Karnataka Assembly Election 2023 : ಜೆಡಿಎಸ್‌ಗೆ ಆಟವಾಡಲು ಬಿಡಲ್ಲ, ಅವರ ಜತೆ ಕೈ ಜೋಡಿಸಲ್ಲ: ಸಿಎಂ ಬೊಮ್ಮಾಯಿ
ಬಿಜೆಪಿ ಚುನಾವಣೆ ಆಟದಲ್ಲಿ ಗೆಲ್ಲಲ್ಲೆಂದೆ ಆಟವಾಡುತ್ತಿದೆ ಗೆಲ್ಲವು ವಿಶ್ವಾಸ ವ್ಯಕ್ತಪಡಿಸಿದ ಜೆಡಿಎಸ್‌ಗೆ ಟಾಂಗ್ ನೀಡಿದ ಬಸವರಾಜ ಬೊಮ್ಮಾಯಿ.
ಬೆಂಗಳೂರು, ಫೆಬ್ರವರಿ 08: ಬಿಜೆಪಿ ಚುನಾವಣೆ ಆಟದಲ್ಲಿ ಗೆಲ್ಲಲ್ಲೆಂದೆ ಆಟವಾಡುತ್ತಿದೆ. ಈ ವೇಳೆ ಜೆಡಿಎಸ್ ಪಕ್ಷಕ್ಕೆ ತನ್ನ ಆಟ ಆಡಲು ಅವಕಾಶ ನೀಡಬಾರದು ಎಂಬ ಉದ್ದೇಶವಿರುವ ಕಾರಣ ಬಿಜೆಪಿ ಜೆಡಿಎಸ್ ಪಕ್ಷದ ಜೊತೆಗೆ ಯಾವುದೇ ಕಾರಣಕ್ಕೂ ಕೈ ಜೋಡಿಸಲ್ಲ ಮೈತ್ರಿ ಕುರಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬೆಂಗಳೂರು ಟೌನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರಲಿದೆ. ನಾವು ಈ ವರ್ಷ 130 ಸ್ಥಾನ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 2004ರಿಂದ ಅಭಿವೃದ್ಧಿಯತ್ತ ಸಾಗಿದ ಹಾಗೂ ಸಾಮಾಜಿಕ ಕಳಕಳಿಯ ಪಕ್ಷ ನಮ್ಮ ಬಿಜೆಪಿ. ಆದರೆ ನಾವು ಸ್ಪಷ್ಟ ಬಹುಮತ ಹೊಂದಿಲ್ಲ. ಆದರೆ ಈ ಭಾರಿ ಅಗತ್ಯದಷ್ಟು ಸ್ಥಾನ ಲಭಿಸಲಿವೆ.
ಈ ಚುನಾವಣೆ ಎಂಬ ಆಟದಲ್ಲಿ ಸೋಲದೇ ಇರಲು ಆಟವಾಡುವುದು, ಗೆಲ್ಲಲೇಬೇಕೆಂದು ಆಡುವುದು ಇದೆ. ಬಿಜೆಪಿ ಮಾತ್ರ ವಿಜಯ ಸಾಧಿಸಲೆಂದೇ ಆಟವಾಡುತ್ತದೆ ಎಂದು ಅವರು ಪುನರಚ್ಚರಿಸಿದರು.

ನ್ಯಾಯಾಲಯದ ಅಂಗಳದಲ್ಲಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಮಿಸಲಾತಿ ಬಗ್ಗೆ ಏನನ್ನು ಹೇಳಲಾಗುವುದಿಲ್ಲ. ಆದರೆ ಆ ಸಮುದಾಯಗಳಿಗೆ ಪ್ರತ್ಯೇಕ ಪ್ರವರ್ಗದಲ್ಲಿ ಅವಕಾಶ ನೀಡಬಹುದಾದ ಪ್ರಯತ್ನ ಸರ್ಕಾರ ಮಾಡುತ್ತದೆ. ಲಿಂಗಾಯತ ಸಮುದಾಯ ಅತ್ಯಂತ ಪ್ರಬಲ, ಪ್ರಬುದ್ಧ ದಸಮುದಾಯವಾಗಿದೆ. ನಿಯಮದಂತೆ ಪ್ರತಿ ಒಂದು ದಶಕಕ್ಕೊಮ್ಮೆ ಮೀಸಲಾತಿ ಪರಿಷ್ಕರಣೆಯನ್ನು ಬಿಜೆಪಿ ಮಾಡುತ್ತಿದೆ ಎಂದರು.
ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಬಗ್ಗೆ ಆರೋಪ ಮಾಡಿದರೆ ಹೊರತು ಒಂದೇ ಒಂದು ದಾಖಲೆ ಸಹ ನೀಡಿಲ್ಲ. ಕೈ ನಾಯಕರ ಪರ ಮಾತನಾಡುವ ಗುತ್ತಿಗೆದಾರರ ಸಂಘದವರು ದಾಖಲೆ ನೀಡಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಮಾರು 60ಕ್ಕೂ ಹೆಚ್ಚು ಕೇಸುಗಳಿವೆ ಎಂದು ತಿರುಗೇಟು ನೀಡಿದರು.
ಸಿದ್ದು ಬಿಎಸ್‌ವೈಗೆ ಋಣಿಯಾಗಿರಬೇಕು!
ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಪಕ್ಕೆ ಡಾ.ಜಿ.ಪರಮೇಶ್ವರ್ ಅವರು ಉತ್ತರಿಸಬೇಕು. ಅವರ ಅವಧಿಯಲ್ಲಿ ಪರಮೇಶ್ವರ್ ಹಾಗೂ ಖರ್ಗೆ ಅವರಿಗೆ ಯಾವ ರೀತಿಯ ಅನ್ಯಾಯವಾಗಿದೆ ಎಂದು ಅವರೇ ತಿಳಿಸಬೇಕು. ಸಿದ್ದರಾಮಯ್ಯ ಯಡಿಯೂರಪ್ಪ ಅವರಿಗೆ ಋಣಿಯಾಗಿರಬೇಕು. ಅವರ ಭಾವಚಿತ್ರ ಇಟ್ಟುಕೊಳ್ಳಬೇಕು. ಅವರು ಕೆಜೆಪಿ ಸ್ಥಾಪಿಸದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ.

ಇನ್ನು ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್ ಗೆ ಯಾವುದೇ ಲಾಭವಾಗುವುದಿಲ್ಲ. ವೈಯಕ್ತಿಕ ಟೀಕೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ವೃದ್ದಿಯಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಕುರಿತು ಕಿಡಿಕಾರಿದರು.
ದೇಶದ ಇತರ ನಗರಗಳಾದ ಚನೈ, ಮುಂಬೈನಲ್ಲಿ ಸ್ವಲ್ಪ ಮಳೆಯಾದರೂ ಮುಳುಗುತ್ತವೆ. ಆದರೆ, ಬೆಂಗಳೂರಿನಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಸಮಸ್ಯೆಯಾಗಿದೆ ಅದನ್ನು ಎರಡು ದಿನದಲ್ಲಿ ಸಮಸ್ಯೆ ಪರಿಹರಿಸಿದ್ದೇವೆ. ಮುಂದಿನ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಮುಂದುವರಿಯಲಿದೆ, ಜನರು ಬಿಜೆಪಿ ಬೆಂಬಲಿಸಬೇಕು ಎಂದು ತಾವೇ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ವಿಶ್ವಾಸದಿಂದ ಹೇಳಿದರು.












Click it and Unblock the Notifications