BDA: ಬಿಡಿಎಯಿಂದ ಹೊಸ ವಸತಿ ಯೋಜನೆಗೆ ಚಾಲನೆ: 4BHK, 3BHK ಮನೆಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವತಿಯಿಂದ 4BHK ಮತ್ತು 3BHK ಮನೆ ನಿರ್ಮಿಸುವ ವಸತಿ ಬಡಾವಣೆ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ ಹೊಸ ವಸತಿ ನಿರ್ಮಾಣಕ್ಕೆ ಮುಂದಾಗಿದೆ. ಇನ್ನೂ ವಿದ್ಯುತ್ ಸಂಬಂಧಿ ಕಾಮಗಾರಿ ಸಹ ಆರಂಭಿಸುತ್ತಿದೆ. ಈ ಎರಡು ಮಹತ್ವದ ಯೋಜನೆಗಳ ಕಾಮಗಾರಿಗಾಗಿ ಅಲ್ಪಾವಧಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಸುವ ದಿನಾಂಕ, ಅಂತಿನ ದಿನ, ಬಿಡ್ ತೆರೆಯುವುದು ಸೇರಿದಂತೆ ಪ್ರಮುಖ ದಿನಾಂಕ, ಸಂಪರ್ಕಿಸಬೇಕಾದ ವಿವರ ಇಲ್ಲಿದೆ.
ಬಿಡಿಎಯ ಬೆಂಗಳೂರು ದಕ್ಷಿಣ ತಾಲ್ಲೂಕು, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ದೊಡ್ಡತೋಗೂರು ಗ್ರಾಮದ ಸರ್ವೆ ನಂ.104 ರಲ್ಲಿ 4BHK ಮತ್ತು 3BHK ವಸತಿ ಯೋಜನೆಯ ನಿರ್ಮಾಣ ಯೋಜನೆ ರೂಪಿಸಿದೆ. ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ಬಡಾವಣೆ ನಿರ್ಮಿಸಿರುವ ಬಿಡಿಎ ಹಂಚಿಕೆಯನ್ನು ನಡೆಸಿದೆ. ಜನಸಂಖ್ಯೆ ಹೆಚ್ಚಿದಂತೆ ಹೊಸ ಬಡಾವಣೆ ನಿರ್ಮಿಸಲು ಮುಂದಾಗಿದೆ. ಸದರಿ ಯೋಜನೆ ಕಾಮಗಾರಿಗೆ (ದೊಡ್ಡತೋಗೂರು ವಸತಿ ಯೋಜನೆ) ಮೇಲ್ವಿಚಾರಣೆ ಸಮಾಲೋಚಕರನ್ನು ನೇಮಿಸಲು ಅಲ್ಪಾವಧಿ ಟೆಂಡರ್ ಆಹ್ವಾನಿಸಿದೆ.

ಟೆಂಡರ್ ಸಲ್ಲಿಕೆ ಪ್ರಮುಖ ದಿನಾಂಕಗಳು
ಟೆಂಡರ್ ವೇಳಾಪಟ್ಟಿ ನೋಡುವುದಾದರೆ, ಇ-ಪೋರ್ಟಲ್‌ನಲ್ಲಿ ಟೆಂಡರ್ ದಸ್ತಾವೇಜುಗಳು ದೊರೆಯುವ ದಿನಾಂಕ 2026 ಆಗಸ್ಟ್ 14 (2), ಆಗಸ್ಟ್ 18ರೊಳಗೆ ಟೆಂಡರ್ ಬಿಡ್ ಪೂರ್ವ ವಿಚಾರಣೆಗಳ ಸಲ್ಲಿಸಬಹುದು. ಇನ್ನೂ ಟೆಂಡರ್ (3) ಸಲ್ಲಿಸಲು ಆಗಸ್ಟ್ 27ರಂದು ಸಂಜೆ 4.00 ಗಂಟೆ ಒಳಗೆ ಕೊನೆಯ ದಿನವಾಗಿ ನಿಗದಿಪಡಲಾಗಿದೆ.
ಟೆಂಡರ್‌ನ ತಾಂತ್ರಿಕ ಬಿಡ್ ತೆರೆಯುವ ಆಗಸ್ಟ್ 28 ಸಂಜೆ 4:30ಕ್ಕೆ. ಹೆಚ್ಚಿನ ವಿವರಗಳಿಗಾಗಿ https://kppp.karnataka.gov.in ಗೆ ಭೇಟಿ ನೀಡಿ ಅಥವಾ ಬಿಡಿಎ ವಸತಿ ಯೋಜನೆ ವಿಭಾಗ-2 ನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ ಬಿಡಿಎ ಸಹಾಯವಾಣಿಗೆ 94831 66622ಗೆ ಕರೆ ಮಾಡುವಂತೆ ತಿಳಿಸಲಾಗಿದೆ.
ಬಿಡಿಎ ವಿದ್ಯುತ್ ಕಾಮಗಾರಿಗೆ ಟೆಂಡರ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊಸ ಬಡಾವಣೆಯಲ್ಲಿನ ವಿದ್ಯುತ್ ಸಂಬಂಧಿತ ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಸಲ್ಲಿಸಲು ಆಗಸ್ಟ್ 19 ಕೊನೆ ದಿನವನ್ನಾಗಿ ಮಾಡಿದ್ದು, ಅಂದು ಸಂಜೆ 5ರ ಒಳಗೆ ದಸ್ತಾವೇಜುಗಳನ್ನು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಈ ಟೆಂಡರ್‌ನ ತಾಂತ್ರಿಕ ಬಿಡ್ ಅನ್ನು ಆಗಸ್ಟ್ 20ತಂದು ಸಂಜೆ 5.10 ಗಂಟೆಗೆ ತೆರೆಯುವುದಾಗಿ ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಟೆಂಡರ್ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ https://kppp.karnataka.gov.in ಗೆ ಭೇಟಿ ನೀಡಿ ಅಥವಾ ಬಿಡಿಎ ದೂರವಾಣಿಗೆ 94831 66622ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತ್ವರಿತ ಕಾಮಗಾರಿ ಮುಗಿಸಲು ಸೂಚನೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಡಾ. ಶಿವರಾಮ ಕಾರಂತ ಬಡಾವಣೆ (DSKL) ಹಾಗೂ ಕೆರೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಕುರಿತು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅವರು ಬುಧವಾರ (ಆ.12) 'ಪ್ರಗತಿ ಪರಿಶೀಲನಾ ಸಭೆ' ನಡೆಸಿದರು.
ಈ ವೇಳೆ ಹ್ಯಾರಿಸ್, ಬಿಡಿಎ ವ್ಯಾಪ್ತಿಯಲ್ಲಿ ಹಾಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಿತಿಗತಿ, ಡಿಎಸ್‌ಕೆಎಲ್ ಬಡಾವಣೆಯ ವಿವಿಧ ಅಹವಾಲುಗಳು, ಆರ್‌ಎಂಪಿ ರಸ್ತೆ , ಬೆಳ್ಳಂದೂರು ಮತ್ತು ವರ್ತೂರು ಕರೆ ಹಾಗೂ ವಿವಿಧ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿದರು.


Click it and Unblock the Notifications
