Breaking; ಬಿಬಿಎಂಪಿ ಕಸದ ಲಾರಿಗಳ ಬಗ್ಗೆ ತನಿಖೆಗೆ ಆದೇಶ

ಬೆಂಗಳೂರು, ಏಪ್ರಿಲ್ 19; ಬೆಂಗಳೂರು ನಗರದಲ್ಲಿ ಕಸ ಸಾಗಣೆ ಮಾಡುವ ಬಿಬಿಎಂಪಿಯ ಲಾರಿಗಳಿಂದ ಸರಣಿ ಅಪಘಾತವಾಗುತ್ತಿದೆ. ಈ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನಿಖೆ ನಡೆಸಲು ಮುಂದಾಗಿದೆ.

ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಈ ಕುರಿತು ಆದೇಶ ಹೊರಡಿಸಿದ್ದಾರೆ. ಪಾಲಿಕೆಯ ಕಸ ಸಾಗಣೆ ಮಾಡುವ ಲಾರಿಗಳ ಫಿಟ್ನೆಸ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ತನಿಖೆ ನಡೆಯಲಿದೆ.

BBMP Commissioner Orders For Probe On Garbage Transport Truck

ಲಾರಿಗಳ ಫಿಟ್ನೆಸ್, ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡಲಾಗಿದೆಯೇ?, ಲಾರಿಗಳು ಸಂಚಾರಕ್ಕೆ ಯೋಗ್ಯವೇ? ಮುಂತಾದ ವಿಚಾರಗಳ ಕುರಿತು ವಿವರವಾದ ತನಿಖೆ ನಡೆಯಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಸ ಸಾಗಣೆ ಮಾಡುವ ಲಾರಿಗಳಿಂದ ಪದೇ ಪದೇ ಅಪಘಾತಗಳು ಉಂಟಾಗುತ್ತಿವೆ. ಸೋಮವಾರ ರಾತ್ರಿ ಸಹ ನಾಯಂಡಹಳ್ಳಿ ಬಳಿ ಕಸದ ಲಾರಿ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಸಾಗುತ್ತಿದ್ದ ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಪದ್ಮಿನಿ (29) ಎಂಬುವವರು ಮೃತಪಟ್ಟಿದ್ದರು.

ಪದೇ ಪದೇ ಅಪಘಾತಗಳು ಆಗುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಕಸದ ಲಾರಿಗಳ ಬಗ್ಗೆ ವಿವರವಾದ ತನಿಖೆಗೆ ಆದೇಶ ನೀಡಿದೆ. ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ಲಾರಿಗಳ ಪ್ರಮಾಣ ಪತ್ರಗಳನ್ನು ಆಗಾಗ ಪರಿಶೀಲನೆ ಮಾಡಬೇಕು ಎಂದ ಸಹ ಸೂಚನೆ ನೀಡಲಾಗಿದೆ.

ಬಿಬಿಎಂಪಿಯಲ್ಲಿ ಕಸ ಸಾಗಣೆ ಮಾಡುವ ವಾಹನಗಳನ್ನು ಕಸ ಸಂಗ್ರಹಣೆ ಗುತ್ತಿಗೆದಾರರು ತಂದಿರುವುದು. ಇವುಗಳಲ್ಲಿ ಫಿಟ್ನೆಸ್ ಪ್ರಮಾಣ ಪತ್ರ ಇಲ್ಲದ, ಸಂಚಾರಕ್ಕೆ ಯೋಗ್ಯವಲ್ಲದ, ಹಳೆಯ ಲಾರಿಗಳು ಸಹ ಸೇರಿವೆ. ಈ ಹಿನ್ನಲೆಯಲ್ಲಿ ಎಲ್ಲ ಲಾರಿಗಳ ಬಗ್ಗೆ ತನಿಖೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+