ಸ್ನೇಹಿತನಿಂದಲೇ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
ಬೆಂಗಳೂರು, ನ. 23 : ಕುಮಾರಸ್ವಾಮಿ ಲೇಔಟ್ ಸಮೀಪದ ವಿಠಲನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಶನಿವಾರ ರಾತ್ರಿ ಸ್ನೇಹಿತನೇ ಹತ್ಯೆ ಮಾಡಿದ್ದಾನೆ.
ವಿಠಲನಗರದ ರಾಮಕೃಷ್ಣೇಗೌಡ(48) ಎಂಬುವರನ್ನು ಅವರ ಸ್ನೇಹಿತ ಪ್ರಸಾದ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.[ನಂದಿತಾಳದು ಆತ್ಮಹತ್ಯೆಯೋ ಮರ್ಯಾದಾ ಹತ್ಯೆಯೋ?]

ವಿಠಲನಗರ ನಿವಾಸಿ ರಾಮಕೃಷ್ಣೇಗೌಡ ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಆರೋಪಿ ಪ್ರಸಾದ್ ಸಹ ಚಿಕ್ಕ ಪುಟ್ಟ ಹಣಕಾಸು ವ್ಯವಹಾರ ಮಾಡುತ್ತಿದ್ದ. ಇಬ್ಬರೂ ವಿಠಲನಗರದಲ್ಲಿ ಪ್ರತ್ಯೇಕ ಕಚೇರಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸಾದ್ ಸಂಬಂಧಿಯೊಬ್ಬರು ರಾಮಕೃಷ್ಣೇಗೌಡ ಬಳಿ ಸಾಲ ಪಡೆದು ತೀರಿಸಿರಲಿಲ್ಲ.[ರಾಜಾಜಿನಗರದ ರಾಮಮಂದಿರ ಬಳಿ ಜೋಡಿ ಕೊಲೆ]
ಈ ಬಗ್ಗೆ ಮಾತುಕತೆ ನಡೆಸಲು ಪ್ರಸಾದ್ ರಾಮಕೃಷ್ಣೇಗೌಡರನ್ನು ತನ್ನ ಕಚೇರಿ ಬಳಿ ಕರೆಸಿಕೊಂಡಿದ್ದ. ಈ ವೇಳೆ ಇಬ್ಬರ ನಡುವೆ ಘರ್ಷಣೆ ನಡೆದಿದ್ದು, ಪ್ರಸಾದ್ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ರಾಮಕೃಷ್ಣೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications