ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ LIVE: ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

|
Google Oneindia Kannada News

Recommended Video

      BBMP Mayor Election 2018 : ಬಿಬಿಎಂಪಿ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ | Oneindia Kannada

      ಬೆಂಗಳೂರು, ಸೆ.28: ಬಿಬಿಎಂಪಿಯ ನೂತನ ಮೇಯರ್ ಆಗಿ ಜಯನಗರ 153ನೇ ವಾರ್ಡ್ ನ ಕಾರ್ಪೊರೇಟರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದಾರೆ. 130 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.

      ಕೌನ್ಸಿಲ್ ನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನಡೆದ ಹೈಡ್ರಾಮಾ ಬಳಿಕ ಬಿಜೆಪಿ ಸೋಲೊಪ್ಪಿಕೊಂಡಿದ್ದು, ಕಾಂಗ್ರೆಸ್ ನ ಅಭ್ಯರ್ಥಿ ಗಂಗಾಂಬಿಕೆ ಮೇಯರ್ ಆಗಿ, ಜೆಡಿಎಸ್ ಅಭ್ಯರ್ಥಿ ರಮೀಳಾ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

      ಬೆಂಗಳೂರು ಮೇಯರ್ ಆಯ್ಕೆಗೆ 24 ಗಂಟೆ ಬಾಕಿ: ಯಾರಿಗೆ ಒಲಿಯುತ್ತೆ ಗೌನ್? ಬೆಂಗಳೂರು ಮೇಯರ್ ಆಯ್ಕೆಗೆ 24 ಗಂಟೆ ಬಾಕಿ: ಯಾರಿಗೆ ಒಲಿಯುತ್ತೆ ಗೌನ್?

      ಬಿಬಿಎಂಪಿ ಪ್ರಾದೇಶಿಕ ಅಧಿಕಾರಿ ಶಿವಯೋಗಿ ಕಳಸದ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ ಅವರನ್ನು ಅಂತಿಮಗೊಳಿಸಿತ್ತು.

      LIVE: BBMP mayor election 2018

      ಆದರೆ ಇನ್ನೊಂದೆಡೆ ಬಿಜೆಪಿಯು ಆಪರೇಷನ್ ಕಮಲಕ್ಕೆ ತಯಾರಿ ನಡೆಸಿದ್ದು ಹಲವು ಕಾರ್ಪೊರೇಟ ರ್ ಗಳನ್ನು ರೆಸಾರ್ಟ್ ಗೆ ಕರೆದೊಯ್ದು ಮನವೊಲಿಸುವ ಪ್ರಯತ್ನಕ್ಕೆ ಕೈಹಾಕಿತ್ತು. ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿ ಶೋಭಾ ಅಂಜನಪ್ಪ ಉಪಮೇಯರ್ ಅಭ್ಯರ್ಥಿಯಾಗಿ ರಮೀಳಾ ಉಮಾಶಂಕರ್ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ.

      ಬಿಬಿಎಂಪಿಯಲ್ಲಿ ಪಕ್ಷಗಳ ಬಲಾಬಲವೇನು?: ಬಿಜೆಪಿಯಲ್ಲಿ ಕಾರ್ಪೊರೇಟರ್ ಗಳು 100, ಎಂಎಲ್ 11, ಎಂಎಲ್ ಸಿ 6, ಎಂಪಿ 3, ರಾಜಸಭಾ ಎಂಪಿ 2, ಸ್ವತಂತ್ರ 1 ಮತಗಳಿರುತ್ತದೆ. ಕಾಂಗ್ರೆಸ್ ನಲ್ಲಿ ಕಾರ್ಪೊರೇಟರ್ ಗಳು 75, ಎಂಎಲ್ಎ 15, ಎಂಎಲ್ ಸಿ8, ಎಂಪಿ 2, ರಾಜ್ಯಸಭಾ ಎಂಪಿ 6 ಒಟ್ಟು 106 ಮತಗಳಿತ್ತು.

      Newest FirstOldest First
      1:08 PM, 28 Sep

      ಉಪಮೇಯರ್ ಆಗಿ ರಮೀಳಾ ಆಯ್ಕೆಯಾಗಿದ್ದಾರೆ
      1:04 PM, 28 Sep

      ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ
      1:04 PM, 28 Sep

      ಗಂಗಾಂಬಿಕೆ ಅವರ ಪರವಾಗಿ 130 ಸದಸ್ಯರು ಮತ ಚಲಾಯಿಸಿದ್ದಾರೆ, ವಿರುದ್ಧವಾಗಿ ಯಾರೂ ಮತ ಚಲಾಯಿಸಿಲ್ಲ
      1:04 PM, 28 Sep

      ಶೋಭಾ ಆಂಜನಪ್ಪ ಪರ ಯಾರೂ ಮತದಾನ ಮಾಡಿಲ್ಲ ವಿರುದ್ಧವಾಗಿ 130 ಸದಸ್ಯರ ಮತ ಚಲಾವಣೆ
      12:51 PM, 28 Sep

      ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಇನ್ನು 10 ನಿಮಿಷಗಳಲ್ಲಿ ಆರಂಭ
      12:50 PM, 28 Sep

      ಗಂಗಾಂಬಿಕೆ ಮಲ್ಲಿಕಾರ್ಜುನ್ ಪರ ಮತದಾನ ಪ್ರಕ್ರಿಯೆ ಆರಂಭ
      12:46 PM, 28 Sep

      ಮೊದಲನೇ ಅಭ್ಯರ್ಥಿ ಶೋಭಾ ಅಂಜನಪ್ಪ ವಿರುದ್ಧವಾಗಿ ಸಹಿ ಪಡೆವ ಪ್ರಕ್ರಿಯೆ ಬಹುತೇಕ ಮುಕ್ತಾಯ
      Advertisement
      12:42 PM, 28 Sep

      ಕಾಂಗ್ರೆಸ್-ಜೆಡಿಎಸ್ ಗೆ ಮೇಯರ್, ಉಪ ಮೇಯರ್ ಪಟ್ಟ
      12:38 PM, 28 Sep

      ಶೋಭಾ ಆಂಜನಪ್ಪ ಪರವಾಗಿ ಕೈ ಎತ್ತುವ ಮೂಲಕ ಮತದಾನ
      12:36 PM, 28 Sep

      ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮಾತ್ರ ಚುನಾವಣೆ ಪ್ರಕ್ರಿಯೆ ವೇಳೆ ಹಾಜರಿದ್ದಾರೆ
      12:33 PM, 28 Sep

      ಭಯಂಕರ ಹೈಡ್ರಾಮಾ ಬಳಿಕ, ಅಧಿಕಾರವನ್ನು ಬಾಚಿಕೊಳ್ಳುವುದರಲ್ಲಿ ಬಿಜೆಪಿ ವಿಫಲವಾಗಿರುವುದು ಸ್ಪಷ್ಟವಾಗಿದೆ
      12:31 PM, 28 Sep

      ಬಿಬಿಎಂಪಿ ನೂತನ ಮೇಯರ್ ಆಗಿ ನಾಗಾಂಬಿಕೆ ಮಲ್ಲಿಕಾರ್ಜುನ ಆಯ್ಕೆ, ಅಧಿಕೃತ ಘೋಷಣೆಯೊಂದೇ ಬಾಕಿ
      Advertisement
      12:31 PM, 28 Sep

      ರಾಜೀವ್ ಚಂದ್ರಶೇಖರ್, ಪಿಸಿ ಮೋಹನ್, ಸದಾನಂದಗೌಡ ಸಭಾತ್ಯಾಗ
      12:30 PM, 28 Sep

      ಕಾಂಗ್ರೆಸ್ ಗೆ ಮೇಯರ್ ಸ್ಥಾನ ನಿಶ್ಚಯವಾದ ಹಿನ್ನೆಲೆಯಲ್ಲಿ ಬಿಜೆಪಿ ಸಭಾತ್ಯಾಗ
      12:29 PM, 28 Sep

      ಬಿಜೆಪಿ ಕೆಲ ಸದಸ್ಯರಿಂದ ಸಭಾತ್ಯಾಗ
      12:27 PM, 28 Sep

      ಸದಸ್ಯರು ಒಮ್ಮೆ ಕೌನ್ಸಿಲ್ ನಿಂದ ಹೊರಗಡೆ ಹೋದರೆ ಮತ್ತೆ ಒಳಗೆ ಬರುವ ಅವಕಾಶವಿಲ್ಲ: ಶಿವಯೋಗಿ
      12:25 PM, 28 Sep

      ರಘು ಆಚಾರ್, ಸಿ ಆರ್ ಮನೋಹರ್, ವಿಎಸ್ ಉಗ್ರಪ್ಪ, ಜಯರಾಂ ರಮೇಶ್ ಮತದಾನ ಮಾಡಬಹುದು ಶಿವಯೋಗಿ ಕಳಸದ್ ಹೇಳಿಕೆ
      12:21 PM, 28 Sep

      ಮಧ್ಯಾಹ್ನ 12 ಗಂಟೆಯೊಳಗೆ ಚುನಾವಣಾ ಪ್ರಕ್ರಿಯೆ ಮುಗಿದು ಫಲಿತಾಂಶ ಹೊರಬೀಳಬೇಕಿತ್ತು
      12:19 PM, 28 Sep

      ಸಭೆಯಲ್ಲಿ ರೌಡಿಗಳಂತೆ ಹೊಡೆದಾಡಿಕೊಳ್ಳುತ್ತಿರುವ ನಾಯಕರು, ಚುನಾವಣೆ ಪ್ರಕ್ರಿಯೆ ವಿಳಂಬ
      12:12 PM, 28 Sep

      ಅಭ್ಯರ್ಥಿಗಳ ಹೆಸರು ಕೂಗಿದಾಕ್ಷಣ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಬೇಕು
      12:12 PM, 28 Sep

      ಎರಡೂ ಕಡೆ ಸಹಿ ಮಾಡದೆ ಇರುವವರು ತಟಸ್ಥವಾಗಿ ಇರಬಹುದು
      12:05 PM, 28 Sep

      ಮೊದಲನೇ ಅಭ್ಯರ್ಥಿ ಶೋಭಾ ಅಂಜನಪ್ಪ ಪರವಾಗಿ ಮೊದಲು ಮತ ಚಲಾವಣೆ
      12:04 PM, 28 Sep

      ಆರ್ ರೋಷನ್ ಬೇಗ್, ಎಸ್ ಆಶಾ ಸುರೇಶ್, ಲಲಿತಾ ತಿಮ್ಮನಂಜಯ್ಯ, ಅನಂತ ಕುಮಾರ್, ನಿರ್ಮಲಾ ಸೀತಾರಾಮನ್, ನಾಜೀಂ ಖಾನಂ ಸಹಿ ಮಾಡಿಲ್ಲ
      12:02 PM, 28 Sep

      259 ಸದಸ್ಯರ ಪೈಕಿ 253 ಮಂದಿ ಸಹಿ ಮಾಡಿದ್ದಾರೆ
      12:01 PM, 28 Sep

      ಯಾರು ಹಾಜರಾತಿ ಹಾಕಿಲ್ಲ ಅವರಿಗೆ ಮತದಾನ ಹಕ್ಕು ಸಿಗುವುದಿಲ್ಲ: ಶಿವಯೋಗಿ
      11:58 AM, 28 Sep

      ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಕ್ತಾಯ
      11:56 AM, 28 Sep

      ಚುನಾವಣಾ ಪ್ರಕ್ರಿಯೆಗೆ ಬಿಜೆಪಿ ನಾಯಕರಿಂದ ಅಡ್ಡಿ
      11:54 AM, 28 Sep

      ಪಕ್ಷೇತರ ಕಾರ್ಪೊರೇಟರ್ ಆನಂದ್ ಮತ್ತೆ ಕಾಂಗ್ರೆಸ್ ತೆಕ್ಕೆಗೆ
      11:51 AM, 28 Sep

      ಮತ್ತೆ ಜೆಡಿಎಸ್ ತೆಕ್ಕೆಗೆ ಬಂದ ದೇವದಾಸ್
      11:50 AM, 28 Sep

      ಸದಸ್ಯರು ತಮ್ಮ ಸ್ಥಾನದಲ್ಲಿ ಬಂದು ಕೂರದಿದ್ದರೆ ಹಾಜರಾತಿ ಅಧಿಕೃತವಾಗಲ್ಲ: ಪ್ರಾದೇಶಿಕ ಅಧಿಕಾರಿ ಶಿವಯೋಗಿ ಕಳಸದ್
      READ MORE

      English summary
      Bengaluru mayor election will be held at BBMP premises on September 28 at 10.30.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X