• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಭಾನುವಾರ ಸಂಜೆ ಚಾಲನೆ

|
Google Oneindia Kannada News

ಬೆಂಗಳೂರು, ನವೆಂಬರ್ 20; ಉದ್ಯಾನ ನಗರಿ ಬೆಂಗಳೂರಿನ ಪಾರಂಪರಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಭಾನುವಾರ ಸಂಜೆ ಚಾಲನೆ ಸಿಗಲಿದೆ. ಈ ಬಾರಿ ಪರಿಷೆಯ ಜೊತೆಗೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ಸಹ ಆಯೋಜನೆ ಮಾಡಲಾಗಿದೆ.

ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಬಸನವಗುಡಿ ಕಡಲೆಕಾಯಿ ಪರಿಷೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಚಿವರು, ಸಂಸದರು, ಶಾಸಕರು ಹಾಗೂ ನೂರಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಮೈಲಾರ ಜಾತ್ರೆ ನಾಚಿಸುವ ಕಡಲೆಕಾಯಿ ಪರಿಷೆ: ಈ ಬಾರಿ ಕಡಲೆ ಕಮ್ಮಿ, ಬರೀ ಜನ..ಜನ ಮೈಲಾರ ಜಾತ್ರೆ ನಾಚಿಸುವ ಕಡಲೆಕಾಯಿ ಪರಿಷೆ: ಈ ಬಾರಿ ಕಡಲೆ ಕಮ್ಮಿ, ಬರೀ ಜನ..ಜನ

ಬೆಂಗಳೂರು ನಗರದ ದೊಡ್ಡ ಹಬ್ಬಗಳಲ್ಲಿ ಒಂದಾದ ಕಡಲೆಕಾಯಿ ಪರಿಷೆ ಮಂಗಳವಾರದ ತನಕ ನಡೆಯಲಿದೆ. ಈ ಸಂದರ್ಭದಲ್ಲಿ ದೊಡ್ಡ ಬಸವಣ್ಣನಿಗೆ ಕಡಲೆಕಾಯಿಯ ಮಹಾ ಅಭಿಷೇಕ ಸೋಮವಾರ ಬೆಳಗ್ಗೆ 6 ಗಂಟೆಗೆ ನಡೆಯಲಿದೆ.

Kadalekai Parishe 2022: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಈ ಬಾರಿ ತೆಪ್ಪೋತ್ಸವKadalekai Parishe 2022: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಈ ಬಾರಿ ತೆಪ್ಪೋತ್ಸವ

ಲಕ್ಷಾಂತರ ಜನರು ಭಾಗಿ; ಭಾನುವಾರ, ಸೋಮವಾರ ಮತ್ತು ಮಂಗಳವಾರ ನಡೆಯುವ ಬಸನವಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ. ಈಗಾಗಲೇ ನೂರಾರು ಅಂಗಡಿಗಳು ಬುಲ್ ಟೆಂಪಲ್ ರಸ್ತೆಯಲ್ಲಿ ಕಾಣಸಿಗುತ್ತಿವೆ. ಶನಿವಾರ ರಜೆ ದಿನವಾದ್ದರಿಂದ ಜನರು ಪರಿಷೆಗೆ ಆಗಮಿಸಿ ಕಡಲೆಕಾಯಿ ಸವಿದರು.

ಕಡಲೆಕಾಯಿ ಪರಿಷೆ ಅಂಗವಾಗಿ ಬ್ಯೂಗಲ್ ರಾಕ್ ಉದ್ಯಾನವನ, ನರಸಿಂಹಸ್ವಾಮಿ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಾಸ್ಟಿಕ್ ಬಳಕೆ ಮಾಡಬೇಡಿ, ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಸೋಣ ಎಂದು ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ಕರೆ ಕೊಟ್ಟಿದ್ದು, ಜನರಲ್ಲಿಯೂ ಜಾಗೃತಿ ಮೂಡಿಸುತ್ತಿವೆ.

ಬುಲ್ ಟೆಂಪಲ್ ರಸ್ತೆಯ ಒಂದು ಕಿ. ಮೀ. ವ್ಯಾಪ್ತಿಯಲ್ಲಿ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿ ಶಾಮಕ ದಳ, ಅಂಬ್ಯುಲೆನ್ಸ್ ಸಹ ನಿಯೋಜನೆ ಮಾಡಲಾಗಿದೆ.

parishe

ಕಾನೂನು ಸುವ್ಯವಸ್ಥೆ ಕಾಪಾಡಲು 600 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೋಂ ಗಾರ್ಡ್ಸ್‌, ಪೊಲೀಸರು ಧ್ವನಿ ವರ್ಧಕರ ಮೂಲಕ ಆಗಾಗ ಜನರಿಗೆ ಸೂಕ್ತ ನಿರ್ದೇಶನಗಳನ್ನು ನೀಡುತ್ತಾರೆ.

ಬುಲ್ ಟೆಂಟಲ್ ರಸ್ತೆಯಲ್ಲಿ ಜನರ ಸಂಚಾರಕ್ಕೆ ತೊಂದರೆ ಆಗದಂತೆ ಪಾದಚಾರಿ ಮಾರ್ಗದಲ್ಲಿ 2 ಸಾವಿರ ಅಂಗಡಿಗಳನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಿದೆ. ಈಗಾಗಲೇ ರಸ್ತೆಯಲ್ಲಿ ಅಂಗಡಿಗಳ ಸಾಲು ಕಾಣುತ್ತಿದೆ.

ವಾಹನಗಳ ಪಾರ್ಕಿಂಗ್; ಕಡಲೆಕಾಯಿ ಪರಿಷೆಗೆ ಆಗಮಿಸುವ ಜನರು ವಾಹನಗಳನ್ನು ನಿಲ್ಲಿಸಲು ಎಪಿಎಸ್ ಕಾಲೇಜು ಮೈದಾನ, ಕೊಹಿನೂರು ಆಟದ ಮೈದಾನ ಮತ್ತು ಆಶ್ರಮ ವೃತ್ತದಲ್ಲಿ ಜಾಗ ಕಲ್ಪಿಸಲಾಗಿದೆ. ದೇವರ ದರ್ಶನವನ್ನು ಎಲ್‌ಇಡಿ ಮೂಲಕ ಪಡೆಯಲು ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮೂರು ದಿನಗಳ ಪರಿಷೆಗೆ ಸುಮಾರು 5 ಲಕ್ಷ ಜನರು ಸೇರಬಹುದು ಎಂದು ಬಿಬಿಎಂಪಿ ಅಂದಾಜಿಸಿದೆ. ಶನಿವಾರವೇ ರಜಾ ದಿನವಾದ್ದರಿಂದ ನೂರಾರು ಜನರು ಆಗಮಿಸಿದ್ದರು. ಬುಲ್ ಟೆಂಪಲ್ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರ ಕಳೆಗಟ್ಟಿತ್ತು.

ಈ ಬಾರಿ ನಡೆಯಲಿದೆ ತೆಪ್ಪೋತ್ಸವ; ಈ ಬಾರಿಯ ಕಡಲೆಕಾಯಿ ಪರಿಷೆಯ ಪ್ರಮುಖ ಆಕರ್ಷಣೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ. ದಶಕಗಳ ಬಳಿಕ ಕಡಲೆಕಾಯಿ ಪರಿಷೆಯ ಸಮಯದಲ್ಲಿ ತೆಪ್ಪೋತ್ಸವ ನಡೆಯುತ್ತಿದೆ. 2008ರಲ್ಲಿ ಕೊನೆಯ ಬಾರಿ ತೆಪ್ಪೋತ್ಸವ ನಡೆದಿತ್ತು.

ಹಲವು ವರ್ಷಗಳ ಕಾಲ ವಿವಿಧ ಕಾರಣಗಳಿಂದ ರದ್ದಾಗಿದ್ದ ತೆಪ್ಪೋತ್ಸವ ನವೆಂಬರ್ 21ರ ಸೋಮವಾರ ಸಂಜೆ 6 ಗಂಟೆಗೆ ನಡೆಯಲಿದೆ. ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೆರೆಯ ಪಾಚಿ ತೆಗೆದು ತಾಜ್ಯವನ್ನು ವಿಲೇವಾರಿ ಮಾಡಲಾಗಿದೆ.

ಅಧಿಕೃತವಾಗಿ ಕಡಲೆಕಾಯಿ ಪರಿಷೆ ಭಾನುವಾರ ಸಂಜೆ ಆರಂಭವಾಗಲಿದೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಬೆಂಗಳೂರು ನಗರದ ಪ್ರಮುಖ ಉತ್ಸವ ಇದಾಗಿದೆ. ಆದರೆ ಶುಕ್ರವಾರ ಸಂಜೆಯೇ ಕಡಲೆಕಾಯಿ ವ್ಯಾಪಾರ ಕಳೆಗಟ್ಟಿತ್ತು. ಶನಿವಾರವೂ ನೂರಾರು ಜನರು ಪರಿಷೆಗೆ ಆಗಮಿಸಿದ್ದರು.

English summary
Bengaluru famous groundnut fair (Kadlekai Parishe) is back. Karnataka chief minister Basavaraj Bommi to inaugurate Kadlekai Parishe on November 20th evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X