ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯೆ ಪತ್ತೆ, ಗಂಡ ನಾಪತ್ತೆ

ಬೆಂಗಳೂರು, ಅ. 10 : ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತ ವೈದ್ಯೆ ಕುಮುದಾ(32) ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೈದ್ಯೆಯ ಪಾಲಕರು ಕುಮುದಾ ಗಂಡ ಡಾ.ನಂದೀಶ್‌ ಅವರೇ ಸಾವಿಗೆ ಕಾರಣ. ನಂದೀಶ್‌ ಮತ್ತು ಆತನ ಕುಟುಂಬದವರು ಸೇರಿ ಕುಮುದಾ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇತ್ತ ಡಾ. ನಂದೀಶ್‌ ತಲೆಮರೆಸಿಕೊಂಡಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.[ಮಕ್ಕಳ ಪ್ರೇಮ ವಿವಾಹ, ಮನನೊಂದ ತಾಯಿ ಆತ್ಮಹತ್ಯೆ]

sucide

ಸಾವಿಗೆ ಕಾರಣವಾಯಿತೆ ಅಕ್ರಮ ಸಂಬಂಧ?
ನಂದೀಶ್ ಮತ್ತು ಕುಮುದಾ ದಂಪತಿಗೆ ಎರಡು ವರ್ಷದ ಇಂಪನಾ ಎಂಬ ಮಗುವಿದೆ. ಡಾ. ನಂದೀಶ್‌ ತಮ್ಮ ಸಹೋದ್ಯೋಗಿಯೊಬ್ಬಳ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗಿದೆ. ಇತ್ತೀಚೆಗೆ ಗಂಡ-ಹೆಂಡತಿ ನಡುವಿನ ಸಂಬಂಧ ಹಳಸಿತ್ತು. ಈ ಬಗ್ಗೆ ಕಳೆದ 15 ದಿನಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು. ಮನೆಯವರ ಮಧ್ಯಸ್ಥಿಕೆ ನಂತರ ಪ್ರಕರಣ ರಾಜಿಯಾಗಿತ್ತು. [16ನೇ ಮಹಡಿಯಿಂದ ಜಿಗಿದು ಮಾಡೆಲ್ ಆತ್ಮಹತ್ಯೆ]

ಆದರೆ ನಂದೀಶ್‌ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದ್ದು ಕುಮಾದಾಗೆ ಗೊತ್ತಾಗಿದೆ. ಇದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಆದರೆ ಕುಮುದಾ ಪಾಲಕರು ಆಕೆಯನ್ನು ಕೊಲೆ ಮಾಡಿ ಕೋಣೆಯಲ್ಲಿ ನೇತುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಂದೀಶ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+