Get Updates
Get notified of breaking news, exclusive insights, and must-see stories!

ರಂಗಶಂಕರದಲ್ಲಿ ಮತ್ತೆ ದಿ ಚೆರ್ರಿ ಆರ್ಚರ್ಡ್ ಅರಳಲಿದೆ!

ಬೆಂಗಳೂರು, ಮಾರ್ಚ್ 11: ರಂಗಕರ್ಮಿ ವೆಂಕಟೇಶ್ ಪ್ರಸಾದ್ ನೇತೃತ್ವದ ಬೆಂಗಳೂರು ಥಿಯೇಟರ್ ಕಂಪನಿ, ಆಂಟನ್ ಚೆಕಾಫ್ ನ 'ದಿ ಚೆರ್ರಿ ಆರ್ಚರ್ಡ್' ನಾಟಕದ ಕನ್ನಡಾನುವಾದ, ಚೆರ್ರಿ ತೋಟ ನಾಟಕವನ್ನು ಮತ್ತೊಮ್ಮೆ ರಂಗಶಂಕರದಲ್ಲಿ ಮೂಡಿಸುತ್ತಿದೆ. ಮಾರ್ಚ್ 16 ರಂದು 12ನೇ ಪ್ರದರ್ಶನವನ್ನು ನೀಡುತ್ತಿದೆ

ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ ದಿ ಚೆರ್ರಿ ಆರ್ಚರ್ಡ್' ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿ ತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್‍ನ ಈ ನಾಟಕ ತನ್ನ ದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ.

ಬೆಂಗಳೂರು ಥಿಯೇಟರ್ ಕಂಪನಿ: ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡು, ರಂಗಭೂಮಿಯ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ ಕೆಲವು ಗೆಳೆಯರೊಂದಿಗೆ ವೆಂಕಟೇಶ್ ಪ್ರಸಾದ್ ಅವರು ಪ್ರಾರಂಭಿಸಿದ ತಂಡವೇ ಬೆಂಗಳೂರು ಥಿಯೇಟರ್ ಕಂಪನಿ.

ಹವ್ಯಾಸಿ ರಂಗಭೂಮಿಯಲ್ಲೂ ವೃತ್ತಿಪರತೆ, ಕನ್ನಡ ರಂಗಭೂಮಿಯಲ್ಲಿ ವೃತ್ತಿಪರತೆಯಿಂದ ಕೂಡಿದ ಹೊಸ ಪ್ರಯೋಗಗಳ ಮೂಲಕ ರಂಗಭೂಮಿಯನ್ನು ಅಭ್ಯಸಿಸುವುದು, ರಂಗಭೂಮಿಯ ಎಲ್ಲ ಪ್ರಕಾರಗಳಲ್ಲಿ ನೈಪುಣ್ಯ ಹೊಂದಿರುವ, ಸಂಪೂರ್ಣ ಬದ್ಧತೆಯಿರುವ ತಂಡವೊಂದನ್ನು ತಯಾರು ಮಾಡುವುದು, ಸಾಮಾಜಿಕ ಬದ್ಧತೆಯನ್ನು ರಂಗಕ್ರಿಯೆಯ ಮೂಲಕ ಅಭಿವ್ಯಕ್ತಿ ಪಡಿಸುವುದು ಇವೇ ನಮ್ಮ ತಂಡದ ಕೆಲವು ಧ್ಯೇಯಗಳು.

ಹಲವು ಪ್ರತಿಮೆಗಳ ಸಂಕೇತ-ಚೆರ್ರಿ ತೋಟ

ಹಲವು ಪ್ರತಿಮೆಗಳ ಸಂಕೇತ-ಚೆರ್ರಿ ತೋಟ

ನಾಟಕದ ಕೇಂದ್ರವಾದ ಚೆರ್ರಿ ತೋಟ, ಹಲವು ಪ್ರತಿಮೆಗಳ ಸಂಕೇತವಾಗಿ ಕಾಣುತ್ತದೆ. ಬಾಲ್ಯದ ಸುಂದರ ನೆನಪುಗಳ ಪ್ರತೀಕವಾಗಿ ಒಮ್ಮೆ ಚೆರ್ರಿ ತೋಟ ಕಂಡರೆ, ಪರಿಸರ-ಪೃಕೃತಿಯ ಸುಂದರ ದೃಶ್ಯವಾಗಿ ಕೂಡ ಕಾಣುತ್ತದೆ. ಅಷ್ಟೇ ಅಲ್ಲದೆ, ಶತಮಾನಗಳ ಕಾಲ ಜನಸಮುದಾಯದಲ್ಲಿ ಬೇರು ಬಿಟ್ಟಿರುವ ನಂಬಿಕೆಯಾಗಿ ಕೂಡ ಚೆರ್ರಿ ತೋಟ ಗೋಚರಿಸುತ್ತದೆ.

ಪಾಳೇಗಾರೀ ಮೌಲ್ಯ, ಮತ್ತೊಂದು ಕಡೆ ಉದಾರೀಕರಣ

ಪಾಳೇಗಾರೀ ಮೌಲ್ಯ, ಮತ್ತೊಂದು ಕಡೆ ಉದಾರೀಕರಣ

ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ.

ಒಂದು ಕಡೆ ಜಮೀನ್ದಾರಿ ಪದ್ದತಿಯ ಪಾಳೇಗಾರೀ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ, ಪೋಷಿಸುತ್ತಾ, ಮತ್ತೊಂದು ಕಡೆ ಉದಾರೀಕರಣ, ಮುಕ್ತ ಮಾರುಕಟ್ಟೆಯ ಬಂಡವಾಳಶಾಹಿ ವ್ಯವಸ್ಥೆಗೆ ತನ್ನನ್ನು ತೆರೆದುಕೊಳ್ಳುತ್ತ, ಸಮಾಜವಾದದ ಕನಸನ್ನೂ ಕಾಣುತ್ತ ಸಾಗುತ್ತಿರುವ ಭಾರತದ ಪರಿಸ್ಥಿತಿಯಲ್ಲಿ, ಚೆರ್ರಿ ತೋಟವನ್ನು ಗಟ್ಟಿ ಬೇರು ಬಿಟ್ಟ ಸಾಮಾಜಿಕ ವ್ಯವಸ್ಥೆಯೊಂದರ ಪ್ರತೀಕವಾಗಿ ನೋಡಲು ನಾವು ಪ್ರಯತ್ನಿಸಿದ್ದೇವೆ.

ನಮ್ಮ ತಂಡದ ಬೆನ್ನೆಲುಬು, ಮಾರ್ಗದರ್ಶಕರು

ನಮ್ಮ ತಂಡದ ಬೆನ್ನೆಲುಬು, ಮಾರ್ಗದರ್ಶಕರು

ನಮ್ಮ ತಂಡದ ಬೆನ್ನೆಲುಬಾಗಿ, ಮಾರ್ಗದರ್ಶಕರಾಗಿ ನಿಂತಿರುವವರು ಪ್ರಕಾಶ್ ಬೆಳವಾಡಿ, ಶ್ರೀಪಾದ್ ಭಟ್ ಹಾಗೂ ಸಮುದಾಯ ಕರ್ನಾಟಕ ಸಂಘಟನೆ. ಬೆಂಗಳೂರು ಥಿಯೇಟರ್ ಕಂಪನಿಯ ನಾಲ್ಕು ಸ್ಥಾಪಕ ಸದಸ್ಯರು ವೆಂಕಟೇಶ್ ಪ್ರಸಾದ್, ವಿನಯ್ ಚಂದ್ರ, ಸುಷ್ಮಾ ರಾವ್ ಮತ್ತು ಅರುಣ್ ಡಿ.ಟಿ.

ಚೆರಿ ನಾಟಕದ ಪ್ರದರ್ಶನ ವಿವರ

ಚೆರಿ ನಾಟಕದ ಪ್ರದರ್ಶನ ವಿವರ

ಮೂಲ : ಆಂಟನ್ ಚೆಕಾಫ್
ಕನ್ನಡಕ್ಕೆ,ನಿರ್ದೇಶನ : ವೆಂಕಟೇಶ್ ಪ್ರಸಾದ್
ಪ್ರಸ್ತುತಿ : ಬೆಂಗಳೂರು ಥಿಯೇಟರ್ ಕಂಪನಿ
ವಿನ್ಯಾಸ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್
ಸ್ಥಳ: ರಂಗಶಂಕರ
ದಿನಾಂಕ ಮತ್ತು ಸಮಯ : 16/03/2016, ಸಂಜೆ 7:30
ಟಿಕೆಟ್‌ದರ : ರೂ. 100/-
ದೂರವಾಣಿ ಸಂಖ್ಯೆ : 9900182400, 9483709735
ವೆಬ್ ಸೈಟ್ : www.bookmyshow.com ; www.filmysphere.com

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+