BBMP Budget: ಇಂದು ಬಿಬಿಎಂಪಿ ಬಜೆಟ್ ಆನ್‌ಲೈನ್‌ನಲ್ಲಿ ವೀಕ್ಷಿಸಿ
ಬೆಂಗಳೂರು ಫೆಬ್ರವರಿ 29: ರಾಜ್ಯ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನರಯಡಿ ಬಿಬಿಎಂಪಿಯ 2024-25ನೇ ಆಯವ್ಯಯದಲ್ಲಿ ಒತ್ತು ನೀಡಲಾಗಿದ್ದು, ಬಜೆಟ್ ಮಂಡನೆಗೆ ಇಂದು ಮುಹೂರ್ತ ನಿಗಧಿಯಾಗಿದೆ. ಬರೋಬ್ಬರಿ 13 ಸಾವಿರ ಕೋಟಿ ಗ್ರಾತದ ಆಯವ್ಯಯ ಮಂಡನೆ ಆಗುವ ಸಾಧ್ಯತೆ ಇದೆ. ಈ ಬಜೆಟ್ ಅನ್ನು ಆನ್‌ಲೈನ್‌ನಲ್ಲಿ ಕೂಡ ವೀಕ್ಷಿಸಬಹುದು.
ಪುರಭವನದಲ್ಲಿ ಮಂಡನೆ ಮಾಡುವುದಕ್ಕೆ ವೇದಿಕೆ ಸಿದ್ದವಾಗಿದ್ದು, ಬೆಳಗ್ಗೆ 10.30ಕ್ಕೆ ಬಿಬಿಎಂಪಿ ಆಡಳಿತಾಧಿರಿ ಹಾಗೂ ಮುಖ್ಯ ಆಯುಕ್ತರ ಸಮಕ್ಷಮದಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯಕ್ತ ಶಿವಾನಂದ ಕಲ್ಕೆರೆ ಅವರು 2024-25ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆ ಸೂಚನೆಯಡಿ ಆಯವ್ಯಯ ಸಿದ್ದಪಡಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಅನುಷ್ಠಾನ:
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಬ್ರ್ಯಾಂಡ್ ಬೆಂಗಳೂರು ಯೋಜನೆಯನ್ನು ಪರಿಚಯಿಸಿದೆ. ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಚ ಬೆಂಗಳೂರು, ಟೆಕ್ ಬೆಂಗಳೂರು, ಶೈಕ್ಷಣಿಕ ಬೆಂಗಳೂರು ಹಾಗೂ ಜಲ ಸುರಕ್ಷಾ ಬೆಂಗಳೂರು ಎಂಬ ಎಂಟು ಅಂಶಗಳನ್ನು ಒಳಗೊಂಡಿದೆ. ಈ ಅಂಶಗಳ ಕುರಿತು ಈಗಾಗಲೇ ತಜ್ಞರು, ಉದ್ಯಮಿಗಳು, ಬೆಂಗಳೂರು ನಾಗರಿಕರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಆಧಾರಿಸಿ ಕೆಲವು ಅಂಶಗಳನ್ನು ಬಿಬಿಎಂಪಿಯ ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವುದಕ್ಕೆ ನಿರ್ಧರಿಸಲಾಗಿದೆ.
ಸಂಚಾರ ದಟ್ಟಣೆ ನಿವಾರಣೆಗೆ ಒತ್ತು:
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನಗರದ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಸುರಕ್ಷಿತವಾಗಿ ನಾಗರಿಕರ ಓಡಾಟಕ್ಕೆ ಬೇಕಾದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ಅನುದಾನ ಹೊರತು ಪಡಿಸಿ ಬಿಬಿಎಂಪಿಯ ಅನುದಾನದಲ್ಲಿ ಹಲವು ರಸ್ತೆಗಳನ್ನು ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು, ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಮೊದಲಾದ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಬಾರಿಗಿಂದ ಹೆಚ್ಚಿನ ಆಯವ್ಯಯ:
2023-24ನೇ ಸಾಲಿನಲ್ಲಿ 11,158 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡು 11,157 ಕೋಟಿ ವೆಚ್ಚದ ಯೋಜನೆಗಳನ್ನು ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರ ಇನ್ನಷ್ಟು ಅನುದಾನ ನೀಡುವುದಾಗಿ ತಿಳಿಸಿ ಪಾಲಿಕೆ ಬಜೆಟ್ ಗಾತ್ರವನ್ನು 11,885 ಕೋಟಿಗೆ ಹೆಚ್ಚಿಸಿತ್ತು. ರಾಜ್ಯ ಸರ್ಕಾರ ಬಿಬಿಎಂಪಿಗೆ ನೀಡಲಾಗಿರುವ ಸುಮಾರು 4 ಸಾವಿರ ಕೋಟಿ ಮೊತ್ತದ ಯೋಜನೆಗಲು ಒಳಗೊಂಡಂತೆ ಈ ವರ್ಷ ಹೆಚ್ಚಿನ ಆದಾಯ ನಿರೀಕ್ಷಿಸಿ ಬಜೆಟ್ ಗಾತ್ರ 13 ಸಾವಿರ ಕೋಟಿ ಆಸುಪಾಸಿನಲ್ಲಿ ಮಂಡನೆಯಾಗಲಿದೆ.
ಆನ್‌ಲೈನ್‌ನಲ್ಲಿ ಬಿಬಿಎಂಪಿ ಬಜೆಟ್ ವೀಕ್ಷಿಸಿ
ಪುರಭವನದಲ್ಲಿ ಗುರುವಾರ ಮಂಡನೆ ಆಗುವ ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯವನ್ನು ಆನ್‌ಲೈನ್ ವೀಕ್ಷಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ಫೇಸ್‌ಬುಕ್, ಟ್ವೀಟ್ಟರ್ ಮತ್ತು ಯೂಟ್ಯೂಬ್
https://www.youtube.com/live/i2balgL32_Q?si=8HOaGixOeuAidH_xhttps://www.facebook.com?BBMP.Admn?mibextid=ZbWKwLhttps://www.facebook.com?BBMPCC?mibextid=ZbWKwLhttps://www.facebook.com/?mibextid=ZbWKwL












Click it and Unblock the Notifications