ಬೆಂಗಳೂರು ಪಟಾಕಿ ದುರಂತ: ಮತ್ತೊಬ್ಬ ವ್ಯಕ್ತಿ ಸಾವು, ಮೃತರ ಸಂಖ್ಯೆ 17ಕ್ಕೆ ಏರಿಕೆ
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರಿನ ಅತ್ತಿಬೆಲೆಯಲ್ಲಿನ ಪಟಾಕಿ ದುರಂತ ನಡೆದು ವಾರಗಳು ಕಳೆಯುತ್ತಾ ಬಂದರೂ ಸಹಿತ ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ವೆಂಕಟೇಶ್ ಎಂಬುವವರ ಬಳಿಕ ಬುಧವಾರ ಬೆಳಗಿನ ಜಾವ ಮತ್ತೊಬ್ಬ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 17ಕ್ಕೆ ಏರಿಕೆ ಆಗಿದೆ.
ಅತ್ತಿಬೆಲೆ ಪಾಟಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದಲ್ಲಿ ಬುಧವಾರ ಬೆಳಗಿನ ಜಾವ ಮತ್ತೊಬ್ಬರು ಮೃತಪಟ್ಟಿದ್ದು ಅವರನ್ನು ರಾಜೇಶ್ (19) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಪರಿಣಾಮ ಅವರನ್ನು ಹತ್ತಿರದ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಅರವಿಂದ್ ಕಸ್ತೂರಿ ಅವರು ಹೇಳುವಂತೆ 19 ವರ್ಷದ ಯುವಕ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾದರೂ ಸಹಿತ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ತಿಳಿಸಿದರು.
ದುರಂತದಲ್ಲಿ 14 ಮಂದಿ ಸ್ಥಳದಲ್ಲೇ ಸಾವು
ಘಟನೆಯಲ್ಲಿ ಮೃತ ರಾಜೇಶ್ ಅವರ ಇನ್ಹಲೇಷನ್ ಸುಟ್ಟಿದೆ. ಅಲ್ಲದೇ ಶ್ವಾಸನಾಳವು ಗಾಯಗೊಂಡಿದ್ದರು. ತೀವ್ರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಿಸಲಿಲ್ಲ ಎಂದರು. ಬಾಲಾಜಿ ಟ್ರೇಡರ್ಸ್‌ಗೆ ಸೇರಿದ ಅತ್ತಿಬೆಲೆ ಈ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ದುರಂತ ಸಂಭವಿಸಿತ್ತು. ಈ ಪಟಾಕಿ ಅಪಘಾತದಲ್ಲಿ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಹತ್ತು ದಿನಗಳ ಹಿಂದಎ ನಡೆದಿತ್ತು.
ಪಟಾಕಿ ಅಂಗಡಿ ಮಾಲೀಕನ ಪುತ್ರ ಹಾಗೂ ಪ್ರಕರಣದ ಮೂರನೇ ಆರೋಪಿ ನವೀನ್ ರೆಡ್ಡಿ ಅವರಿಗೂ ಸುಟ್ಟಗಾಯಗಳಾಗಿವೆ. ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ವೆಂಕಟೇಶ್ ಸಾವು
ಇದೇ ಘಟನೆಯಲ್ಲಿ ವೆಂಕಟೇಶ್ (23) ಎಂಬುವವರು ಪಟಾಕಿ ತರಲು ಹೋಗಿ ಗಾಯಗೊಂಡಿದ್ದರು. ಅವರನ್ನು ಇದೇ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಅಕ್ಟೋಬರ್ 12 ರಂದು ನಿಧನರಾದರು. ಮೃತರ ಪೋಷಕರು ರಾಜ್ಯ ಸರ್ಕಾರವಾಗಲಿ, ತಮಿಳುನಾಡು ಸರ್ಕಾರವಾಗಲಿ ನಮ್ಮ ಸಹಾಯಕ್ಕೆ ಬರಲಿಲ್ಲ. ಯಾರ ನೆರವು ನಮಗೆ ಸಿಲಿಲ್ಲ. ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪ ಮಾಡಿದ್ದರು.
ಇನ್ನೂ ಪಟಾಕಿ ದಾಸ್ತಾನು ಮಾಡಿದ್ದ ಮಳಿಗೆಗಳು/ಗೋದಾಮಿನಲ್ಲಿ ಬೆಂಕಿ ಅವಘಡಗಳು ಸಂಭವಿಸಿವೆ. ಅತ್ತಿಬೆಲೆ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಕಳೆದ ಮಂಗಳವಾರ ಕರ್ನಾಟಕ ಸರ್ಕಾರವು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications