Bengaluru: 2 ವಾರ್ಡ್‌ಗಳಲ್ಲಿ 696 ಅಕ್ರಮ 'ಎ' ಖಾತಾ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು- ವರದಿ, ವಿವರ

ಬೆಂಗಳೂರಿನ ಎರಡು ವಾರ್ಡ್‌ಗಳ ಕಂದಾಯ ಅಧಿಕಾರಿಗಳು 696 ಆಸ್ತಿಗಳಿಗೆ ಅಕ್ರಮ ‘ಎ’ ಖಾತಾ ಪ್ರಮಾಣ ಪತ್ರ ನೀಡಿರುವುದನ್ನು ಬಿಬಿಎಂಪಿ ಪತ್ತೆ ಮಾಡಿದೆ. ವರದಿ, ವಿವರ ಇಲ್ಲಿದೆ

ಬೆಂಗಳೂರು, ಮಾರ್ಚ್‌ 15: ಬೆಂಗಳೂರಿನ ಎರಡು ವಾರ್ಡ್‌ಗಳ ಕಂದಾಯ ಅಧಿಕಾರಿಗಳು 696 ಆಸ್ತಿಗಳಿಗೆ ಅಕ್ರಮ 'ಎ' ಖಾತಾ ಪ್ರಮಾಣ ಪತ್ರ ನೀಡಿರುವುದನ್ನು ಬಿಬಿಎಂಪಿ ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ತನ್ನ ಎಲ್ಲಾ 243 ವಾರ್ಡ್‌ಗಳಲ್ಲಿ ಇಂತಹ ಅಕ್ರಮ ಪ್ರಮಾಣ ಪತ್ರಗಳನ್ನು ಪರಿಶೀಲಿಸಲು ಸಜ್ಜಾಗಿದೆ. ಅಕ್ರಮ ಪ್ರಮಾಣ ಪತ್ರವನ್ನು ನೀಡಿದ್ದಾರೆಂದರೆ, ಆಸ್ತಿ ಮಾಲೀಕರು ಕಂದಾಯ ಅಧಿಕಾರಿಗೆ ಲಂಚ ನೀಡಿದ್ದಾರೆ ಎಂದು ಅರ್ಥೈಸಬಹುದು.

ವಾರ್ಡ್ 194ರಲ್ಲಿ 357 ಹಾಗೂ ವಾರ್ಡ್ 196ರಲ್ಲಿ 341 'ಎ' ಖಾತಾ ಪ್ರಮಾಣ ಪತ್ರಗಳನ್ನು ಅಕ್ರಮವಾಗಿ ನೀಡಿರುವುದು ಬಿಬಿಎಂಪಿ ತನಿಖೆಯಿಂದ ಗೊತ್ತಾಗಿದೆ. ಬಿಬಿಎಂಪಿ ತಂಡ ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರಗಳ ಕಂದಾಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ಈ ವಿವರ ಬೆಳಕಿಗೆ ಬಂದಿದೆ.

Bengaluru BBMP officials in 2 wards issued 696 illegal A khatas

ಇಂತಹ ಅಕ್ರಮ ಪ್ರಮಾಣ ಪತ್ರಗಳ ಸಂಖ್ಯೆ ಒಂದು ಲಕ್ಷದಷ್ಟಿರಬಹುದು ಎಂದು ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ. ಬಿಬಿಎಂಪಿಯಲ್ಲಿ ಸುಮಾರು 6.19 ಲಕ್ಷ 'ಬಿ' ಖಾತಾ ಆಸ್ತಿಗಳಿವೆ. 'ಎ' ಮತ್ತು 'ಬಿ' ಖಾತಾ ಆಸ್ತಿಗಳಿಗೆ ಆಸ್ತಿ ತೆರಿಗೆ ದರಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೂ, 'ಎ' ಖಾತಾ ಆಸ್ತಿಗಳ ಮಾರುಕಟ್ಟೆ ಮೌಲ್ಯವು ತುಂಬಾ ಹೆಚ್ಚಾಗಿದೆ.

ಸುಧಾರಿತ ಶುಲ್ಕವನ್ನು ಪಾವತಿಸಿದ ಅಥವಾ ಸಮರ್ಥ ಅಧಿಕಾರಿಗಳಿಂದ ಪಡೆದ ಅಗತ್ಯ ಅನುಮೋದನೆಗಳನ್ನು ಹೊಂದಿರುವ ಆಸ್ತಿಗಳಿಗೆ 'ಎ' ಖಾತಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

ಫೆಬ್ರವರಿಯಲ್ಲಿ, ಬಿಬಿಎಂಪಿಯು 'ಎ' ಖಾತಾ ನೋಂದಣಿ ಅಡಿಯಲ್ಲಿ 'ಬಿ' ಖಾತಾ ಆಸ್ತಿಗಳನ್ನು ಅಕ್ರಮವಾಗಿ ಪರಿವರ್ತಿಸಿದ ಬಗ್ಗೆ ತನಿಖೆ ಮಾಡಲು ಮೂರು ಸದಸ್ಯರ ಸಮಿತಿಯನ್ನು ರಚಿಸಿತು. ಖಾತಾ ಪ್ರಮಾಣ ಪತ್ರಗಳ ಅಕ್ರಮ ಪರಿವರ್ತನೆಯಲ್ಲಿ ಭಾಗಿಯಾಗಿರುವ ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಭರವಸೆ ನೀಡಿದೆ.

Bengaluru BBMP officials in 2 wards issued 696 illegal A khatas

ದಾಸರಹಳ್ಳಿ, ಆರ್‌ಆರ್‌ ನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ಯಲಹಂಕ ವಲಯಗಳಿಂದ ಬಿಬಿಎಂಪಿಗೆ ಹಲವು ದೂರುಗಳು ಬಂದಿದ್ದು, ಇಲ್ಲಿ ಕಂದಾಯ ಅಧಿಕಾರಿಗಳು ಅನುಮೋದಿತವಲ್ಲದ ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಕಟ್ಟಡಗಳಿಗೆ 'ಎ' ಖಾತಾ ಪ್ರಮಾಣಪತ್ರ ನೀಡಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

2022-23ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಬಿ' ರಿಜಿಸ್ಟರ್‌ನಲ್ಲಿ ದಾಖಲಾಗಿರುವ ಆಸ್ತಿಗಳನ್ನು 'ಎ' ಪಟ್ಟಿಗೆ ಪರಿವರ್ತಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸರ್ಕಾರವು ಈ ಪ್ರಕ್ರಿಯೆಯಲ್ಲಿ ನಿಧಾನವಾಗಿದೆ. ಇದೇ ವೇಳೆ, 'ಬಿ' ಖಾತಾ ಆಸ್ತಿದಾರರಿಂದ ದುಪ್ಪಟ್ಟು ಆಸ್ತಿ ತೆರಿಗೆ ಸಂಗ್ರಹಿಸಲು ಅವಕಾಶ ನೀಡುವ ಷರತ್ತು ಕೈಬಿಡಲು ಬಿಬಿಎಂಪಿ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+