B Khata: ಎ-ಖಾತಾಗೆ ಬದಲಾಗಲು ಬೆಂಗಳೂರಿಗರ ನಿರಾಸಕ್ತಿ! 60% ರಿಯಾಯಿತಿ ಇದ್ದರೂ 12ರಷ್ಟು ಅರ್ಜಿ ಸಲ್ಲಿಕೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ( ಜಿಬಿಎ) ಮಹತ್ವಾಕಾಂಕ್ಷೆಯ ಆಸ್ತಿಗಳ ಡಿಜಿಟಲ್ ಖಾತಾ ವಿತರಣೆ ಅದರಲ್ಲೂ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಯಲ್ಲಿ ನಿರೀಕ್ಷಿತ ಹಂತ ತಲುಪಿಲ್ಲ. ಆಸ್ತಿ ಖಾತಾ ಪರಿವರ್ತನೆಯ ಶುಲ್ಕದಲ್ಲಿ ಶೇ. 60 ರಷ್ಟು ರಿಯಾಯಿತಿ ನೀಡಿದರೂ ಸಹಿತ ಅತೀ ಕಡಿಮೆ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪೈಕಿ ಹೆಚ್ಚಾದ ಆದಾಯ ಎಷ್ಟು? ಒಟ್ಟು ಆಸ್ತಿಗಳು, ಐದು ಪಾಲಿಕೆಗಳ ಪೈಕಿ ಯಾವ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಅರ್ಜಿ ಸಲ್ಲಿಕೆ ಆಗಿವೆ ಎಂಬ ಮಾಹಿತಿ ಇಲ್ಲಿದೆ.

ಆಗಸ್ಟ್ 23ರವರೆಗೆ ಬಿ ಖಾತಾ ದಿಂದ ಎ-ಖಾತಾ ಪರಿವರ್ತನೆಗೆ ಸೂಚಿಸಿದ್ದ ಶುಲ್ಕದಲ್ಲಿ ಶೇ. 60 ರಷ್ಟು ರಿಯಾಯಿತಿ ಸೌಲಭ್ಯ ಪಡೆಯಬಹುದು ಎಂದು ಜಿಬಿಎ ತಿಳಿಸಿತ್ತು. ಇದರ ಹೊರತಾಗಿಯೂ ಕೇವಲ ಶೇ.12 ರಷ್ಟು ಬಿ-ಖಾತಾ ಆಸ್ತಿ ಮಾಲೀಕರಷ್ಟೇ ಎ-ಖಾತಾ ಪರಿವರ್ತನೆಗೆ ಅರ್ಜಿ ಹಾಕಿದ್ದಾರೆ. ಕೊನೆ ದಿನಾಂಕ ಆಗಸ್ಟ್ 23ರ ಹೊತ್ತಿಗೆ ಒಟ್ಟು ಬಿ-ಖಾತಾ ಆಸ್ತಿಗಳ ಪೈಕಿ 80,412 ಅರ್ಜಿಗಳಷ್ಟೇ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಸಲ್ಲಿಕೆ ಆಗಿವೆ ಎಂದು ದಿ ಹಿಂದೂ ವರದಿ ಮಾಡಿದೆ.

B-Khata to A-Khata Conversion Bengaluru Only 12pc Apply Despite 60pc Fee Discount Scheme face Setback

ಪಾಲಿಕೆಗಳಿಗೆ ಕೋಟಿ ಕೋಟಿ ಆದಾಯ

ಜಿಬಿಎ ಪ್ರಕಾರ ಬೆಂಗಳೂರಿನಲ್ಲಿ ಒಟ್ಟು ಆಸ್ತಿಗಳ ಪೈಕಿ 7 ಲಕ್ಷಕ್ಕೂ ಹೆಚ್ಚು ಬಿ-ಖಾತಾದಾರರು ಎ-ಖಾತಾಗಳಿಗೆ ಪರಿವರ್ತನೆ ಮಾಡಿಕೊಳ್ಳಬೇಕಿದೆ. ಸದ್ಯ ಸಲ್ಲಿಕೆಯಾದ ಅಲ್ಪ ಪ್ರಮಾಣದ ಅರ್ಜಿಗಳಿಂದ ಐದು ನಗರ ಪಾಲಿಕೆಗಳಲ್ಲಿ ಒಟ್ಟು 525.7 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಕೆಲವು ಅರ್ಜಿಗಳಲ್ಲಿ ಪರಿಶೀಲನೆಯಲ್ಲಿದ್ದು, ಅವುಗಳಿಂದಲೂ ಆದಾಯ ಏರಿಕೆ ಆಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪಾಲಿಕೆಗೆ ಹೆಚ್ಚು ಅರ್ಜಿಗಳು ಸಲ್ಲಿಕೆ

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆಗೆ ಅತ್ಯಧಿಕ ಅಂದರೆ 22,479 ಅರ್ಜಿಗಳಲ್ಲಿ ಸಲ್ಲಿಕೆಯಗಿವೆ. ಇದರಿಂದ ಪಾಲಿಕೆಗೆ 144.9 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ನಗರ ಪಾಲಿಕೆಯು 22,479 ಅರ್ಜಿಗಳ ಸ್ವೀಕರಿಸುವ ಮೂಲಕ 131.1 ಕೋಟಿ ರೂ. ಆದಾಯ ಗಳಿಸಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ನಗರ ಪಾಲಿಕೆಯು 17,262 ಅರ್ಜಿಗಳ ಮೂಲಕ 124.3 ಕೋಟಿ ಆದಾಯ ಪಡೆದಿದೆ. ಉತ್ತರ ಮತ್ತು ಪಶ್ಚಿಮ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಬಿ -ಖಾತಾ ಆಸ್ತಿಗಳಿವೆ. ಅಲ್ಲಿಂದ ಅರ್ಜಿ ಸಲ್ಲಿಕೆ ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ಶುಲ್ಕ ಹೊರೆ, ಯೋಜನೆಗೆ ಹಿನ್ನಡೆ

ಆರಂಭದಲ್ಲಿ ಜಿಬಿಎ ಖಾತಾ ಪರಿವರ್ತನೆಗೆ ಆಸ್ತಿಯ ಮೌಲ್ಯದ ಶೇ.5ರಷ್ಟು ಹಣವನ್ನು ಪರಿವರ್ತನೆ ಶುಲ್ಕವಾಗಿ ಕಟ್ಟಬೇಕು ಎಂದು ತಿಳಿಸಿತ್ತು. ಈ ನಿಯಮ ಪಾಲಿಸಲು ಮುಂದಾದರೆ ಲಕ್ಷಾಂತರ ರೂಪಾಯಿ ಹಣ ಪಾವತಿಸಬೇಕಾಗುತ್ತದೆ ಎಂದು ಆಸ್ತಿ ಮಾಲೀಕರು ಮುಂದೆ ಬರಲಿಲ್ಲ. ಆ ಅವಧಿಯಲ್ಲಿ 14,000 ಕ್ಕೂ ಕಡಿಮೆ ಅರ್ಜಿಗಳು ಸಲ್ಲಿಕೆಯಾದವು. ನಂತರ ಆ ಶುಲ್ಕವನ್ನು ಶೇ. 2ಕ್ಕೆ ಇಳಿಕೆ ಮಾಡಲಾಯಿತು. ಹೀಗಾದರೂ ನಿರೀಕ್ಷಿತ ಮಟ್ಟದಲ್ಲಿ ಬಿ-ಖಾತಾ ಆಸ್ತಿ ಮಾಲೀಕರು ಎ-ಖಾತಾಗಳಿಗೆ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿಲ್ಲ. ಇದರಿಂದ ಯೋಜನೆಗೆ ಹಿನ್ನಡೆ ಆದಂತಾಗಿದೆ.

ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಜಿಬಿಎ ಮತ್ತೊಮ್ಮೆ ಮತ್ತಷ್ಟು ರಿಯಾಯಿತಿ ಘೋಷಿಸಿ ಖಾತಾ ಪರಿವರ್ತನೆಗೆ ಮಾಲೀಕರನ್ನು ಸೆಳೆಯಲು ಆಸಕ್ತಿ ಹೊಂದಿಲ್ಲ. ಉತ್ತರ ನಗರ ಪಾಲಿಕೆ 2026-27ರ ಬಜೆಟ್ ವೆಚ್ಚವು 4,300 ಕೋಟಿ ರೂ.ಗೂ ಅಧಿಕವಾಗಿತ್ತು. ಅದರಲ್ಲಿ 680 ಕೋಟಿ ರೂಪಾಯಿ ಬಿ ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮಾಡಿದ್ದರಿಂದ ಬಂದಿದೆ. ಆರಂಭದಲ್ಲಿ ಪಾಲಿಕೆಗಳಿಗೆ ಉತ್ತಮ ಆದಾಯ ಬಂತಾದರೂ ಇತ್ತೀಚೆಗೆ ನಿರೀಕ್ಷೆಯಂತೆ ಅರ್ಜಿಗಳ ಸಲ್ಲಿಕೆ ಆಗದೇ ಆದಾಯ ಕಡಿಮೆ ಆಗಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+