ಮತ್ತೆ ಸುದ್ದು ಮಾಡಲಿದೆ ಬುಲ್ಡೋಜರ್, ಒತ್ತುವರಿ ತೆರವಿಗೆ ಮತ್ತೆ ಚಾಲನೆ?
ಬೆಂಗಳೂರು, ಅಕ್ಟೋಬರ್ 22: ಎರಡು ವರ್ಷಗಳ ಹಿಂದೆ ಬೆಂಗಳೂರಿನ ಕೆಲವರಲ್ಲಿ ಆಶಾ ಭಾವನೆ ಮೂಡಿಸಿದ್ದ ಮತ್ತು ಕೆಲವರಲ್ಲಿ ಆತಂಕ ಸೃಷ್ಠಿಸಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಈಗ ಮತ್ತೆ ಪ್ರಾರಂಭವಾಗುತ್ತಿದೆ.
ಒತ್ತುವರಿ ಪ್ರಕರಣಗಳ ಪೂರ್ಣ ವರದಿ ಕಂದಾಯ ಇಲಾಖೆಯಿಂದ ಬಿಬಿಎಂಪಿಗೆ ಬಂದಿದ್ದು, ಇದೇ ತಿಂಗಳ 29 ರಿಂದ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಹೇಳಿದ್ದಾರೆ.
ಒತ್ತುವರಿ ತೆರವಿನ ಗಡಿ ಗುರುತಿಸುವ ಕಾರ್ಯ ಈಗಾಗಲೇ ಆಗಿದೆ. ಗಡಿ ಗುರುತಿಸಲೆಂದೇ ಈ ಹಿಂದೆ ಗಡಿ ಗುರುತಿಸಿದ್ದ ಅಧಿಕಾರಿಗಳನ್ನೇ ಮತ್ತೆ ನಗರಕ್ಕೆ ಕರೆಸಿ ಕೆಲಸ ಮಾಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿ ಒತ್ತುವರಿ ತೆರವು ಕಾರ್ಯ ಭಾರಿ ಜೋರಿನಿಂದ ಆರಂಭವಾಗಿತ್ತು. ಹಲವು ಮನೆಗಳು, ಅಂಗಡಿಗಳನ್ನು ಬಿಬಿಎಂಪಿಯ ಬುಲ್ಡೋಜರ್‌ಗಳು ನೆಲಸಮ ಮಾಡಿದ್ದವು ಆದರೆ ದರ್ಶನ್ ಮನೆ ಸೇರಿದಂತೆ ಕೆಲವು ಪ್ರತಿಷ್ಠಿತರ ಮನೆ ಹಾಗೂ ಮಾಲ್‌ಗಳು ರಾಜಕಾಲುವೆ ಮೇಲಿವೆ ಎಂಬ ಆರೋಪಗಳು ಕೇಳಿ ಬಂತು ಆ ನಂತರ ಒತ್ತುವರಿ ತೆರವು ವೇಗ ಕಳೆದುಕೊಂಡು ಆ ನಂತರ ನಿಂತೇ ಹೋಯಿತು.
ಈ ಬಾರಿ ಒತ್ತುವರಿ ತೆರವಿನಲ್ಲಿ ಎಷ್ಟು ಜನ ಮನೆ ಕಳೆದುಕೊಳ್ಳುತ್ತಾರೋ. ಈ ಬಾರಿ ಕೇವಲ ಬಡವರ ಮನೆಗಳಷ್ಟೆ ಬುಲ್ಡೋಜರ್‌ನ ಹಲ್ಲುಗಳಿಗೆ ಆಹಾರವಾಗುತ್ತದೆಯೋ ಅಥವಾ ಶ್ರೀಮಂತರ ಮನೆಗಳೂ ಹೋಗುತ್ತವೆಯೋ ನೋಡಬೇಕು.












Click it and Unblock the Notifications