B Khata: ಬಿ ಖಾತಾ ಎಂದರೆ ಬೋಗಸ್ ಆಸ್ತಿಯೇ: ಯಾಕೆ ಈ ಪ್ರಾಪರ್ಟಿ ಡೇಂಜರ್ ?

B Khata: ಕರ್ನಾಟಕದಲ್ಲಿ ಬಿ - ಖಾತಾ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಅಲ್ಲದೇ ಬಿ ಖಾತಾ ಆಸ್ತಿ ಎಂದರೆನೇ ಬೋಗಸ್ (ನಕಲಿ) ಎಂದು ಕೆಲವು ರಿಯಲ್ ಎಸ್ಟೇಟ್ ತಜ್ಞರು ಹೇಳುತ್ತಿದ್ದು ಇದು ಬಿ ಖಾತಾ ಆಸ್ತಿ ಹೊಂದಿರುವವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಬಿ ಖಾತಾ ಆಸ್ತಿಯನ್ನು ಎ - ಖಾತಾಗೆ ಹಾಗೂ ಸರ್ಕಾರದ ನಿರ್ದಿಷ್ಟ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದೆಯಾದರೂ ಸಮಸ್ಯೆ ಪರಿಹಾರವಾಗಿಲ್ಲ. ಇದೀಗ ಬಿ ಖಾತಾದಿಂದ ಏನೆಲ್ಲಾ ನಷ್ಟವಾಗುತ್ತೆ ಹಾಗೂ ಬಿ ಖಾತಾದಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತಿವೆ ಎನ್ನುವ ಪ್ರಮುಖ ವಿಷಯಗಳು ಇಲ್ಲಿವೆ.

ಬಿ - ಖಾತಾ ಆಸ್ತಿದಾರರ ಗೊಂದಲಗಳು ಇನ್ನೂ ಮುಕ್ತಾಯವಾಗುತ್ತಿಲ್ಲ. ಸರ್ಕಾರ ಬಿ - ಖಾತಾ ಆಸ್ತಿದಾರರಿಗೆ ಎ ಖಾತಾ ನೀಡುವುದಕ್ಕೆ ಮುಂದೆ ಬಂದರೂ, ಕಾನೂನಿನ ತೊಡಕುಗಳ ಕಾರಣಕ್ಕೆ ಬಿ ಖಾತಾ ಆಸ್ತಿದಾರರು ಇನ್ನೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಎಂದಿಗೂ ಬಿ ಖಾತಾ ಆಸ್ತಿಯನ್ನು ಖರೀದಿಸಬೇಡಿ. ಬಿ ಎಂದರೆ ಬೋಗಸ್ ಎಂದರ್ಥ ಎಂದು ಭಾವಿಸಿ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ವಹಿಸಲ್ಪಟ್ಟ ಕೃಷಿ ಭೂಮಿಯನ್ನು ಖರೀದಿಸಲು ಪ್ರಯತ್ನಿಸಬೇಡಿ, ಅದನ್ನು ಕೆಐಎಡಿಬಿ ಅಧಿಸೂಚನೆ ಹೊರಡಿಸುತ್ತದೆ ಎಂದು ರಿಯಲ್ ಎಸ್ಟೇಟ್ ತಜ್ಞರೊಬ್ಬರು ಎಚ್ಚರಿಸಿದ್ದಾರೆ.

B Khata Updates B Khata means bogus property Why is this property dangerous

ಈ ಮಾತುಗಳು ಬಿ ಖಾತಾ ಆಸ್ತಿಯನ್ನು ಹೊಂದಿರುವವರಲ್ಲಿ ಆತಂಕವನ್ನುಂಟು ಮಾಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅಂದಾಜು 30 ರಿಂದ 40 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿಗಳಿವೆ. ಈ ರೀತಿಯ ಬಿ ಖಾತಾ ಇರುವ ಆಸ್ತಿದಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಬಿ ಖಾತಾ ಬದಲಿಗೆ ಯಾವಾಗಲೂ ಬಿಡಿಎ, ಕೆಎಚ್‌ಬಿ ಅಥವಾ ಬಿಎಂಆರ್‌ಡಿಎ ಅನುಮೋದನೆ ಹೊಂದಿರುವ ಫ್ಲಾಟ್‌ಗಳನ್ನು ಖರೀದಿ ಮಾಡುವುದು ಉತ್ತಮ ಎನ್ನಲಾಗಿದೆ.

ಬಿ ಖಾತಾ ಒಳ್ಳೆಯದಲ್ಲ ಏಕೆಂದರೆ ಅದು ಅನಧಿಕೃತ ನಿರ್ಮಾಣ ಅಥವಾ ಪುರಸಭೆಯ ನಿಯಮಗಳ ಉಲ್ಲಂಘನೆಯಂತಹ ಕಾನೂನು ತೊಡಕುಗಳನ್ನು ಹೊಂದಿರುತ್ತದೆ. ಇದರಿಂದ ಸಾಲಗಳನ್ನು ತೆಗೆದುಕೊಳ್ಳುವುದು, ಆಸ್ತಿ ಮಾರಾಟ ಅಥವಾ ಮರುಮಾರಾಟ, ಕಟ್ಟಡಗಳ ನಿರ್ಮಾಣ, ಕಟ್ಟಡ ನಕ್ಷೆ ಮಂಜೂರಾತಿ ಸಮಸ್ಯೆ ಆಗುತ್ತದೆ. ಬಿ ಖಾತಾ ಹೊಂದಿರುವ ಆಸ್ತಿಗಳು ಸಂಪೂರ್ಣ ಕಾನೂನು ಮಾನ್ಯತೆಯನ್ನು ಹೊಂದಿರುವುದಿಲ್ಲ. ಅಲ್ಲದೇ ಬಿ ಖಾತಾಗೆ ಇರುವ ಮತ್ತೊಂದು ಮೈನಸ್ ಪಾಯಿಂಟ್ಸ್‌ ಎಂದರೆ ಬಿ ಖಾತಾ ಆಸ್ತಿಗಳು ಕಡಿಮೆ ಮಾರುಕಟ್ಟೆ ಮೌಲ್ಯ ಮತ್ತು ಮರುಮಾರಾಟದಲ್ಲಿ ಹೆಚ್ಚಿನ ತೊಂದರೆಗಳನ್ನು ಒಳಗೊಂಡಿವೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಬಿ ಖಾತಾ ಆಸ್ತಿಗಳು ಪುರಸಭೆಯ ನಿಯಮಗಳು ಮತ್ತು ಕಟ್ಟಡ ಮಾನದಂಡಗಳನ್ನು ಒಳಗೊಂಡಿರುವುದಿಲ್ಲ. ಆಗಾಗ್ಗೆ ಅನಧಿಕೃತ ನಿರ್ಮಾಣ ಅಥವಾ ಭೂ ಬಳಕೆಯಂತಹ ಸಮಸ್ಯೆಗಳಿಂದ ಉಂಟಾಗುವ ಸಾಧ್ಯತೆಯೂ ಇದೆ. ಇನ್ನು ನೀವು ಬಿ ಖಾತಾ ಆಸ್ತಿ ಹೊಂದಿದ್ದರೆ, ಆಸ್ತಿ ತೆರಿಗೆಗಳನ್ನು ಪಾವತಿ ಮಾಡುವುದಕ್ಕೆ ಅವಕಾಶ ಇದೆ. ಬಿ ಖಾತಾ ಎ ಖಾತಾದಂತೆಯೇ ಸಂಪೂರ್ಣ ಕಾನೂನು ಮನ್ನಣೆಯನ್ನು ಹೊಂದಿರುವುದಿಲ್ಲ.

ಬಿ ಖಾತಾ ಆಸ್ತಿಯ ಮಾಲೀಕತ್ವವನ್ನು ಮಾರಾಟ ಮಾಡುವುದು ಅಥವಾ ವರ್ಗಾಯಿಸುವುದು ಸಂಪೂರ್ಣವಾಗಿ ಮಾನ್ಯತೆ ಹೊಂದಿರುವ ಎ ಖಾತಾ ಆಸ್ತಿಗೆ ಹೋಲಿಸಿದರೆ ಹೆಚ್ಚು ಗೊಂದಲಗಳಿಂದ ಕೂಡಿದೆ. ಬಿ ಖಾತಾಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳು ಆಸ್ತಿಯ ಮಾರುಕಟ್ಟೆ ಮೌಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಗೆ ಸಾಧ್ಯವಾದಷ್ಟು ಆಸ್ತಿ ಖರೀದಿ ಮಾಡಬೇಕು ಎಂದು ಕೊಂಡಿರುವವರು ಬಿ ಖಾತಾ ಆಸ್ತಿಯನ್ನು ಖರೀದಿ ಮಾಡದೆ ಇರುವುದೇ ಉತ್ತಮ ಎನ್ನುವುದು ರಿಯಲ್ ಎಸ್ಟೇಟ್ ತಜ್ಞರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+