ಹಲ್ಲೆ ಪ್ರಕರಣ: ನಟ ದುನಿಯಾ ವಿಜಯ್ ಬಂಧನ, ಬಿಡುಗಡೆ

ಮಾಸ್ತಿಗುಡಿ ನಿರ್ಮಾಪಕ ಪಿ ಸುಂದರ್ ಅವರ ಸಂಬಂಧಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಅವರನ್ನು ಬಂಧಿಸಲಾಗಿತ್ತು. ನಂತರ ಸ್ಟೇಷನ್ ಬೇಲ್ ಪಡೆದು ಠಾಣೆಯಿಂದ ಹೊರಬಂದಿದ್ದಾರೆ.

ಬೆಂಗಳೂರು, ನವೆಂಬರ್ 15: ಮಾಸ್ತಿಗುಡಿ ನಿರ್ಮಾಪಕ ಪಿ ಸುಂದರ್ ಅವರ ಸಂಬಂಧಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿರುವ ಸುದ್ದಿ ಫಿಲ್ಮಿಬೀಟ್ ನಲ್ಲಿ ಓದಿರುತ್ತೀರಿ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ ವಿಜಯ್ ಅವರನ್ನು ಬಂಧಿಸಲಾಗಿತ್ತು. ನಂತರ ಸ್ಟೇಷನ್ ಬೇಲ್ ಪಡೆದು ಠಾಣೆಯಿಂದ ಹೊರಬಂದಿದ್ದಾರೆ. [ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ ಏಕೆ!?]

Assault Case : Duniya Vijay arrested gets Station Bail

ಹಲ್ಲೆಗೊಳಗಾದ ವ್ಯಕ್ತಿ ಜಯರಾಮ್ ಅವರ ಸಂಬಂಧಿಕರು ನೀಡಿದ ದೂರಿದಂತೆ ಚನ್ನಮ್ಮನಕೆರೆ ಆಚ್ಚುಕಟ್ಟು ಠಾಣೆಯಲ್ಲಿ ವಿಜಯ್ ವಿರುದ್ಧ ಐಪಿಸಿ 323, 504, 506, 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್'ಐಆರ್ ಹಾಕಲಾಗಿತ್ತು.

ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಪಿ.ಸುಂದರ್‌ ಅವರ ಅಣ್ಣನ ಮಾವನ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಬಂಧನಕ್ಕೊಳಗಾಗಿದ್ದ ವಿಜಯ್ ಅವರಿಗೆ ಠಾಣೆಯಲ್ಲೇ ಜಾಮೀನು ಸಿಕ್ಕಿದೆ. ತನಿಖಾಧಿಕಾರಿಗಳು ಕರೆದಾಗಲೆಲ್ಲಾ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿದೆ. ಸಿನಿಮಾದಲ್ಲಿ ಹೀರೋ ಆಗಿರುವುದು ನೀವು ಇತರರಿಗೆ ಮಾದರಿಯಾಗಿರಬೇಕು ಎಂದು ಠಾಣಾಧಿಕಾರಿಗಳು ವಿಜಯ್ ಅವರಿಗೆ ಬುದ್ಧಿವಾದ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+