ಜನವರಿ 8, 9 ರಂದು ಆಟೋ ಮುಷ್ಕರ, ಸಂಚಾರ ಸ್ಥಗಿತ?
ಬೆಂಗಳೂರು, ಜನವರಿ 02 : ಆಟೋ ರಿಕ್ಷಾ ಚಾಲಕರ ಐಕ್ಯ ಹೋರಾಟ ಸಮಿತಿ ಎರಡು ದಿನಗಳ ಕಾಲ ಆಟೋ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ದಿನ ಬೆಂಗಳೂರು ನಗರದಲ್ಲಿ ಆಟೋ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ.
ಜನವರಿ 8 ಮಂಗಳವಾರ ಮತ್ತು 9ರ ಬುಧವಾರ ಎರಡು ದಿನಗಳ ಕಾಲ ಮುಷ್ಕರ ನಡೆಸುವುದಾಗಿ ಆಟೋ ರಿಕ್ಷಾ ಚಾಲಕರ ಐಕ್ಯ ಹೋಟಾರ ಸಮಿತಿ ಹೇಳಿದೆ. ಈಗಾಗಲೇ ನಗರದ ಆಟೋಗಳ ಮೇಲೆ ಮುಷ್ಕರದ ಕುರಿತು ಪೋಸ್ಟರ್‌ಗಳನ್ನು ಹಚ್ಚಲಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸಲಿರುವ ಆಟೋ ಚಾಲಕರು, ನಗರದ ಫ್ರೀಡಂ ಪಾರ್ಕ್ ನಲ್ಲಿ ಬಹೃತ್ ಪ್ರತಿಭಟನೆ ನಡೆಸಲಿದ್ದಾರೆ. 30 ಸಾವಿರ ಹೊಸ ಆಟೋಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ.

ಆಟೋ ಚಾಲಕರ ಬೇಡಿಕೆಗಳು
* 30 ಸಾವಿರ ಹೊಸ ಆಟೋ ರಿಕ್ಷಾ ರಹದಾರಿ ವಿರೋಧಿಸಿ
* ಮೋಟಾರು ವಾಹನ ತಿದ್ದುಪಡಿ ಮಸೂದೆ 2017 ಜಾರಿಗೊಳಿಸದಂತೆ ಒತ್ತಾಯಿಸಿ
* ದುಬಾರಿ ಆರ್ ಟಿಓ ಶುಲ್ಕ ಮತ್ತು ಆಟೋ ವಿಮೆ ಮೊತ್ತ ಏರಿಕೆ ವಿರೋಧಿಸಿ
* ಆಟೋ ರಿಕ್ಷಾ ಚಾಲಕರ ವಸತಿಗೆ ಒತ್ತಾಯಿಸಿ
* 60 ವರ್ಷ ತುಂಬಿದ ಆಟೋ ಚಾಲಕರಿಗೆ ಪಿಂಚಣಿ ನೀಡುವಂತೆ ಆಗ್ರಹ
* ಕಾನೂರು ಬಾಹಿರ ದರಗಳನ್ನು ಪಡೆಯುತ್ತಿರುವ ಓಲಾ ಊಬರ್ ತಿರಸ್ಕರಿಸಲು ಒತ್ತಾಯಿಸಿ












Click it and Unblock the Notifications