• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?

By Mahesh
|

ಬೆಂಗಳೂರು, ಮಾ.28: ಬಿಬಿಎಂಪಿ ವ್ಯಾಪ್ತಿಯಲ್ಲಿ 2014-15ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಣೆ ಏ.1 ರಿಂದ ಆರಂಭವಾಗಲಿದೆ. ಆಸ್ತಿ ತೆರಿಗೆ ಸಂಗ್ರಹ ಗುರಿ ತಲುಪಲು ಚೆಕ್ ಸಲ್ಲಿಕೆಯನ್ನು ರದ್ದುಪಡಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಈ ಸಾಲಿನ ಆಸ್ತಿ ತೆರಿಗೆಯನ್ನು ನಗದು ಇಲ್ಲವೇ ಡಿ.ಡಿ ರೂಪದಲ್ಲಿ ಅಥವಾ ಆನ್ ಲೈನ್ ಮೂಲಕವಷ್ಟೇ ಪಾವತಿಸಬಹುದಾಗಿದೆ.

ಪಾಲಿಕೆ ಕಚೇರಿಗಳಲ್ಲಿ 1000 ರೂ.ವರೆಗೆ ಮಾತ್ರ ನಗದು ಪಾವತಿಸಬಹುದಾಗಿದ್ದು, ಅದಕ್ಕಿಂತ ಹೆಚ್ಚು ಮೊತ್ತವಿದ್ದರೆ ಡಿ.ಡಿ ಮೂಲಕ ಸಲ್ಲಿಸಬೇಕು. ಆಯ್ದ ಬ್ಯಾಂಕ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಗದು ಪಾವತಿಗೆ ಮಿತಿ ನಿರ್ಬಂಧವಿಲ್ಲ. ಒಂಬತ್ತು ಬ್ಯಾಂಕ್ ‌ಗಳು, 91 ಬೆಂಗಳೂರು ಒನ್ ಕೇಂದ್ರಗಳು ಹಾಗೂ ಸಹಾಯಕ ಕಂದಾಯಾಧಿಕಾರಿ ಕಚೇರಿಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, 2014-15ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಪ್ರಕ್ರಿಯೆ ಏ.1ರಿಂದ ಆರಂಭವಾಗಲಿದೆ. 2014-15ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ತೆರಿಗೆ ಪಾವತಿಗೆ ಸಲ್ಲಿಸಿದ ಬಹಳಷ್ಟು ಚೆಕ್ ‌ಗಳು ಬೌನ್ಸ್ ಆಗಿ ಆದಾಯ ಸೋರಿಕೆಯಾಗುತ್ತಿತ್ತು. ಇದನ್ನು ತಡೆಗಟ್ಟಲು ಮೂರು ತಿಂಗಳಿನಿಂದ ಚೆಕ್ ಪಡೆಯುವುದನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಮುಂದೆಯೂ ಚೆಕ್ ಸ್ವೀಕರಿಸುವುದಿಲ್ಲ ಎಂದು ಬಿಬಿಎಂಪಿ ಹಿರಿಯ ವಿತ್ತ ಅಧಿಕಾರಿಯೊಬ್ಬರು ಒನ್ ಇಂಡಿಯಾ ಸಂಸ್ಥೆಗೆ ತಿಳಿಸಿದ್ದಾರೆ.

ಎಷ್ಟು ಪಾವತಿ ಮಾಡಬೇಕು, ರಿಯಾಯತಿ ಇದ್ಯಾ?

ಎಷ್ಟು ಪಾವತಿ ಮಾಡಬೇಕು, ರಿಯಾಯತಿ ಇದ್ಯಾ?

ಆಸ್ತಿ ತೆರಿಗೆ ಪರಿಷ್ಕರಣೆಯಾಗದ ಕಾರಣ ಹೆಚ್ಚಿನ ಬದಲಾವಣೆಯಿಲ್ಲದಿದ್ದರೆ ಹಿಂದಿನ ವರ್ಷ ಪಾವತಿಸಿದ ಮೊತ್ತದಷ್ಟು ತೆರಿಗೆ ಪಾವತಿಸಬೇಕಾಗಬಹುದು. ಏ.30ರೊಳಗೆ ಪೂರ್ಣ ತೆರಿಗೆ ಪಾವತಿಗೆ ಒಟ್ಟು ತೆರಿಗೆ ಮೊತ್ತದ ಶೇ.5ರಷ್ಟು ರಿಯಾಯ್ತಿ ಸಿಗಲಿದೆ. ಆಸ್ತಿದಾರರು ದಂಡರಹಿತ ಮೊದಲ ಕಂತಿನ ತೆರಿಗೆ ಪಾವತಿಗೆ ಮೇ 30 ಕಡೆಯ ದಿನ.

ಒಂಬತ್ತು ಬ್ಯಾಂಕ್ ಗಳಲ್ಲಿ 336 ಶಾಖೆಗಳು

ಒಂಬತ್ತು ಬ್ಯಾಂಕ್ ಗಳಲ್ಲಿ 336 ಶಾಖೆಗಳು

ಆಸ್ತಿದಾರರ ಅನುಕೂಲಕ್ಕಾಗಿ ಒಂಬತ್ತು ಬ್ಯಾಂಕ್ ‌ಗಳಲ್ಲಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಐಡಿಬಿಐ, ಕೆನರಾ, ಕಾರ್ಪೋರೇಷನ್, ಐಎನ್ ‌ಜಿ ವೈಶ್ಯ, ಕೋಟಕ್ ಮಹೀಂದ್ರ, ಇಂಡಸ್ ಇಂಡ್, ಎಸ್ ಬ್ಯಾಂಕ್, ಇಂಡಿಯನ್ ಓವರ್ ‌ಸೀಸ್, ಎಚ್ ‌ಡಿಎಫ್ ‌ಸಿ ಬ್ಯಾಂಕ್ ‌ಗಳ ಒಟ್ಟು 336 ಶಾಖೆಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ.

ಪ್ರಸಕ್ತ ವರ್ಷ ತೆರಿಗೆ ಸಂಗ್ರಹ ಇಳಿಕೆ

ಪ್ರಸಕ್ತ ವರ್ಷ ತೆರಿಗೆ ಸಂಗ್ರಹ ಇಳಿಕೆ

ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳನ್ನು ಗುರುತಿಸಿ ಸೂಕ್ತ ತೆರಿಗೆ ಸಂಗ್ರಹಿಸುವುದಾಗಿ ಪಾಲಿಕೆ ಆಡಳಿತ ಹೇಳುತ್ತಿದ್ದರೂ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿಲ್ಲ. 2012-13ನೇ ಸಾಲಿನಲ್ಲಿ 1,360 ಕೊಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಆದರೆ 2013-14ನೇ ಸಾಲಿನಲ್ಲಿ 1,310 ಕೋಟಿ ರೂ. (ಮಾ.27ರವರೆಗೆ) ಮಾತ್ರ ಸಂಗ್ರಹವಾಗಿದ್ದು, ತೆರಿಗೆ ಪಾವತಿಗೆ ಇನ್ನು ಎರಡು ದಿನವಷ್ಟೇ ಬಾಕಿ ಉಳಿದಿದೆ. ಈವರೆಗೆ 15.16 ಲಕ್ಷ ಆಸ್ತಿಗಳ ವಿವರವನ್ನು ಜಿಐಎಸ್ ತಂತ್ರಜ್ಞಾನದಡಿ ದಾಖಲಿಸಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 2013-14ನೇ ಸಾಲಿನಲ್ಲಿ ಈವರೆಗೆ 1,310 ಕೋಟಿ ರೂ. ಸಂಗ್ರಹವಾಗಿದ್ದು, 11 ಲಕ್ಷ ಆಸ್ತಿದಾರರು ತೆರಿಗೆ ಪಾವತಿಸಿದ್ದಾರೆ.

ಆನ್ ಲೈನ್ ಮೂಲಕ ಪಾವತಿ ಉಚಿತ

ಆನ್ ಲೈನ್ ಮೂಲಕ ಪಾವತಿ ಉಚಿತ

ನಾಗರೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸುಲಭವಾಗಿ ತೆರಿಗೆ ಪಾವತಿಸಬಹುದು ಎಂದು ಆಯುಕ್ತ ಹೇಳಿದ್ದಾರೆ.

ಏ.1ರಿಂದ ಈ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಈ ಸೇವೆ ಉಚಿತವಾಗಿದ್ದು, ತೆರಿಗೆ ಪಾವತಿಸಲು ಯಾವುದೇ ಮೊತ್ತ ಪಾವತಿಸಬೇಕಿಲ್ಲ. ಐಡಿಬಿಐ ಬ್ಯಾಂಕ್ ನ ಹಣಪಾವತಿ ಗೇಟ್ ವೇ ಮೂಲಕ ಸುರಕ್ಷಿತವಾಗಿ ಹಣ ಸಂದಾಯ ಮಾಡಬಹುದು.

ಸಹಾಯವಾಣಿ ಲಭ್ಯ

ಸಹಾಯವಾಣಿ ಲಭ್ಯ

ಪಾಲಿಕೆಯ ಎಲ್ಲ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ. ಸಹಾಯವಾಣಿ : 65683804/5, 23365007/8

Email: bbmpsas@bbmp.gov.in

ಆನ್ ಲೈನ್ ನಲ್ಲಿ ಬ್ರೋಸರ್ ಮೋಝಿಲ್ಲಾ ಫೈರ್ ಫಾಕ್ಸ್ ಅಥವಾ ಗೂಗಲ್ ಕ್ರೋಮ್ ಬಳಸಿ ತೆರಿಗೆ ಪಾವತಿಸುವುದು ಸುರಕ್ಷಿತ ವಿಧಾನವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BBMP’s main source of revenue is the property tax. It had set a target of Rs 2,500 crore but could generate only Rs 1,310 crore. In order to achieve its target for the next financial year at the earliest, the BBMP has initiated several measures including doing away with collection of taxes through cheques. Instead, the Palike will only collect tax through cash and demand draft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more