E-Khata Fair: ಬೆಂಗಳೂರು ಇ-ಖಾತಾ ಮೇಳ, ಆಸ್ತಿ ಮಾಲೀಕರೇ ಪಾಲ್ಗೊಳ್ಳಿ, ಸೂಚನೆಗಳು
ಬೆಂಗಳೂರು, ಜನವರಿ 30: ಬೆಂಗಳೂರು ನಗರಾದ್ಯಂತ ಇ-ಖಾತಾ ವಿತರಣೆಯಲ್ಲಿ ಸರಳೀಕರಣಗೊಳಿಸಲು ಹಾಗೂ ನಿರೀಕ್ಷಿತ ಮಟ್ಟದಲ್ಲಿ ವಿತರಣೆ ತಲುಪಿಸುವ ಉದ್ದೇಶದಿಂದ ಬಿಬಿಎಂಪಿಯು ಇ-ಖಾತಾ ಮೇಳೆ ಆಯೋಜನೆ ಮಾಡಲಾಗುತ್ತಿದೆ. ನಾಗರಿಕರ ಅನುಕೂಲಕ್ಕಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ನಾಗರಿಕ ಗುಂಪುಗಳ ಸಹಕಾರದಲ್ಲಿ ಇ-ಖಾತಾ ಮೇಳದಲ್ಲಿ ಆಯೋಜಿಸಲು ಸಿದ್ಧತೆ ನಡೆಸಿದೆ.
ನಗರದಲ್ಲಿ ಇ-ಖಾತಾ ವಿತರಣೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಉದ್ದೇಶದಿಂದ ಬಿಬಿಎಂಪಿ ಹಾಗೂ ಯಾವುದೇ ಉತ್ಸುಕ ನಾಗರಿಕ ಗುಂಪುಗಳು ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಸೇರಿದಂತೆ ಇತ್ಯಾದಿ ಗುಂಪುಗಳು ತಾವೇ ತಮ್ಮ ಹತ್ತಿರದ ಪ್ರದೇಶಗಳಲ್ಲಿ ಇ-ಖಾತಾ ಮೇಳ ಆಯೋಜಿಸಬಹುದು. ಈ ಮೇಳಕ್ಕೆ ಬಿಬಿಎಂಪಿ ಸಹಕರಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.

ಬಿಬಿಎಂಪಿಯು ನಾಗರಿಕರ ಅನುಕೂಲಕ್ಕಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ನಾಗರಿಕ ಗುಂಪುಗಳಲ್ಲಿ ಇ-ಖಾತಾ ಮೇಳಗಳನ್ನು ಆಯೋಜನೆ, ಹೇಗೆ ನಡೆಸಬೇಕು ಎಂಬೆಲ್ಲ ಕುರಿತು ಬಿಬಿಎಂಪಿ ಕೆಲವು ಸೂಚನೆಗಳನ್ನು ನೀಡಿದೆ. ಈ ಸಂಬಂಧ ಇ-ಖಾತಾ ಮೇಳವನ್ನು ಹೇಗೆ ಪದ್ಧತಿಯಾಗಿ ಮತ್ತು ಸಂಘಟಿತ ರೀತಿಯಲ್ಲಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಇ-ಖಾತಾ ಮೇಳ ಆಯೋಜನೆ ಕುರಿತು ಅಧಿಕಾರಿಗಳಿಗೆ ಕಂದಾಯ ವಿಭಾಗದ ವಿಶೇಷ ಆಯುಕ್ತರು ಮಾರ್ಗಸೂಚಿ ನೀಡಿದ್ದಾರೆ. ನೀವು ಆಸಕ್ತ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಟನೆ, ನಾಗರಿಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಭೇಟಿ ಮಾಡಬೇಕು. ಆಸಕ್ತರನ್ನು ಸೇರಿಸಿ ವಾಟ್ಸಾಪ್ ಗ್ರೂಪ್ ರಚಿಸಬೇಕು. ಇಲ್ಲಿನ ನಿವಾಸಿಗಳನ್ನು ಮೇಳದಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸಬೇಕು.
ಬಳಿಕ ಇ-ಖಾತೆ ಪಡೆಯಲು ಬೇಕಾದ ಅಗತ್ಯ ಮಾಹಿತಿ ಪಡೆಯಬೇಕು. ಈ ಕುರಿತು ಮಾತನಾಡಿಕೊಂಡು ಮುಂದಿನ ಎರಡು ವಾರಗಳಲ್ಲಿ ಇ-ಖಾತಾ ಮೇಳ ಆಯೋಜನೆಗೆ ಸೂಕ್ತ ದಿನಾಂಕ ನೋಡಿಕೊಂಡು ಮೇಳ ಆಯೋಜನೆ ಮಾಡುವಂತೆ ಬಿಬಿಎಂಪಿ ಸೂಚನೆ ನೀಡಿದೆ.

ವಾಟ್ಸಾಪ್ ಗ್ರೂಪ್ ದಾಖಲೆ, ಖಾತೆ ಶೇರ್ ಬೇಡ
ಮೇಳದ ಮೂಲಕ ಇ-ಖಾತಾ ವಿತರಣೆ ಹೆಚ್ಚಿಸಲಾಗುತ್ತದೆ. ಅದಲ್ಲೇ ರಚನೆಯಾಗುವ ವಾಟ್ಸಾಪ್ ಗ್ರೂಪ್‌ನಲ್ಲಿ ಯಾವುದೇ ಮಾಹಿತಿ, ದಾಖಲೆ, ಖಾತಾಗಳನ್ನು ಹಂಚಿಕೊಳ್ಳವುದು ನಿಷಿದ್ಧ ಎಂದು ಬಿಬಿಎಂಪಿ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಒಟ್ಟು 22 ಲಕ್ಷಕ್ಕೂ ಹೆಚ್ಚು ಖಾತಾಗಳನ್ನು ಡಿಜಿಟಲೀಕರಣಗೊಳಿಸಿದೆ. ಈ ಪೈಕಿ ಎಲ್ಲವನ್ನು ನಾಗರಿಕರಿಗೆ ವಿತರಣೆ ಮಾಡಬೇಕು ಎಂದು ನಿರ್ಧರಿಸಿದೆ. ಆದರೆ ಸದ್ಯ ಒಂದು ಲಕ್ಷಕ್ಕಿಂತ ಅಧಿಕ ಪ್ರಮಾಣದಲ್ಲಷ್ಟೇ ವಿತರಣೆ ಮಾಡಲು ಸಾಧ್ಯವಾಗಿದೆ. ಹೀಗಾಗಿ ತ್ವರಿತ ವಿತರಣೆಗಾಗಿ, ಜನರಿಗೆ ಇ-ಖಾತೆ ಬಗ್ಗೆ ಅವರಿವು ಮೂಡಿಸಲು ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ.












Click it and Unblock the Notifications