ಬಕ್ರೀದ್ ಹಬ್ಬಕ್ಕೆ ರೋಡಿಗಿಳಿಯೋ ಮುನ್ನ ಇದನ್ನು ಓದಿ.... ಕೆಲವೆಡೆ ವಾಹನ ಸಂಚಾರ ನಿರ್ಬಂಧ
ಸೋಮವಾರ (ಜೂನ್ 17) ಬಕ್ರೀದ್ ಹಬ್ಬವಿದೆ. ಈ ವೇಳೆ ಸಾರ್ವಜನಿಕ ಪ್ರಾರ್ಥನೆ ನಡೆಯುವುದರಿಂದಾಗಿ ಹಲವೆಡೆ ವಾಹನ ಸಂಚಾರ ರದ್ದುಗೊಳಿಸಲಾಗಿದೆ. ಜೊತೆಗೆ ಪಾರ್ಯಾಯ ಮಾರ್ಗವನ್ನು ಅನುಸರಿಸುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಹಲವಾರು ಕಂಪನಿ ಕಚೇರಿಗಳಿಗೆ ರಜೆ ನೀಡಲಾಗಿದೆ. ಹೀಗಾಗಿ ಈ ದಿನ ವಾಹನ ಸಂಚಾರ ಎಂದಿಗಿಂತ ಕಡಿಮೆ ಇರುತ್ತದೆ. ಅದಾಗ್ಯೂ ಸಾಮೂಹಿಕ ಪ್ರಾರ್ಥನೆ ನಡೆಯುವ ಸ್ಥಳಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಪ್ರಾರ್ಥನಾ ಸ್ಥಳಗಳಲ್ಲಿ ನಿರ್ಬಂಧಿಸಲಾಗಿದೆ.

ಬನ್ನೇರುಘಟ್ಟ ಮುಖ್ಯ ರಸ್ತೆ ಮತ್ತು ನಗರದ ಮೈಸೂರು ರಸ್ತೆಯಲ್ಲಿ ಸಾರ್ವಜನಿಕರ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೀಗೆ ನಗರದ ಯಾವ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಹಾಗೂ ಪರ್ಯಾಯ ಮಾರ್ಗಗಳು ಯಾವವು ಎಂದು ತಿಳಿಯೋಣ.
ಬೆಳಿಗ್ಗೆ ಆರರಿಂದ ಪ್ರಾರ್ಥನೆ ಮುಕ್ತಾಯವಾಗುವವರೆಗೆ ಬಿಜಿಎಸ್ ಮೇಲ್ಸೇತುವೆಯಿಂದ ಪುರಭವನದವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಪುರಭವನ ಕಡೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳು ಬಿಜಿಎಸ್ ಮೇಲ್ಸೇತುವೆಯ ಕೆಳಗಿನ ರಸ್ತೆಯನ್ನು ಬಳಸಿಕೊಂಡು ವೆಟರ್ನರಿ ಜಂಕ್ಷನ್‌ನಲ್ಲಿ ತಿರುವು ಪಡೆದು ಗೂಡ್ಸ್ ಶೆಡ್ ರಸ್ತೆಯ ಮೂಲಕ ಅಥವಾ ಸಿರ್ಸಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಜೆಜೆ ನಗರ-ಟ್ಯಾಂಕ್‌ಬಂಡ್ ರಸ್ತೆ-ಬಿನ್ನಿಮಿಲ್ ಜಂಕ್ಷನ್-ಹುಣಸೇಮರದ ಮೂಲಕ ಸಾಗಬಹುದು.

ಬಸವನಗುಡಿ ಹಾಗೂ ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು, ಚಾಮರಾಜಪೇಟೆ 1ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆಯ ಸಿರ್ಸಿ ವೃತ್ತ, ಬಿನ್ನಿಮಿಲ್ ರಸ್ತೆ ಅಥವಾ ಗೂರ್ಡ್ ಶೆಡ್ ರಸ್ತೆಯ ಮೂಲಕ ಸಾಗಬಹುದು.
ಮೈಸೂರು ರಸ್ತೆಯ ಕಡೆಯಿಂದ ಪುರಭವನ ಕಡೆಗೆ ತೆರಳುವ ವಾಹನಗಳು ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ಕಿಮ್ಕೊ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ವಿಜಯನಗರದ ಮೂಲಕ ಸಾಗಬಹುದು.
ಬಕ್ರೀದ್ ಹಾಗೂ ರಂಜಾನ್ ಸಮಯದಲ್ಲಿ ನಗರದ ಚಾಮರಾಜಪೇಟೆಯಲ್ಲಿ ಸಾಮೂಹಿಕ ಪಾರ್ಥನೆಯನ್ನು ಮುಸ್ಲಿಂ ಬಾಂಧವರು ನಡೆಸುತ್ತಾರೆ. ಹೀಗಾಗಿ ಇಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಹತ್ತಿರದ ಮಸೀದಿ ಹಾಗೂ ಚಾಮರಾಜಪೇಟೆ 1ನೇ ಮುಖ್ಯರಸ್ತೆಯ 7ನೇ ಅಡ್ಡರಸ್ತೆ ಬಳಿಯ ಬಿಬಿಎಂಪಿ ಆಟದ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಆದರಿಂದ ಮೈಸೂರು ರಸ್ತೆ ಟೋಲ್‌ಗೇಟ್ ಜಂಕ್ಷನ್ ಮೂಲಕ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಟೌನ್‌ಹಾಲ್‌ವರೆಗೆ ಎಲ್ಲಾ ಮಾದರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ಫ್ಲೈಓವರ್ ಮೇಲ್ಭಾಗದಿಂದ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್‌ಗೇಟ್ ಜಂಕ್ಷನ್‌ವರೆಗೆ ಎಲ್ಲಾಮಾದರಿ ವಾಹನ ಸಂಚಾರ ನಿಷೇಧಿಸಿ ಸಂಚಾರ ಪೊಲೀಸರು ಆದೇಶಿಸಿದ್ದಾರೆ.












Click it and Unblock the Notifications