BBMP ಅಗ್ನಿ ಅವಘಡ ಪ್ರಕರಣ: ಕೊನೆಗೂ ತನಿಖೆ ಆರಂಭಿಸಿದ ಬಿಬಿಎಂಪಿ
ಬೆಂಗಳೂರು, ಆಗಸ್ಟ್, 17: ಬಿಬಿಎಂಪಿ ಕಚೇರಿ ಬೆಂಕಿ ಪಕರಣ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ತನಿಖೆಗೆ ಸೂಚಿಸಿ 5 ದಿನವಾದರೂ ಬಿಬಿಎಂಪಿ ತನಿಖೆ ಮಾಡುವ ಲಕ್ಷಣವೇ ಕಾಣಿಸುತ್ತಿಲ್ಲ ಅಂತಾ ಜನ ಸಿಡಿಮಿಡಿ ಗೊಂಡಿದ್ದರು. ಬಿಬಿಎಂಪಿ ತನಿಖೆ ಆರಂಭ ಮಾಡುವುದು ಯಾವಾಗ ಅನ್ನುವ ಅನುಮಾನ ಶುರುವಾಗಿತ್ತು. ಆದರೆ ಆ ಎಲ್ಲಾ ಅನುಮಾನಗಳಿಗೆ ಇದೀಗ ಬಿಬಿಎಂಪಿ ಇತಿಶ್ರೀ ಹಾಡಿದ್ದು, ಕೊನೆಗೂ ಲ್ಯಾಬ್ ಓಪನ್ ಮಾಡಿ ತನಿಖೆ ಆರಂಭಿಸಿದೆ.
ಇಷ್ಟು ದಿನ ಪೊಲೀಸರು ಪ್ರಕರಣ ಹಿಂದಿನ ರಹಸ್ಯವನ್ನ ಜಾಲಾಡಿ ಎಳೆಎಳೆಯಾಗಿ ಪರಿಶೀಲನೆ ನಡೆಸುತ್ತಿದ್ದರು. ಬೆಂಕಿ ಬಿದ್ದ ದಿನದಿಂದ ಗುಣ ನಿಯಂತ್ರಣ ಕೊಠಡಿಯ ಕೀ ಪೊಲೀಸರ ಕೈಯಲ್ಲಿತ್ತು. ಅತ್ತ ಬಿಬಿಎಂಪಿ ಕೂಡ ದುರಂತದ ಹಿಂದಿನ ಅಸಲಿ ಕಾರಣ ಹುಡುಕಲು ತಾಂತ್ರಿಕವಾಗಿ ತನಿಖೆ ನಡೆಸುವ ಹೊಣೆ ಮುಖ್ಯ ಇಂಜಿನಿಯರ್ ಪ್ರಹ್ಲಾದ್‌ಗೆ ಹೊರಿಸಿತ್ತು.

ಆದರೆ ಲ್ಯಾಬ್‌ನ ಕೀ ಸಿಗದೆ ಘಟನೆ ಸ್ಥಳ ಪರಿಶೀಲನೆ ಸಾಧ್ಯವಾಗಿರಲಿಲ್ಲ. ಇಂದು ಪೊಲೀಸರಿಂದ ಕೀ ಸಿಕಿದ್ದು, ಗುಣ ನಿಯಂತ್ರಣ ಕೊಠಡಿ ತೆರೆದು ಪ್ರಹ್ಲಾದ್ ಜೊತೆ ಮೂವರು ಇಂಜಿನಿಯರ್‌ಗಳ ತನಿಖೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ ಅದಷ್ಟು ಬೇಗ ತನಿಖೆ ವರದಿಯನ್ನ ಮುಖ್ಯ ಆಯುಕ್ತರಿಗೆ ನೀಡಲು ಸಜ್ಜಾಗಿದ್ದಾರೆ.
ಈ ತನಿಖಾ ತಂಡದ ನೇತೃತ್ವವಹಿಸಿರುವ ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಪ್ರತಿಕ್ರಿಯಿಸಿ, ಬೆಂಕಿ ಬಿದ್ದಾಗ ಆಗಿರುವ ಘಟನೆ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಬೆಂಕಿ ಬೀಳಲು ಏನು ಕಾರಣ? ಅಗ್ನಿ ಅವಘಡ ಸಂಭವಿಸಿದ ದಿನ ಸಿಬ್ಬಂದಿ ನಂದಿಸುವ ಪ್ರಯತ್ನ ಮಾಡದೇ ಹೊರಗೆ ಓಡಿ ಬಂದಿದ್ದರು ಎಂದು ಹೇಳಿದ್ದಾರೆ.
ಈ ಕಟ್ಟಡದಲ್ಲಿ ಲ್ಯಾಬ್ ಓಪನ್ ಆಗಿ 5 ವರ್ಷಗಳಾಗಿದೆ. ರೋಡ್ ಗುಣಮಟ್ಟವನ್ನು ಮೊದಲು ಹೊರಗೆ ಮಾಡಲಾಗುತ್ತಿತ್ತು. ಈಗ ಲ್ಯಾಬ್‌ನಲ್ಲಿ ಮಾಡಲಾಗುತ್ತಿದೆ. ಇದು ಯಾವುದೇ ಪ್ಲಾನ್ ಇಲ್ಲದೇ ಕಟ್ಟಿರುವ ಕಟ್ಟಡವಾಗಿದೆ. ಲ್ಯಾಬ್‌ಗಳು ಗ್ರೌಂಡ್ ಪ್ಲೋರ್ ಮಾತ್ರ ಇರಬೇಕು. ಆ ನಿಯಮವೂ ಸಹ ಇಲ್ಲಿ ಉಲ್ಲಂಘನೆಯಾಗಿದೆ. ಈ ಎಲ್ಲ ಆಯಮಗಳಲ್ಲೂ ತನಿಖೆ ಮಾಡಿ ವರದಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಅತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 9 ಗಾಯಾಳುಗಳಿಗೆ ಟ್ರೀಟ್ಮೆಂಟ್ ಮುಂದುವರೆದಿದೆ. ಚೀಫ್ ಎಂಜಿನಿಯರ್ ಶಿವಕುಮಾರ್, ಆಪರೇಟರ್ ಜ್ಯೋತಿ ಕಂಡಿಷನ್ ಮೊದಲು ಕ್ರಿಟಿಕಲ್ ಆಗಿತ್ತು. ಸದ್ಯ ಅರೋಗ್ಯ ಸುಧಾರಿಸಿದ ಅಂತಾ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾಹಿತಿ ಬಂದಿದೆ. ಮತ್ತೊಂದೆಡೆ ಗಾಯಾಳುಗಳ ಸಂಬಂಧಿಕರು ಆದಷ್ಟು ಬೇಗ ಗುಣ ಆದರೆ ಸಾಕು ಅಂತಾ ಪ್ರಾರ್ಥಿಸುತ್ತಿದ್ದಾರೆ.
ಈ ಅವಘಡ ಆಕಸ್ಮಿಕವೋ ಉದ್ದೇಶ ಪೂರ್ವಕವೋ ಎಂಬ ವಿಚಾರ ಬಯಲಾಗುವುದು ತನಿಖೆ ಮುಗಿದ ಮೇಲೆ ಅಷ್ಟೇ. ಯಾರೋ ಮಾಡಿದ ತಪ್ಪಿಗೆ 9 ಜೀವಗಳು ಇಂದಿಗೂ ಕೂಡ ಸುಟ್ಟ ಗಾಯಕ್ಕೆ ಟ್ರೀಟ್‌ಮೆಂಟ್ ಪಡೆದು ಕೊಳ್ಳುತ್ತಿದ್ದಾರೆ. ಈ ಮಧ್ಯೆ ಯಾರ ಕಾರಣದಿಂದ ನಾವು ಶಿಕ್ಷೆ ಅನುಭವಿಸುತ್ತಾ ಇದ್ದೇವೆ ಅನ್ನೋದೆ ಆ ಜೀವಗಳಿಗೆ ತಿಳಿದಿಲ್ಲ. ಒಂದು ಕಡೆ ಪೊಲೀಸರು ತನಿಖೆ ಚುುಕುಗೊಳಿಸಿದ್ದಾರೆ. ಮತ್ತೊಂದು ಕಡೆ ಈಗ ಬಿಬಿಎಂಪಿಗೆ ಕೂಡ ಕೀ ಹಸ್ತಾಂತರ ಮಾಡಿದ್ದು, ನಾಳೆಯಿಂದ ತನಿಖೆ ಆರಂಭ ಮಾಡಲಾಗುತ್ತದೆ.












Click it and Unblock the Notifications