ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ
ಬೆಂಗಳೂರು, ಮೇ 6: ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ. ಬಿಬಿಎಂಪಿ ಪಶುಪಾಲನೆ ಜಂಟಿ ನಿರ್ದೇಶಕರು ಮಾಂಸ ನಿಷೇಧ ಬಗ್ಗೆ ಆದೇಶ ಹೊರಡಿಸಿದ್ದಾರೆ.
ನಾಳೆ ಬುದ್ಧ ಪೂರ್ಣಿಮೆ ಇರುವ ಹಿನ್ನೆಲೆ ಬೆಂಗಳೂರಿನ ಎಲ್ಲ ಭಾಗಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಮೇ 7 ರಂದು ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ಹೀಗಾಗಿ ನಾಳೆ ಒಂದು ದಿನ ಯಾವುದೇ ಮಾಂಸ ಅಂಗಡಿಗಳು ತೆರೆದಿರುವುದಿಲ್ಲ.
ಏರಿಕೆಯಾದ ಸೋಂಕಿತರ ಸಂಖ್ಯೆ: ಮುಂಬೈನಲ್ಲಿ ಮದ್ಯ ನಿಷೇಧ
ಬುದ್ಧ ಪೂರ್ಣಿಮೆ ಇರುವ ಕಾರಣ ಖಸಾಯಿಕಾನೆಗಳಲ್ಲಿ ಪ್ರಾಣಿ ವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಬುದ್ಧ ಪೂರ್ಣಿಮ ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬುದ್ಧ ಪೂರ್ಣಿಮೆ ಬರುತ್ತದೆ. ಈ ವರ್ಷ ಮೇ 7ಕ್ಕೆ ಬುದ್ಧ ಪೂರ್ಣಿಮ ಬಂದಿದೆ.
ಶುಕ್ರವಾರದಿಂದ ಎಂದಿನಂತೆ ನಗರದಲ್ಲಿ ಮಾಂಸ ಮಾರಾಟ ನಡೆಯಲಿದೆ. ಮಾಂಸ ಅಂಗಡಿಗಳಲ್ಲಿ ಕೊರೊನಾ ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.