಗ್ ಲೈನ್ (ಘೋಷವಾಕ್ಯ) ವಿನ್ಯಾಸ' ಸ್ಪರ್ಧೆಯನ್ನು ಆಯೋಜಿಸಿದೆ. ನಾಡಿನ ಪ್ರತಿಭಾವಂತರಿಗೆ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯಾಗಿದ್ದು, ಅತ್ಯುತ್ತಮ ಲೋಗೋ ಮತ್ತು ಟ್ಯಾಗ್ ಲೈನ್ ವಿನ್ಯಾಸ ಮಾಡಿದ ಒಬ್ಬ ವಿಜೇತರಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು (ಟಿಡಿಎಸ್ ಅನ್ವಯ) ಬಿಡಿಎ ಅಧಿಕೃತವಾಗಿ ಘೋಷಿಸಿದೆ.

ಸ್ಪರ್ಧೆಯಲ್ಲಿ ಯಾರೆಲ್ಲಾ ಭಾಗವಹಿಸಬಹುದು?
ಈ ಸ್ಪರ್ಧೆಯು ಕಲೆ ಮತ್ತು ವಿನ್ಯಾಸದಲ್ಲಿ ಆಸಕ್ತಿ ಇರುವ 18 ವರ್ಷ ಮೇಲ್ಪಟ್ಟ ಎಲ್ಲಾ ಕನ್ನಡಿಗರಿಗೆ ಮುಕ್ತವಾಗಿದೆ. ಫೈನ್ ಆರ್ಟ್ಸ್ ಓದುತ್ತಿರುವ ಕಲಾ ವಿಭಾಗದ ವಿದ್ಯಾರ್ಥಿಗಳು, ಡ್ರಾಯಿಂಗ್ ಕಲಿಯುತ್ತಿರುವವರು, ಹವ್ಯಾಸಿ ವಿನ್ಯಾಸಕಾರರು, ವೃತ್ತಿಪರ ಕಲಾವಿದರು, ಡಿಸೈನ್ ಏಜೆನ್ಸಿಗಳು ಹಾಗೂ ವಿಭಿನ್ನವಾಗಿ ಆಲೋಚಿಸುವ ಯಾವುದೇ ವ್ಯಕ್ತಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಪ್ರತಿಯೊಬ್ಬ ಸ್ಪರ್ಧಾಳುವು ತಲಾ ಒಂದು ಲೋಗೋ ಹಾಗೂ ಒಂದು ಟ್ಯಾಗ್ ಲೈನ್ ಅನ್ನು ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿನ್ಯಾಸ ಹೇಗಿರಬೇಕು? (ಮಾನದಂಡಗಳು)
ಬಿಡಿಎ ಕೇವಲ ಲೇಔಟ್ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿರುವ ಸಂಸ್ಥೆಯಲ್ಲ; ವೇಗವಾಗಿ ಬೆಳೆಯುತ್ತಿರುವ ಭವಿಷ್ಯದ ಬೆಂಗಳೂರನ್ನು 'ಸ್ಮಾರ್ಟ್ ಸಿಟಿ'ಯಾಗಿ ರೂಪಿಸುವ, ಕೆರೆಗಳನ್ನು ಸಂರಕ್ಷಿಸುವ ಹಾಗೂ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸುವ ಬಹುದೊಡ್ಡ ಜವಾಬ್ದಾರಿಯನ್ನೂ ಹೊಂದಿದೆ. ಹೀಗಾಗಿ, ಸ್ಪರ್ಧಿಗಳು ರಚಿಸುವ ಲೋಗೋವು ಯೋಜಿತ ನಗರಾಭಿವೃದ್ಧಿ, ಪ್ರಾಧಿಕಾರದ ಭವಿಷ್ಯದ ದೃಷ್ಟಿಕೋನ, ಆಡಳಿತದಲ್ಲಿನ ಪಾರದರ್ಶಕತೆ ಮತ್ತು ಸುಸ್ಥಿರ ನಗರಾಭಿವೃದ್ಧಿಯನ್ನು ನಿಖರವಾಗಿ ಪ್ರತಿಬಿಂಬಿಸುವಂತಿರಬೇಕು. ಲೋಗೋ ಜೊತೆಗೆ ನೀಡುವ ಟ್ಯಾಗ್ ಲೈನ್ ಅತ್ಯಂತ ಆಕರ್ಷಕವಾಗಿರಬೇಕು ಮತ್ತು ಗರಿಷ್ಠ 8 ಪದಗಳ ಮಿತಿಯೊಳಗಿರಬೇಕು. ಈ ಘೋಷವಾಕ್ಯವನ್ನು ಸ್ಪರ್ಧಿಗಳು ತಮ್ಮ ಆಯ್ಕೆಯಂತೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ರಚಿಸಬಹುದು.
ಕಟ್ಟುನಿಟ್ಟಿನ ನಿಯಮಗಳು
ಆಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಕ್ಷಣಾರ್ಧದಲ್ಲಿ ವಿನ್ಯಾಸ ಮಾಡುವುದು ಸಾಮಾನ್ಯವಾಗಿದೆ. ಆದರೆ, ಬಿಡಿಎ ಸ್ಪರ್ಧೆಯಲ್ಲಿ ಎಐ ಪರಿಕರಗಳನ್ನು ಬಳಸಿ ಸೃಷ್ಟಿಸಿದ, ಅಥವಾ ಅಂತರ್ಜಾಲದಿಂದ, ಇತರ ಸಂಸ್ಥೆಗಳ ಲೋಗೋಗಳಿಂದ ನಕಲು ಮಾಡಿದ ಯಾವುದೇ ವಿನ್ಯಾಸಗಳಿಗೆ ಕಟ್ಟುನಿಟ್ಟಿನ ನಿರ್ಬಂಧವಿದೆ. ಇಂತಹ ವಿನ್ಯಾಸಗಳನ್ನು ಪರಿಶೀಲನೆ ವೇಳೆ ತಕ್ಷಣವೇ ಅನರ್ಹಗೊಳಿಸಲಾಗುವುದು ಎಂದು ಬಿಡಿಎ ಸ್ಪಷ್ಟಪಡಿಸಿದೆ. ಸ್ಪರ್ಧೆಗೆ ಕಳುಹಿಸುವ ವಿನ್ಯಾಸವು ಸ್ಪರ್ಧಿಯ ಸ್ವಂತ ಕಲ್ಪನೆಯಿಂದ ಮೂಡಿಬಂದ, ಸಂಪೂರ್ಣವಾಗಿ ಮೂಲ ಸೃಷ್ಟಿಯಾಗಿರಬೇಕು.
ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ ಯಾವಾಗ?
ಆಸಕ್ತ ಸೃಜನಶೀಲ ಕಲಾವಿದರು ತಮ್ಮ ವಿಶೇಷ ವಿನ್ಯಾಸಗಳನ್ನು ಬಿಡಿಎ ಅಧಿಕೃತ ವೆಬ್‌ಸೈಟ್ https://bdakarnataka.in/ ಮೂಲಕ ಆನ್‌ಲೈನ್‌ನಲ್ಲಿಯೇ ಸಲ್ಲಿಸಬೇಕು. ವಿನ್ಯಾಸದ ಫೈಲ್‌ಗಳು ಕಡ್ಡಾಯವಾಗಿ ಗುಣಮಟ್ಟದ JPEG, PNG ಅಥವಾ PDF ನಮೂನೆಯಲ್ಲಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಹಾಗೂ ವಿನ್ಯಾಸಗಳನ್ನು ಸಲ್ಲಿಸಲು ಮಾರ್ಚ್ 24, 2026 ಕಡೆಯ ದಿನಾಂಕವಾಗಿದೆ.
Only 3 days left to design Bengaluru's future –your city, your logo, your tagline!
— Bangalore Development Authority (@BDAOfficialGok) March 22, 2026
And win ₹1 lakh if your creativity becomes Bengaluru’s new identity!#BDA #BDAlogo #Bengaluru@Captain_Mani72 @mlanaharis @Deepaprabha_KAS pic.twitter.com/F3FydNAP2Z
ವಿಜೇತ ಲೋಗೋದ ಬಳಕೆ ಎಲ್ಲೆಲ್ಲಿ?
ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ಲೋಗೋ ಮತ್ತು ಟ್ಯಾಗ್ ಲೈನ್ ಅನ್ನು ಮುಂದಿನ ದಿನಗಳಲ್ಲಿ ಬಿಡಿಎನ ಎಲ್ಲಾ ಅಧಿಕೃತ ಕಾರ್ಯಗಳಿಗೆ ಪ್ರಮುಖ ಲಾಂಛನವಾಗಿ ಬಳಸಿಕೊಳ್ಳಲಾಗುತ್ತದೆ. ಬಿಡಿಎ ನಿರ್ಮಿಸುವ ಹೊಸ ಬಡಾವಣೆಗಳು (ಲೇಔಟ್‌ಗಳು), ವಸತಿ ಸಮುಚ್ಚಯಗಳು, ರಸ್ತೆ ಬದಿಯ ನಾಮಫಲಕಗಳು, ಅಧಿಕೃತ ವೆಬ್‌ಸೈಟ್ ಹಾಗೂ ಪ್ರಾಧಿಕಾರದ ಪ್ರಮುಖ ಪತ್ರ ವ್ಯವಹಾರಗಳಲ್ಲಿ ವಿಜೇತರ ವಿನ್ಯಾಸವೇ ರಾರಾಜಿಸಲಿದೆ.
ನಿಮ್ಮಲ್ಲಿ ಅದ್ಭುತ ಕಲ್ಪನೆಗಳಿದ್ದರೆ, ಬಣ್ಣ ಮತ್ತು ರೇಖೆಗಳ ಮೂಲಕ ನಾಡಿನ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯೊಂದಕ್ಕೆ ಹೊಸ ಭಾಷ್ಯ ಬರೆಯುವ ಶಕ್ತಿ ಇದ್ದರೆ, ಈ ಸುವರ್ಣಾವಕಾಶವನ್ನು ಕೈ ಬಿಡಬೇಡಿ. ಇಂದೇ ನಿಮ್ಮ ಕಲ್ಪನೆಯ ಕುಂಚಕ್ಕೆ ಕೆಲಸ ನೀಡಿ, 1 ಲಕ್ಷ ರೂಪಾಯಿಯ ಬಹುಮಾನ ಗೆಲ್ಲಿ.
-
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್












Click it and Unblock the Notifications