B to A Khata: ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳಲು ಈ ದಾಖಲೆಗಳಿದ್ದರೆ ಸಾಕು!

B Khata to A Khata conversion: ಸಣ್ಣದೊಂದು ಆಸ್ತಿ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಮಧ್ಯಮ ವರ್ಗದವರ ಕನಸು. ಆದರೆ ಇತ್ತೀಚಿನ ದಿನಗಳಲ್ಲಿ ಬಿ ಖಾತಾ ಆಸ್ತಿ ಮಾಡಿಕೊಂಡಿರುವವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ ಬಿ ಖಾತಾಗೆ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಕರ್ನಾಟಕ ಸರ್ಕಾರ ಹೇಳಿದೆಯಾದರೂ ಇನ್ನೂ ಗೊಂದಲಗಳು ಮುಗಿದಿಲ್ಲ. ಹೀಗಾಗಿ, ಬಿ ಖಾತಾ ಇರುವ ಆಸ್ತಿದಾರರು ಇದರ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿ ಬಿ ಖಾತಾದ ಆಸ್ತಿಯನ್ನು ಎ ಖಾತಾ ಮಾಡಿಸಿಕೊಳ್ಳುವುದು ಹೇಗೆ, ಬಿ ಖಾತಾ ಮಾಡಿಸಿಕೊಳ್ಳಲು ಬೇಕಾಗುವ ನಿಖರ ದಾಖಲೆಗಳು ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬಿ ಖಾತಾದ ಕಗ್ಗಂಟು ಮುಗಿಯುವ ರೀತಿ ಕಾಣಿಸುತ್ತಿಲ್ಲ. ಹೀಗಾಗಿ ಬಿ ಖಾತಾ ಬದಲಿಗೆ ಎ ಖಾತಾ ವರ್ಗಾವಣೆ ಮಾಡಿಸಿಕೊಳ್ಳುವುದು ಎಲ್ಲಾ ಕಾಲಕ್ಕೂ ಸೂಕ್ತ ಎಂದೇ ಹೇಳಬಹುದು. ಹಾಗಾದರೆ ಬಿ ಖಾತಾ ಆಸ್ತಿಯನ್ನು ಎ ಖಾತಾ ಮಾಡಿಸಿಕೊಳ್ಳಬೇಕಾದಾಗ ಅನುಸರಿಸಬೇಕಾದ ವಿಧಾನಗಳು ಹಾಗೂ ಎ ಖಾತಾ ಮಾಡಿಸಿಕೊಳ್ಳುವುದಕ್ಕೆ ಯಾವೆಲ್ಲಾ ದಾಖಲೆಗಳ ಅವಶ್ಯಕತೆ ಇದೆ ಎನ್ನುವ ವಿವರವನ್ನು ಈ ಲೇಖನದಲ್ಲಿ ನೋಡೋಣ.

B Khata to A Khata Conversion Essential Documents You Need

ಸಾಮಾನ್ಯವಾಗಿ ಕರ್ನಾಟಕದಲ್ಲಿ ಆಸ್ತಿಗಳಿಗೆ ಎ ಖಾತಾ, ಬಿ ಖಾತಾ, ಇ ಖಾತಾ ಮತ್ತು ಡಿ ಮತ್ತು ಸಿ ಖಾತಾಗಳು ಸಹ ಇವೆ. ಎ ಖಾತಾ ಅತ್ಯಂತ ಸುರಕ್ಷಿತ ಖಾತಾ ಎಂದು ಪರಿಗಣಿಸಲಾಗುತ್ತದೆ. ಆದರೆ ಬಿ ಖಾತಾ ಸದಾ ಸಮಸ್ಯೆಯನ್ನು ಒಳಗೊಂಡಿರುತ್ತದೆ. ಇನ್ನು ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಬದಲಾಯಿಸುವ ಸರಳ ಮಾರ್ಗವನ್ನು ಪರಿಚಯಿಸಲಾಗಿದೆ.

ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳಲು ಬೇಕಾಗುವ ದಾಖಲೆಗಳು ?

ಬಾಕಿ ಆಸ್ತಿ ತೆರಿಗೆ ಪಾವತಿ ಮಾಡಿ: ಇನ್ನು ಬಿ ಖಾತಾದ ಆಸ್ತಿಯನ್ನು ಎ ಖಾತಾಗೆ ವರ್ಗಾಯಿಸಿಕೊಳ್ಳುವ ಮುಂಚೆ ನಿಮ್ಮ ಬಿ ಖಾತಾದ ಎಲ್ಲಾ ಆಸ್ತಿ ತೆರಿಗೆಯನ್ನು ಪಾವತಿ ಮಾಡಬೇಕು. ಈ ಸಂದರ್ಭದಲ್ಲಿ ಕೆಲವೊಂದು ನಿರ್ದಿಷ್ಟ ಶುಲ್ಕಗಳನ್ನೂ ನೀವು ಪಾವತಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಬಿ ಖಾತಾ ಆಸ್ತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಅಥವಾ ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

ಉದಾ: ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಕರ್ನಾಟಕದ ಇನ್ನುಳಿದ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆಗಳಲ್ಲಿ ಬಿ ಖಾತಾದಲ್ಲಿರುವ ಆಸ್ತಿಯನ್ನು ಎ ಖಾತಾಗೆ ಬದಲಾಯಿಸುವ ಅರ್ಜಿ ಸಲ್ಲಿಕೆ ಮಾಡಬೇಕು.

ಆಸ್ತಿ ಪತ್ರದ ದಾಖಲೆ, ಆಸ್ತಿ ತೆರಿಗೆ ಪತ್ರ ಮತ್ತು ಕಟ್ಟಡ ನಿರ್ಮಾಣ ಯೋಜನೆ ನಕ್ಷೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಈ ಸಂದರ್ಭದಲ್ಲಿ ಸಲ್ಲಿಕೆ ಮಾಡಬೇಕು. ಆಯಾ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ನಿಮ್ಮ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಖಾತಾ ಬದಲಾವಣೆಯ ಅರ್ಜಿಯನ್ನು ಪರಿಶೀಲನೆ ಮಾಡಲಿದ್ದಾರೆ.

ಕಾನೂನಿ ಅನ್ವಯ ನಿರ್ದಿಷ್ಟ ಶುಲ್ಕವನ್ನು ಪಾವತಿಸಿಕೊಂಡು ನಿಮಗೆ ಬಿ ಖಾತಾದಿಂದ ಎ ಖಾತಾ ನೀಡಲಿದ್ದಾರೆ. ಇನ್ನು ಬಿ ಖಾತಾದಿಂದ ಎ ಖಾತಾ ವರ್ಗಾವಣೆ ವಿಧಾನ ಹಾಗೂ ಎಷ್ಟು ಶುಲ್ಕ ಆಗಲಿದೆ ಎನ್ನುವ ಮಾಹಿತಿಯನ್ನು ಶೀಘ್ರ ಹಂಚಿಕೊಳ್ಳುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+