ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?

ಬೆಂಗಳೂರು, ಮೇ 4: ಲಾಕ್‌ಡೌನ್‌ನಲ್ಲಿ ಸಡಿಲಿಕೆ ಘೋಷಣೆಯಾಗಿದ್ದು, ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ರಿಲೀಫ್ ಸಿಕ್ಕಿದೆ. ಅಂಗಡಿಗಳನ್ನು ತೆರೆಯಲು, ಕಚೇರಿಗಳು ತೆರಳಲು, ಅವಶ್ಯಕತೆ ಕೆಲಸಗಳನ್ನು ಮಾಡಿಕೊಳ್ಳಲು ಕಾಲಾವಕಾಶ ನೀಡಿದೆ.

ಇದರ ಜೊತೆ ಜೊತೆ ಕಟ್ಟುನಿಟ್ಟಿನ ಷರತ್ತುಗಳನ್ನು ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ವಿಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಆದೇಶಿಸಿರುವ ಬಿಬಿಎಂಪಿ ಮಾಸ್ಕ್ ಧರಿಸಿವುದು ಕಡ್ಡಾಯ ಎಂದು ಹೇಳಿದೆ.

ಒಂದು ವೇಳೆ ಮಾಸ್ಕ್ ಧರಿಸಿದ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ನಿರ್ದೇಶಿಸಿತ್ತು. ಇದೀಗ, ಮೂರು ದಿನದಿಂದ ಆದೇಶ ಉಲ್ಲಂಘನೆ ಮಾಡಿದವರಿಂದ ದಂಡ ಸಂಗ್ರಹಿಸಲಾಗಿದೆ. ಮೂರು ದಿನಕ್ಕೆ ಮಾಸ್ಕ್ ಧರಿಸಿದವರಿಂದ ಎಷ್ಟು ದಂಡ ಸಂಗ್ರಹಣೆಯಾಗಿದೆ? ಮುಂದೆ ಓದಿ.....

ಇಂದು ಸಂಗ್ರಹಣೆಯಾಗಿದ್ದು ಎಷ್ಟು?

ಮಾಸ್ಕ್ ಧರಿಸದೆ ಅಡ್ಡಾದಿಡ್ಡಿ ಓಡಾಡಿದವರಿಂದ ಇಂದು 89,455 ಸಾವಿರ ದಂಡ ಸಂಗ್ರಹಿಸಲಾಗಿದೆ. ಬೆಂಗಳೂರಿನ ಎಲ್ಲ ವಯಲಗಳಲ್ಲೂ ಸೇರಿ ಬಿಬಿಎಂಪಿ ಆದೇಶ ಉಲ್ಲಂಘಿಸಿದ್ದಕ್ಕಾಗಿ 202 ಕೇಸ್ ದಾಖಲಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮೇ 3 ರಂದು ಸಂಗ್ರಹವಾದ ಹಣ ಎಷ್ಟು?

ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಮೇ 3ರಂದು 98,350 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಮೇಯರ್ ಮಾಹಿತಿ ನೀಡಿದ್ದಾರೆ. ಇನ್ನು ಎರಡನೇ ದಿನವಾದ ನಿನ್ನೆ 190 ಕೇಸ್‌ ದಾಖಲಾಗಿದೆ.

ಮೊದಲ ದಿನ ಬಂದ ದಂಡ ಎಷ್ಟು?

ಮಾಸ್ಕ್ ಧರಿಸಿಲ್ಲ ಅಂದ್ರೆ ಸಾವಿರ ರೂಪಾಯಿ ದಂಡ ಎಂದು ಘೋಷಣೆ ಮಾಡಿದ್ದ ಮೊದಲ ದಿನ ಬೆಂಗಳೂರಿನಲ್ಲಿ 51,700 ರೂಪಾಯಿ ವಸೂಲಿ ಆಗಿತ್ತು. ಮೇ 2ರಂದು ಕೇವಲ 86 ಕೇಸ್ ದಾಖಲಾಗಿತ್ತು. ಮೊದಲ ದಿನಕ್ಕೆ ಹೋಲಿಸಿಕೊಂಡರೆ ನಂತರ ಎರಡು ದಿನ ಹೆಚ್ಚು ಕೇಸ್ ಮತ್ತು ಹೆಚ್ಚು ದಂಡ ಸಂಗ್ರಹವಾಗಿದೆ.

ಒಟ್ಟು ಸಂಗ್ರಹವಾದ ದಂಡ ಎಷ್ಟು?

ಒಟ್ಟು ಸಂಗ್ರಹವಾದ ದಂಡ ಎಷ್ಟು?

ಮೂರು ದಿನಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಒಟ್ಟು 2,39,505 ರೂಪಾಯಿ ದಂಡವನ್ನು ಬಿಬಿಎಂಪಿ ಸಂಗ್ರಹಿಸಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಎಂದು ಎಷ್ಟು ಹೇಳಿದರೂ ಬೆಂಗಳೂರಿನ ಜನರು ಮಾತ್ರ, ಕೊರೊನಾ ವೈರಸ್‌ಗೆ ಡೋಂಟ್‌ ಕೇರ್ ಎನ್ನುತ್ತಿದ್ದಾರೆ ಎಂಬುದು ಈ ಅಂಕಿ ಅಂಶಗಳು ಹೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+